ಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸುತ್ತಿದ್ದು, ಪ್ರಕರಣಕುರಿತಂತೆ ತಪ್ಪಿಸಸ್ಥರಿಗೆ ಶಿಕ್ಷೆಯಾಗುವುದು ಬೇಕಿಲ್ಲ ಮೈತ್ರಿ ಮುಂದುವರೆಯುತ್ತೋ ಅಥವಾ ಇಲ್ಲವೋ ಎನ್ನುವುದು ಕಾಂಗ್ರೆಸ್ ನವರಿಗೆ ಮುಖ್ಯವಾಗಿದೆ ಎಂದು ಎಚ್ ಡಿ ಕುಮಾರಸ್ವಾಮಿ ಕಾಂಗ್ರೆಸ್ ನಾಯಕರು ವಿರುದ್ಧ ಆಕ್ರೋಶ ಹೊರಹಾಕಿದರು.

ನಿನ್ನೆ ಹಲವು ಸಚಿವರು ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ.ನನ್ನನ್ನೇ ಗುರಿಯಾಗಿಸಿಕೊಂಡು ನಿನ್ನೆ ಸುದ್ದಿಗೋಷ್ಠಿ ನಡೆಸಿದ್ದಾರೆ.ಪೆನ್ ಡ್ರೈವ್ ಬಿಡುಗಡೆ ಮಾಡಲು ಹುನ್ನಾರ ನಡೆಸಿದ್ದೇನೆಂದು ಹೇಳಿದ್ದಾರೆ. ಒಕ್ಕಲಿಗ ನಾಯಕನೆಂದು ಎಲ್ಲೂ ಹೇಳಿಲ್ಲ. ನಾಯಕತ್ವಕ್ಕಾಗಿ ಪೈಪೋಟಿ ನಡೆಸಿಲ್ಲ. ನಾನು ಹಿಟ್ ಅಂಡ್ ರನ್ ಅಲ್ಲ ಎಂದು ಸಚಿವ ಕೃಷ್ಣ ಬೈರೇಗೌಡರು ಹೆಚ್‍ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಉಪ್ಪು ತಿಂದವನು ನೀರು ಕುಡಿಯಲೇ ಬೇಕು ಎಂದು ನಾನು ಹೇಳಿದ್ದೇನೆ. 2006ರಲ್ಲಿ ನಾನು ಏಕಾಂಗಿಯಾಗಿ ಹೋರಾಟ ಮಾಡಿದ್ದೇನೆ. ಆಗ ನಾನು ಸಿಎಂ ಆಗಿದ್ದರೂ ನನ್ನ ಮೇಲೆ ಆಪಾದನೆ ಮಾಡಲಾಗಿತ್ತು. ಈ ಒಂದು ಪ್ರಕರಣ ರಾಜ್ಯದಲ್ಲಿ ಅತ್ಯಂತ ಕೆಟ್ಟ ಘಟನೆಯಾಗಿದೆ ಈ ಪ್ರಕರಣದಲ್ಲಿ ಜಾತಿಯಿಂದ ರಕ್ಷಣೆ ಪಡೆದುಕೊಳ್ಳುವುದಿಲ್ಲ ಎಂದು ತಿಳಿಸಿದರು.

ಪೆನ್ ಡ್ರೈವ್ ಬಿಡುಗಡೆಗೆ ನಾನೇ ಕಾರಣ ಎಂದು ಹೇಳಿದ್ದಾರೆ.ಕಥೆ ನಿರ್ದೇಶನ ನಿರ್ಮಾಪಕ ನಾನೇ ಎಂದು ಹೇಳಿದ್ದಾರೆ.ಸಿನೆಮಾದಲ್ಲಿ ನಿರ್ದೇಶನ, ನಿರ್ಮಾಪಕನಾಗಿದ್ದೆ. ಆದರೆ ಎಂದಿಗೂ ಆಕ್ಟ್ ಮಾಡಿಲ್ಲ ಎಂದು ತಿಳಿಸಿದರು. ಪ್ರಜ್ವಲ್ ಪ್ರಕರಣವನ್ನು ನಾವು ಮುಚ್ಚಿ ಹಾಕುತ್ತಿಲ್ಲ. ಪ್ರಕರಣವನ್ನು ವೈಭವೀಕರಿಸುವುದು ನಾವಲ್ಲ ನೀವು ಎಂದು ಕಿಡಿ ಕಾರಿದರು.

ಈ ಒಂದು ಪ್ರಕರಣದಲ್ಲಿ ಎಂತಹ ದೊಡ್ಡ ವ್ಯಕ್ತಿ ಆಗಿರಲಿ ಎಷ್ಟೇ ಪ್ರಭಾವಿಯಾಗಿದ್ದರು ಕೂಡ ಆ ವ್ಯಕ್ತಿಗೆ ಶಿಕ್ಷೆ ಆಗಲೇಬೇಕು ಎಂದು ಕೃಷ್ಣಭೈರೇಗೌಡರೇ ನಿಮಗಿಂತಲೂ ಮೊದಲು ಧ್ವನಿ ಎತ್ತಿದವನು ನಾನು. ಆದರೆ ಕಾಂಗ್ರೆಸ್ ನವರಿಗೆ ಮೈತ್ರಿ ಮುಂದುವರೆಯುತ್ತೋ ಇಲ್ಲವೋ ಎಂಬ ಪ್ರಶ್ನೆಯಾಗಿದೆ ಹೊರತು ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತೋ ಇಲ್ಲವೋ ಎನ್ನುವುದು ಅವರಿಗೆ ಮುಖ್ಯವಾಗಿಲ್ಲ.

ಅಲ್ಲೊಬ್ಬ ದೊಡ್ಡ ನಾಯಕರು ಹೇಳಿದ್ದಾರೆ.2900 ವಿಡಿಯೋ ಎಂದು ಹೇಳುತ್ತಿದ್ದಾರೆ ಎಂದು ಮೈಸೂರಿನ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಎಂ ಲಕ್ಷ್ಮಣ ಹೆಸರು ಪ್ರಸ್ತಾಪಿಸಿದರು. ಮಹಿಳೆಯರ ದೌರ್ಜನದ ಬಗ್ಗೆ ಹೇಳುತ್ತಿದ್ದೀರಲ್ಲ ಪ್ರಕರಣವನ್ನು ಎಸಐಟಿಗೆ ಕೊಟ್ಟು ಎಷ್ಟು ದಿನವಾಯಿತು? ಹುಬ್ಬಳ್ಳಿಯಲ್ಲಿ ಸ್ನೇಹ ಪ್ರಕರಣ ಆಯ್ತಲ್ಲ ಆಗ ಹೆಣ್ಣು ಮಕ್ಕಳ ಬಗ್ಗೆ ಇರುವ ಕಾಳಜಿ, ರಕ್ಷಣೆ ಕುರಿತು ಎಲ್ಲಿ ಹೋಗಿತ್ತು. ಏನಿಲ್ಲ ಮಹಿಳೆಯರಿಗೆ ರಕ್ಷಣೆ ಕೊಡ್ತೀವಿ ಅಂತೀರಿ ಎಲ್ಲಿ ರಕ್ಷಣೆ ಕೊಡುತ್ತಿದ್ದೀರಿ ಎಂದು ತಿಳಿಸಿದರು.

Share.
Exit mobile version