ಸುಭಾಷಿತ :

Monday, February 24 , 2020 1:34 AM

ನಿಖಿಲ್ ಕುಮಾರ್ ಗೆ ಶೀಘ್ರದಲ್ಲೇ ಕಲ್ಯಾಣ : ಕೈ ಶಾಸಕರ ಸೋದರನ ಮೊಮ್ಮಗಳೊಂದಿಗೆ ಮದುವೆ ನಿಶ್ಚಯ..!


Sunday, January 26th, 2020 5:52 pm

ಬೆಂಗಳೂರು : ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ಅವರ ವಿವಾಹಕ್ಕೆ ಮುಹೂರ್ತ ಫಿಕ್ಸ್ ಆಗಿದೆಯಂತೆ. ನಿಖಿಲ್ ಅವರ ವಿವಾಹದ ಕುರಿತಾಗಿ ಕೆಲ ದಿನಗಳಿಂದ ಸಾಕಷ್ಟು ಸುದ್ದಿ ಹರಿದಾಡುತ್ತಿತ್ತು. ತಮ್ಮ ಹುಟ್ಟುಹಬ್ಬದಂದು ಮಾತನಾಡಿದ್ದ ನಿಖಿಲ್ ಶೀಘ್ರದಲ್ಲೇ ತಿಳಿಸುವುದಾಗಿ ಘೋಷಿಸಿದ್ದರು. ಇದರ ಬೆನ್ನಲ್ಲೇ ನಿಖಿಲ್ ಅವರ ಮದುವೆ ಫಿಕ್ಸ್ ಆಗಿದೆ ಎಂದು ಹೇಳಲಾಗಿದೆ.

ಕಾಂಗ್ರೆಸ್ ಶಾಸಕರ ಅಣ್ಣನ ಮೊಮ್ಮಗಳ ಜೊತೆ ನಿಖಿಲ್ ಕುಮಾರಸ್ವಾಮಿ ವಿವಾಹ ನೆರವೇರಲಿದೆ. ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಅವರ ಅಣ್ಣನ ಮೊಮ್ಮಗಳು ರೇವತಿ ಅವರನ್ನು ನಿಖಿಲ್ ವರಿಸಲಿದ್ದಾರೆ. ವಧು  ರೇವತಿ ಎಂಸಿಎ ಪದವೀಧರೆಯಾಗಿದ್ದು,  ಮೇ 17 ಮತ್ತು 18 ರಂದು ಈ ಜೋಡಿಯ ಕಲ್ಯಾಣ ನೆರವೇರಿಲಿದೆ.

ಇಂದು ಮಲ್ಲತ್ತಳ್ಳಿಯಲ್ಲಿರುವ ವಧು ರೇವತಿ ಅವರ ನಿವಾಸಕ್ಕೆ ಮಾಜಿ ಪ್ರಧಾನಿ ದೇವೇಗೌಡ ಕುಟುಂಬದವರು ಭೇಟಿ ನೀಡಿದ್ದರು. ಈ ವೇಳೆ, ಮದುವೆ ಮಾತುಕತೆ ನಡೆಸಿದ್ದಾರೆ…

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions