ಬೆಂಗಳೂರು: ಇಂದು ಮಾಜಿ ಸಚಿವ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಎಂಬುದಾಗಿ ಹೊಸ ಪಕ್ಷವನ್ನು ಘೋಷಣೆ ಮಾಡಿದ್ದಾರೆ. ಅಲ್ಲದೇ ಮುಂದಿನ ಚುನಾವಣೆಯಲ್ಲಿ ಗಂಗಾವತಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವುದಾಗಿಯೂ ಘೋಷಿಸಿದ್ದಾರೆ. ಹಾಗಾದ್ರೇ ಇದು ಬಿಜೆಪಿಗೆ ಮುಳುವಾಗುತ್ತಾ ಎನ್ನುವ ಬಗ್ಗೆ ಅಂಕಿ ಅಂಶಗಳ ಸಹಿದ ಮಾಹಿತಿ ಮುಂದೆ ಓದಿ.

ಇದು ಜನಾರ್ಧನ ರೆಡ್ಡಿ ಘೋಷಿಸಿರುವಂತ ಕೆ ಆರ್ ಪಿಪಿ ಪಕ್ಷದಂತೆ 2013ರಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು, ಬಿಜೆಪಿಗೆ ಸೆಡ್ಡು ಹೊಡೆದು, ಕರ್ನಾಟಕ ಜನತಾ ಪಕ್ಷವನ್ನು ರಚನೆ ಮಾಡಿದ್ದರು. ಅಲ್ಲದೇ ಬಿ.ಶ್ರೀರಾಮುಲು ಕೂಡ ಬಡವರ ರೈತರ ಶ್ರಮಿಕರ ಕಾಂಗ್ರೆಸ್ ಪಕ್ಷವನ್ನು ರಚಿಸಿದ್ದರು.

ಬಿಎಸ್ ಯಡಿಯೂರಪ್ಪ ಹಾಗೂ ಬಿ.ಶ್ರೀರಾಮುಲು ಹೊಸ ಪಕ್ಷ ಘೋಷಿಸಿ, ಆ ಮೂಲಕ ಸ್ಪರ್ಧೆಗೆ 2013ರ ಚುನಾವಣೆಯಲ್ಲಿ ಇಳಿದರೂ, ಅಷ್ಟೇನು ಸೀಟನ್ನು ಪಕ್ಷದಿಂದ ಗೆಲ್ಲಲು ಸಾಧ್ಯವಾಗಲಿಲ್ಲ. ಆದರೇ ಬಿಜೆಪಿಯ ಮತಗಳನ್ನು ಒಡೆಯುವಲ್ಲಿ ಯಶಸ್ವಿಯಾಗಿದ್ದಂತೂ ಸತ್ಯ.

ಈ ಬಗ್ಗೆ ಅಂಕಿ ಅಂಶಗಳ ಮಾಹಿತಿಯನ್ನು ಗಮನಿಸೋದಾದರೇ 2013ರ ಚುನಾವಣೆಯಲ್ಲಿ ಕೆಪಿಜೆ ಪಕ್ಷದಿಂದ ಸ್ಪರ್ಧಿಸಿದ್ದಂತ ಅಭ್ಯರ್ಥಿಗಳು ಶೇ.9.8ರಷ್ಟು ಮತಗಳನ್ನು ಪಡೆದು, 6 ಸೀಟು ಗೆದ್ದಿದ್ದರು. ಜೊತೆಗೆ ಬಿಜೆಪಿಯ ಅಭ್ಯರ್ಥಿಗಳನ್ನು 35ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸೋಲಿಸೋದಕ್ಕೂ ಕಾರಣವಾಗಿತ್ತು.

ಇನ್ನೂ ರಾಮುಲು ನೇತೃತ್ವದ ಬಿ ಎಸ್ ಆರ್ ಸಿ ಪಕ್ಷವು 2013ರ ಚುನಾವಣಎಯಲ್ಲಿ 176 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. ನಾಲ್ಕು ಸೀಟು ಗೆದ್ದರೂ, ಬಿಜೆಪಿ ಗೆಲುವಿಗೆ ಐದಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಅಡ್ಡಿಯಾಗಿತ್ತು. ಅಲ್ಲದೇ ಶೇ.2.7ರಷ್ಟು ಮತಗಳನ್ನು ಪಡೆದಿತ್ತು.

ಹೀಗೆ 2013ರ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಬಿಎಸ್ ಯಡಿಯೂರಪ್ಪ ಹಾಗೂ ಬಿ.ಶ್ರೀರಾಮುಲು ಸ್ಥಾಪಿಸಿದಂತ ಹೊಸ ಪಕ್ಷಗಳೇ ಮುಳುವಾಗಿ, ಬಿಜೆಪಿಯ ಮತಗಳನ್ನು ಡಿವೈಡ್ ಮಾಡೋದಕ್ಕೆ ಕಾರಣವಾಗಿತ್ತು. ಈಗ ಮಾಜಿ ಸಚಿವ ಜನಾರ್ಧನ ರೆಡ್ಡಿ ಹೊಸ ಪಕ್ಷ ಘೋಷಿಸಿ, ಮುಂಬರುವಂತ 2023ರ ವಿಧಾನಸಭಾ ಚುನಾವಣೆಗೆ ಇಳಿಯೋದಕ್ಕೆ ರೆಡಿಯಾಗಿದ್ದಾರೆ. ಈ ಮೂಲಕ ಮತ್ತೆ ಬಿಜೆಪಿಗೆ ಸಂಕಷ್ಟ ಎದುರಾಗಲಿದೆ ಎನ್ನಲಾಗುತ್ತಿದೆ.

BREAKING NEWS: ನಾಳೆ ಕರೋನ ಮಾರ್ಗಸೂಚಿ ಪ್ರಕಟ: ಸಿಎಂ ಬಸವರಾಜ ಬೊಮ್ಮಾಯಿ

BREAKING NEWS: ನಾಳೆ ಕರೋನ ಮಾರ್ಗಸೂಚಿ ಪ್ರಕಟ: ಸಿಎಂ ಬಸವರಾಜ ಬೊಮ್ಮಾಯಿ

Share.
Exit mobile version