ಸುಭಾಷಿತ :

Tuesday, February 18 , 2020 1:51 PM

ಈ ಮೂರು ವಿಧಾನಗಳಿಂದ ಮುಖದಲ್ಲಿ ಫ್ರೆಶ್ ನೆಸ್ ದಿನವಿಡೀ ಇರುವಂತೆ ನೋಡಿಕೊಳ್ಳಿ…


Tuesday, February 4th, 2020 10:50 am

ಸ್ಪೆಷಲ್ ಡೆಸ್ಕ್ : ಹೊರಗಡೆ ಅಥವಾ ಕಚೇರಿಗೆ ಹೋಗಿ ಕೆಲಸ ಮಾಡುವವರು ಪ್ರತಿಯೊಬ್ಬರೂ ತಮ್ಮ ಮುಖ ಇಡೀ ದಿನ ತಾಜಾತನದಿಂದ ಕೂಡಿದರೆ ಎಷ್ಟೊಂದು ಚೆನ್ನಾಗಿರುತ್ತದೆ ಎಂದು ಅಂದುಕೊಳ್ಳುತ್ತಾರೆ. ಆದರೆ ಅದು ಸಾಧ್ಯನೇ ಇಲ್ಲ ಎಂದುಕೊಳ್ಳುವಷ್ಟು ಮುಖ ಡಲ್ ಆಗುತ್ತದೆ.

ನಿಮಗೆ ಫ್ರೆಶ್ ತ್ವಚೆ ಪಡೆಯಲೇಬೇಕು ಎಂದು ಅನಿಸಿದರೆ ಈ ವಿಧಾನಗಳನ್ನು ನೀವು ಟ್ರೈ ಮಾಡಬಹುದು..

ಮೂರು ಚಮಚ ಮೊಸರು, ಅರ್ಧ ಕಪ್ ಓಟ್ಸ್, ಎರಡು ಚಮಚ ಜೇನು, ಚಿಟಿಕೆ ಕಿತ್ತಳೆ ರಸ ಮಿಶ್ರಣ ಮಾಡಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಂಡು 25 ನಿಮಿಷ ಒಣಗಲು ಬಿಟ್ಟು ಬಳಿಕ ತೊಳೆಯಿರಿ. ಓಟ್ಸ್ ಮುಖದಲ್ಲಿರುವ ಸತ್ತ ಚರ್ಮ ಕೋಶಗಳನ್ನು ನಿವಾರಿಸಿದರೆ, ಕಿತ್ತಳೆ ಚರ್ಮವನ್ನು ಬಿಗಿಗೊಳಿಸುತ್ತದೆ. ಜೇನು ಮುಖದಲ್ಲಿ ತೇವಾಂಶ ತುಂಬುತ್ತದೆ. ಈ ಮೂಲಕ ಮುಖದಲ್ಲಿ ಫ್ರೆಶ್‌ನೆಸ್ ಕಂಗೊಳಿಸುತ್ತದೆ.

ಲಿಂಬೆ ರಸಕ್ಕೆ ಆಲ್ಮೋಂಡ್ ಎಣ್ಣೆ ಮತ್ತು ಸ್ವಲ್ಪ ಉಪ್ಪು ಬೆರೆಸಿ ಮುಖಕ್ಕೆ ಹತ್ತಿಯಿಂದ ಹಚ್ಚಿ. ಸ್ವಲ್ಪ ಹೊತ್ತಾದ ಬಳಿಕ ನೀರಿನಿಂದ ತೊಳೆಯಿರಿ. ಇದರಿಂದ ಚರ್ಮದಲ್ಲಿರುವ ಸತ್ತ ಕೋಶಗಳನ್ನು ನಿವಾರಿಸುತ್ತದೆ. ಮುಖದಲ್ಲಿ ಫ್ರೆಶ್‌ನೆಸ್ ಉಳಿದುಕೊಳ್ಳುತ್ತದೆ.

ಕಡ್ಲೆ ಹಿಟ್ಟು, ಅರಿಶಿನ ಪುಡಿ ಮತ್ತು ತೆಂಗಿನ ಹಾಲನ್ನು ಜೊತೆಯಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. 15 ನಿಮಿಷ ಬಿಟ್ಟು ತಣ್ಣೀರಿನಿಂದ ಮುಖ ತೊಳೆಯಿರಿ. ಈ ಆಯುರ್ವೇದಿಕ್ ವಿಧಾನದಿಂದ ಮುಖ ಮತ್ತು ತ್ವಚೆ ಹೊಳೆಯುತ್ತದೆ. ಇದರಿಂದ ಸ್ಕಿನ್ ನ ಮೇಲಿರುವ ಎಲ್ಲಾ ಕಲೆ ನಿವಾರಣೆ ಆಗುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions