ಬೆಂಗಳೂರು : ಈಗಿನ ದುಬಾರಿ ದುನಿಯಾದಲ್ಲಿ ಯಾವುದರ ಬೆಲೆ ಕೇಳಿದ್ರೂ ತಲೆ ಗಿರ್ ಅನ್ನುತ್ತೆ. ಅದರಲ್ಲೂ ಡೀಸೆಲ್, ಪೆಟ್ರೋಲ್ ಬೆಲೆಯಂತೂ ಕೇಳಲೇಬೇಡಿ. ಆದರೆ ಇಲ್ಲೊಬ್ಬರು ಅಂಕಲ್ ಉಚಿತವಾಗಿ ಪೆಟ್ರೋಲ್ ನೀಡಿ ಸುದ್ದಿಯಲ್ಲಿದ್ದಾರೆ.
ಹೌದು, ಸಿಲಿಕಾನ್ ಸಿಟಿಯಲ್ಲಿ 14 ವರ್ಷದಿಂದ ಫ್ರೀ ಪೆಟ್ರೋಲ್ ಕೊಡ್ತಿದ್ದಾರೆ ಈ ಅಂಕಲ್..ನಗರದಲ್ಲಿ ಪೆಟ್ರೋಲ್ ಅಂಕಲ್ ಎಂದೇ ಜನಪ್ರಿಯತೆ ಪಡೆದಿರುವ ಅಂಕಲ್ ಮಹಮದ್ ಆರೀಫ್ ಸೇಠ್ ಉಚಿತವಾಗಿ ಪೆಟ್ರೋಲ್ ನೀಡುತ್ತಿದ್ದಾರೆ. 2008 ರಿಂದಲೇ ಇವರು ಉಚಿತವಾಗಿ ಪೆಟ್ರೋಲ್ ನೀಡುತ್ತಿದ್ದಾರಂತೆ.
ಯಾಕೆ ಗೊತ್ತಾ..?
ಒಮ್ಮೆ ಈ ಅಂಕಲ್ ನಮಾಜ್ ಮಾಡಿ ಬರುವ ಸಂದರ್ಭದಲ್ಲಿ ಗಾಡಿಯಲ್ಲಿ ಪೆಟ್ರೋಲ್ ಖಾಲಿ ಆಗಿತ್ತಂತೆ. ಇದರಿಂದ ಬಹಳ ತೊಂದರೆ ಅನುಭವಿಸಿದ್ದರಂತೆ. ಅಂದೇ ಪಣತೊಟ್ಟ ಅಂಕಲ್ ನಡು ರಸ್ತೆಯಲ್ಲಿ ಪೆಟ್ರೋಲ್ ಖಾಲಿಯಾಗಿ ನಾನು ಪಟ್ಟ ಪಾಡು ಯಾರಿಗೂ ಬರಬಾರದೆಂದು ಅಂದಿನಿಂದ ದಾರಿಯಲ್ಲಿ ಪೆಟ್ರೋಲ್ ನೀಡುವ ಕೆಲಸ ಶುರು ಮಾಡಿದ್ದಾರೆ.
ರಾತ್ರಿ 10 ಗಂಟೆಯಿಂದ ಮಧ್ಯರಾತ್ರಿವರೆಗೆ ಪೆಟ್ರೋಲ್ ಖಾಲಿಯಾಗಿ ಪರಿತಪಿಸುವವರಿಗೆ ಇವರು ಸಹಾಯ ಮಾಡುತ್ತಿದ್ದಾರೆ. ಯಾರು ಕಷ್ಟದಲ್ಲಿ ಇರುತ್ತಾರೋ ಅವರಿಗೆ ಸಹಾಯ ಮಾಡ್ತಾರಂತೆ ಈ ಅಂಕಲ್.
Pan card update: ಪಾನ್ ಕಾರ್ಡ್ ನಲ್ಲಿ ನಿಮ್ಮ ಹೆಸರನ್ನು ಬದಲಿಸಲು ಹಂತ ಹಂತದ ಮಾಹಿತಿ ಇಲ್ಲಿದೆ
BREAKING NEWS : ಕನ್ನಡದ ಹಿರಿಯ ಕವಿ, ನಾಡೋಜ ‘ಚೆನ್ನವೀರ ಕಣವಿ’ ಆರೋಗ್ಯ ಸ್ಥಿತಿ ಮತ್ತಷ್ಟು ಚಿಂತಾಜನಕ