ಹುಬ್ಬಳ್ಳಿ: ಸಂಸದ ಪ್ರಜ್ವಲ್ ರೇವಣ್ಣ ಪೆನ್‍ಡ್ರೈವ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಸಿಎಂ ಹೆಚ್‌ ಡಿ ಕುಮಾರಸ್ವಾಮಿ ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ದ ಕಿಡಿಕಾರಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆನ್‍ಡ್ರೈವ್ ಕೇಸ್ ಹಿಂದೆ ಮಹಾನಾಯಕ ಇದ್ದಾರೆ. ಆ ಮಹಾ ನಾಯಕನನ್ನು ಭೇಟಿ ಮಾಡಿದ್ಯಾರು? ಈ ಪ್ರಕರಣದ ವಿರುದ್ಧ ಕಾಂಗ್ರೆಸ್ ಮಹಾನಾಯಕರು ಪ್ರತಿಭಟನೆ ನಡೆಸಿದರು ಅಂತ ಹೇಳಿದರು.

ನಾವು ಅವರನ್ನು ರಕ್ಷಿಸಲು ಹೋಗುವುದಿಲ್ಲ, ನಾವು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಆದರೆ ಸರ್ಕಾರದ ಜವಾಬ್ದಾರಿ ಹೆಚ್ಚು” ಎಂದು ಅವರು ಹೇಳಿದರು. ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಮೊಮ್ಮಗ ರೇವಣ್ಣ ಅವರು ಕೈಗೊಂಡ ಕ್ರಮಗಳಿಗೆ ತಮ್ಮ ಪಕ್ಷ ಮತ್ತು ಕುಟುಂಬ ಯಾವುದೇ ರೀತಿಯಲ್ಲಿ ಜವಾಬ್ದಾರರಲ್ಲ ಎಂದು ಕುಮಾರಸ್ವಾಮಿ ಹೇಳಿದರು.

Share.
Exit mobile version