ನವದೆಹಲಿ : ಹಣಕಾಸು ಸಚಿವಾಲಯದಲ್ಲಿ ಮೂರರಿಂದ ಆರು ತಿಂಗಳ ಇಂಟರ್ನ್‌ಶಿಪ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಬಹುದು.
ಪಿಎಚ್.ಡಿ. ಮತ್ತು ಸೂಕ್ಷ್ಮ ಆರ್ಥಿಕ ನಿರ್ವಹಣೆ, ಆರ್ಥಿಕ ಸುಧಾರಣೆಗಳು, ಬಂಡವಾಳ ಮಾರುಕಟ್ಟೆಗಳು, ವಿನಿಮಯ ನಿರ್ವಹಣೆ, ಭಾರತದಲ್ಲಿ ವಿದೇಶಿ ಹೂಡಿಕೆ ಮತ್ತು ವಿದೇಶದಲ್ಲಿ ಭಾರತೀಯ ಹೂಡಿಕೆ, ವಿತ್ತೀಯ ನೀತಿ ಮತ್ತು ಇತರ ವಿಷಯಗಳ ಮೇಲೆ ಕೇಂದ್ರೀಕರಿಸುವ ಸ್ನಾತಕೋತ್ತರ ವಿದ್ಯಾರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೋದು.
ಸ್ಟೈಫಂಡ್: ಸ್ನಾತಕೋತ್ತರ ವಿದ್ಯಾರ್ಥಿಗಳು ತಿಂಗಳಿಗೆ ರೂ 10,000 ಟೋಕನ್ ಸಂಭಾವನೆ ಪಡೆಯುತ್ತಾರೆ. ಇನ್ನು Ph.D. ವಿದ್ಯಾರ್ಥಿಗಳು ತಮ್ಮ ಇಂಟರ್ನ್‌ಶಿಪ್ ಪೂರ್ಣಗೊಳಿಸಿದ ನಂತ್ರ ತಿಂಗಳಿಗೆ 20,000 ರೂಪಾಯಿ ಸಂಭಾವನೆ ಪಡೆಯುತ್ತಾರೆ.