BREAKING: ಇತಿಹಾಸ ಪ್ರಸಿದ್ಧ ‘ಬಿಳಿಗಿರಿರಂಗನ ಬೆಟ್ಟ’ದಲ್ಲಿ ಕಾಡ್ಗಿಚ್ಚು: ದುರ್ಗಮ ಪ್ರದೇಶಗಳಿಗೂ ವ್ಯಾಪಿಸಿದ ಬೆಂಕಿ

ಚಾಮರಾಜನಗರ: ಜಿಲ್ಲೆಯ ಇತಿಹಾಸ ಪ್ರಸಿದ್ಧ ಬಿಳಿಗಿರಿ ರಂಗನ ಬೆಟ್ಟದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಬಿಸಿಲ ಬೇಗೆಯ ಜೊತೆಗೆ ಬೀಸುವ ಗಾಳಿಯಿಂದಾಗಿ ಕಾಳ್ಗಿಚ್ಚು ಬಿಳಿಗಿರಿರಂಗನ ಬೆಟ್ಟದ ದುರ್ಗಮ ಅರಣ್ಯ ಪ್ರದೇಶಕ್ಕೂ ವ್ಯಾಪಿಸಿದ್ದು, ನೂರಾರು ಎಕರೆ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗುತ್ತಿದೆ. ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಪುಣಜನೂರು ವಲಯದ ಕುರಿಮಂದೆ ಸೇರಿದಂತೆ 3-4 ಕಡೆಯಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಅರಣ್ಯದ ದುರ್ಗಮ ಪ್ರದೇಶಗಳಿಗೆ ಬೆಂಕಿ ವ್ಯಾಪಿಸಿದ್ದು, ಕಾಡ್ಗಿಚ್ಚಿನಿಂದ ನೂರಾರು ಎಕರೆ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿದೆ. ಬೆಂಕಿಯನ್ನು ನಂದಿಸಲು ಅರಣ್ಯ ಇಲಾಖೆಯ ಸಿಬ್ಬಂದಿ ಹರಸಾಹಸ … Continue reading BREAKING: ಇತಿಹಾಸ ಪ್ರಸಿದ್ಧ ‘ಬಿಳಿಗಿರಿರಂಗನ ಬೆಟ್ಟ’ದಲ್ಲಿ ಕಾಡ್ಗಿಚ್ಚು: ದುರ್ಗಮ ಪ್ರದೇಶಗಳಿಗೂ ವ್ಯಾಪಿಸಿದ ಬೆಂಕಿ