ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ಸ್ಕಾಟ್ಲೆಂಡ್‌ ತಂಡದ ಮಾಜಿ ನಾಯಕ ಕೈಲ್ ಕೊಯೆಟ್ಜರ್ ಗುರುವಾರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ನಿವೃತ್ತಿ ಘೋಷಿಸಿದ್ದಾರೆ. ಮೂರು ವಾರಗಳ ಹಿಂದೆ ಕೊಯೆಟ್ಜರ್ ನಾಯಕ ಸ್ಥಾನದಿಂದ ಕೆಳಗಿಳಿದಿದ್ದರು. ಸಧ್ಯ ಟಿ20ಗೆ ವಿದಾಯ ಹೇಳಲು ನಿರ್ಧರಿಸಿದರು.

“ನನ್ನ ಕುಟುಂಬದೊಂದಿಗೆ ಹೆಚ್ಚಿನ ಸಮಯವನ್ನ ಕಳೆಯಲು ಮತ್ತು ನನ್ನ ಕೋಚಿಂಗ್ ವೃತ್ತಿಜೀವನದ ಮೇಲೆ ಹೆಚ್ಚು ಗಮನ ಹರಿಸಲು ನಾನು ಟಿ20ಯಿಂದ ಹೊರಗುಳಿಯುತ್ತಿದ್ದೇನೆ” ಎಂದಿದ್ದಾರೆ. ಅಂದ್ಹಾಗೆ, ಟಿ20ಐಗೆ ವಿದಾಯ ಹೇಳಿರುವ ಕೊಯೆಟ್ಜರ್ ಏಕದಿನ ಪಂದ್ಯಕ್ಕೆ ಲಭ್ಯವಿರಲಿದ್ದಾರೆ.

2008ರಲ್ಲಿ ಟಿ20ಐಗೆ ಪದಾರ್ಪಣೆ ಮಾಡಿದ್ದ ಕೈಲ್ ಕೊಯೆಟ್ಜರ್ 70 ಪಂದ್ಯಗಳನ್ನಾಡಿದ್ದು, 1495 ರನ್ ಗಳಿಸಿದ್ದಾರೆ. ಸ್ಕಾಟ್ಲ್ಯಾಂಡ್ನ ಸ್ಟಾರ್ ಬ್ಯಾಟರ್ ಎಂದು ಕರೆಯಲ್ಪಡುವ ಕೊಯೆಟ್ಜರ್, ಟಿ 20ಐನಲ್ಲಿ ವೃತ್ತಿಜೀವನದ ಅತ್ಯುತ್ತಮ 89 ರನ್ ಗಳಿಸಿದ್ದಾರೆ. ಅವರ ಖಾತೆಯಲ್ಲಿ ಆರು ಅರ್ಧ ಶತಕಗಳಿವೆ. ಏಕದಿನ ಪಂದ್ಯಗಳಲ್ಲಿ 76 ಪಂದ್ಯಗಳಿಂದ 2,915 ರನ್ ಗಳಿಸಿರುವ ಕೊಯೆಟ್ಜರ್, 5 ಶತಕಗಳು ಮತ್ತು 20 ಅರ್ಧಶತಕಗಳನ್ನು ಗಳಿಸಿದ್ದಾರೆ. ಏಕದಿನದಲ್ಲಿ ಕೋಟ್ಜರ್ ಅವರ ಗರಿಷ್ಠ ಸ್ಕೋರ್ 156 ರನ್ ಆಗಿದೆ. ಡಿಸೆಂಬರ್ 2020 ರಲ್ಲಿ, ಕೈಲ್ ಕೊಯೆಟ್ಜರ್ ಐಸಿಸಿ ಪುರುಷರ ದಶಕದ ಅಸೋಸಿಯೇಟ್ ಕ್ರಿಕೆಟರ್ ಪ್ರಶಸ್ತಿಯನ್ನ ಗೆದ್ದಿದ್ದಾರೆ.

Share.
Exit mobile version