ಬೆಂಗಳೂರು: ಕೇಂದ್ರೀಯ ಭದ್ರತಾ ಪಡೆಗಳ ನೇಮಕಾತಿಗೆ ಕೇವಲ ಹಿಂದಿ ಇಂಗ್ಲಿಷ್‌ನಲ್ಲಿ ಮಾತ್ರ ಪರೀಕ್ಷೆ ಬರೆಯುವ ಅವಕಾಶ ನೀಡಿದ್ದಕ್ಕೆ ಬಿಜೆಪಿ ಸರ್ಕಾರ ( BJP Government ) ಆಕ್ಷೇಪ ಎತ್ತಲಿಲ್ಲವೇಕೆ? ಕನ್ನಡಿಗರ ಹಿತ ಬೇಕಿಲ್ಲವೇ? ಕನ್ನಡಿಗರಿಗೆ ಉದ್ಯೋಗ ಬೇಡವೇ? ಕರ್ನಾಟಕದಿಂದ ಆಯ್ಕೆಯಾದ ಬಿಜೆಪಿಯ 25 ಸಂಸದರಿಗೆ ಮೋದಿ ಗುಲಾಮಗಿರಿ ಮುಖ್ಯವೋ, ಕನ್ನಡಿಗರ ಹಿತ ಮುಖ್ಯವೋ? ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ( Karnataka Congress ) ಪ್ರಶ್ನಿಸಿದೆ.

ಪಿಎಸ್‌ಐ ಅಕ್ರಮ ನಡೆದಾಗ, ಬೋರ್ ವೆಲ್ ಅಕ್ರಮ ನಡೆದಾಗ, ಕೆಪಿಟಿಸಿಎಲ್ ನೇಮಕಾತಿ ಅಕ್ರಮ ನಡೆದಾಗ, ಗಂಗಾ ಕಲ್ಯಾಣ ಹಗರಣ ನಡೆದಾಗ, ಕಾಂಗ್ರೆಸ್‌ನದ್ದು ಗಾಳಿಯಲ್ಲಿ ಗುಂಡು ಎಂದಿತ್ತು ಬಿಜೆಪಿ, ನಂತರ ಎಲ್ಲದರ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿದೆ, ಇದೂ ಬಯಲಾಗಲಿದೆ. ಗುಂಡು ಗಾಳಿಯನ್ನೇ ಸೀಳಿಕೊಂಡು ಮುನ್ನುಗ್ಗುತ್ತದೆ ನೆನಪಿರಲಿ ಎಂದು ಹೇಳಿದೆ.

Share.
Exit mobile version