ಬಳ್ಳಾರಿ : ಜಿಲ್ಲಾ ಕೌಶಲ್ಯ ಅಭಿವೃದ್ಧಿ ಕಚೇರಿಯಿಂದ ದಿ ಫ್ಯಾಮಿಲಿ ಪಿಲ್ಲರ್ ಅಲೈಯನ್ಸ್ ಸಂಸ್ಥೆಯು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ, ಮನೆ ಮತ್ತು ಆಸ್ಪತ್ರೆ ಆರೈಕೆ ಮಾಡುವವರಿಗೆ ಉಚಿತ ನರ್ಸಿಂಗ್ ತರಬೇತಿ ಮತ್ತು ಉದ್ಯೋಗ ಕಲ್ಪಿಸಿಕೊಡಲು ಅರ್ಹ ಯುವಕ ಮತ್ತು ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ಒಟ್ಟು 50 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದ್ದು, ಮೊದಲು ಬಂದವರಿಗೆ ಆದ್ಯತೆ ಇರುತ್ತದೆ.ತರಬೇತಿಯಲ್ಲಿ 30 ದಿನಗಳ ಪಠ್ಯ ಮತ್ತು 60 ದಿನಗಳ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ. ಅಭ್ಯರ್ಥಿಗಳ ವಯೋಮಿತಿ 18-42 ಒಳಗಿರಬೇಕು, ಕನಿಷ್ಠ 8 ನೇ ತರಗತಿ ಉತ್ತೀರ್ಣರಾಗಿರಬೇಕು, ಸರಳ ಇಂಗ್ಲೀಷ್ ಗ್ರಹಿಕಾ ಸಾಮಥ್ರ್ಯ ಹೊಂದಿರಬೇಕು.
ಹೆಚ್ಚಿನ ಮಾಹಿತಿಗಾಗಿ ನಗರದ ಎಸ್.ಪಿ.ವೃತ್ತ, ಪಾರ್ವತಿನಗರದ ಬಸವಭವನ ರಸ್ತೆಯ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಕಚೇರಿ ಅಥವಾ ದೂ.08392-27398 9019847029, 9964502514, 8073852104, 984444958 ಗೆ ಸಂಪಕಿಸಬಹುದು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಬಸವರಾಜಪ್ಪ ಅವರು ತಿಳಿಸಿದ್ದಾರೆ.
ನಾಳೆಯಿಂದ ಬೆಂಗಳೂರಿನಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯಾವಳಿ: ನಗರದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್
ಬೆಂಗಳೂರು : 16ನೇ ಆವೃತ್ತಿಯ 5ನೇ ಐಪಿಎಲ್ ಪಂದ್ಯವೂ ಚಿನ್ನಾಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಂದ್ಯ ವೀಕ್ಷಣೆಗೆ ಹೆಚ್ಚಿನ ಜನರು ಆಗಮಿಸುವ ನಿಟ್ಟಿನಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ನಡೆಯಲಿದೆ.
ನಾಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ 2023 16ನೇ ಆವೃತ್ತಿಯ 5ನೇ ಪಂದ್ಯ ನಡೆಯಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಸೆಣಸಲಿವೆ. ಆರ್ಸಿಬಿ ಮೊದಲ ಪಂದ್ಯವನ್ನು ತವರಿನಲ್ಲಿ ಆಡುವ ಮೂಲಕ ಕಪ್ ಗೆಲ್ಲುವ ಅಭಿಯಾನವನ್ನು ಆರಂಭಿಸಲಿದೆ. ಹೀಗಾಗಿ ನಗರದಾದ್ಯಂತ ಹೆಚ್ಚಿನ ಕ್ರಿಕೆಟ್ ಅಭಿಮಾನಿಗಳು ಆಗಮಿಸಲಿದ್ದಾರೆ. ಈ ನಿಟ್ಟಿನಲ್ಲಿ ನಾಳೆ ಪಂದ್ಯಕ್ಕೆ ಪೊಲೀಸರಿಂದ ಹದ್ದಿನ ಕಣ್ಣಿಟ್ಟಿದ್ದು ಭದ್ರತೆಗಾಗಿ 612 ಜನ ಪೊಲೀಸ್ ಸಿಬ್ಬಂದಿಯನ್ನ ನಿಯೋಜಿಸಲಾಗಿದೆ.
ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ಭದ್ರತೆ ವಹಿಸಲಾಗಿದ್ದು ಇಬ್ಬರು ಡಿಸಿಪಿಗಳು, 10 ಮಂದಿ ಎಸಿಪಿ, 30 ಇನ್ಸ್ಪೆಕ್ಟರ್ ಗಳು, 78 ಪಿಎಸ್ಐ,16 ಎಎಸ್ಐ, 51 ಮಹಿಳಾ ಸಿಬ್ಬಂದಿ, ಹಾಗೂ ಹೆಡ್ ಕಾನ್ಸ್ಟೇಬಲ್ಸ್ , ಕಾನ್ಸ್ಟೇಬಲ್ಸ್ ಸಹಿತ 412 ಜನ ಸೇರಿದಂತೆ ಒಟ್ಟು 612 ಜನ ಸಿಬ್ಬಂದಿ ಭದ್ರತೆಗೆ ನಿಯೋಜನೆಗೊಂಡಿದ್ದಾರೆ.
Skin Care : ಬೇಸಿಗೆಯಲ್ಲಿ ಮುಖದ ‘ಕಾಂತಿ’ ಹೆಚ್ಚಿಸಲು ಇಲ್ಲಿವೆ ಸಿಂಪಲ್ ‘ಮನೆಮದ್ದುಗಳು’
BIGG NEWS : ಪಂಚರತ್ನ ಯಾತ್ರೆ ವೇಳೆ ʼ ಮಾಜಿ ಸಿಎಂ ಹೆಚ್‌ಡಿಕೆಗೆ ಮುತ್ತುಕೊಟ್ಟ ತೆನೆ ಕಾರ್ಯಕರ್ತೆʼ | Former CM HDK