ಬೆಂಗಳೂರು: ರಾಜ್ಯ ಸರ್ಕಾರದಿಂದ ವಿಧಾನ ಮಂಡಲದ ಅಧಿವೇಶನದಲ್ಲಿ ಸಿವಿಲ್ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ಅಧಿನಿಯಮ 2023 ಅನ್ನು ಮಂಡಿಸಿ ಅಂಗೀಕಾರ ಪಡೆದಿದೆ. ಇದಕ್ಕೆ ರಾಷ್ಟ್ರಪತಿಗಳಿಂದಲೂ ಅಂಗೀಕಾರ ದೊರೆತಿದೆ. ಹೀಗಾಗಿ ಇನ್ಮುಂದೆ ರಾಜ್ಯದಲ್ಲಿ ಆರ್ಥಿಕವಾಗಿ ದುರ್ಬಲರಾದವರ ವ್ಯಾಜ್ಯಗಳು 6 ತಿಂಗಳ ಕಾಲಮಿತಿಯಲ್ಲಿಯೇ ಇತ್ಯರ್ಥವಾಗಲಿದೆ.

ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ ಪಾಟೀಲ್ ಅವರು, ದೇಶದ ಯಾವುದೇ ರಾಜ್ಯದಲ್ಲಿಯೂ ಈ ರೀತಿ ಬಡವರ ವ್ಯಾಜ್ಯ ತ್ವರಿತ ಪರಿಹಾರಕ್ಕೆ ಮಸೂದೆಗಳು ಮಂಡನೆಯಾಗಿಲ್ಲ. ಬಡವರು, ಸಣ್ಣ ರೈತರು ಹಣ ಖರ್ಚು ಮಾಡಿಕೊಂಡು ನ್ಯಾಯದಾನ ಪಡೆಯಲು ವರ್ಷಗಟ್ಟಲೆ ನ್ಯಾಯಾಲಯಕ್ಕೆ ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ಇದನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ‘ಪಾಕಿಸ್ತಾನದ ಪರ’ ಘೋಷಣೆ: ‘FSL ವರದಿ’ ಬಹಿರಂಗಕ್ಕೆ ಆರ್.ಅಶೋಕ್ ಒತ್ತಾಯ

ಬಿಜೆಪಿ ‘Modi ka Parivar’ ಅಭಿಯಾನ ಆರಂಭ : “ಮೋದಿಗೆ ಕುಟುಂಬವಿಲ್ಲ” ಲಾಲು ಹೇಳಿಕೆಗೆ ತಿರುಗೇಟು

Share.
Exit mobile version