ಬೆಂಗಳೂರು: ರಾಜ್ಯದ ಕೆಲವು ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆಹಾರ ಉದ್ದಿಮೆದಾರರಿಂದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಿಂದ ಪರವಾನಿಗೆ/ನೊಂದಣಿ ಪಡೆಯುವ ಸಂದರ್ಭದಲ್ಲಿ ಎದುರಾಗುತ್ತಿರುವ ಸಮಸ್ಯೆಗಳ ಬಗ್ಗೆ ದೂರುಗಳು ಸ್ವೀಕೃತವಾಗುತ್ತಿರುವ ಹಿನ್ನೆಲೆಯಲ್ಲಿ ನೋಂದಣಿ ಮಾಡಲು ಆನ್‍ಲೈನ್ ಮೂಲಕ ಅವಕಾಶ ಕಲ್ಪಿಸಲಾಗಿದೆ.

ಆಹಾರ ಪದಾರ್ಥಗಳ ತಯಾರಕರು, ಶೇಖರಣೆ ಮಾಡುವವರು, ಸಂಸ್ಕರಣೆ ಮಾಡುವ ಘಟಕಗಳು ಸಾಗಾಣಿಕೆ ಹಾಗೂ ಮಾರಾಟ ಮಾಡುವ ಎಲ್ಲಾ ಉದ್ದಿಮೆದಾರರು ಕಡ್ಡಾಯವಾಗಿ ನೊಂದಣಿ (ವಾರ್ಷಿಕ ವಹಿವಾಟು ರೂ.12.00 ಲಕ್ಷದ ಒಳಗೆ ಇದ್ದರೆ) ರಾಜ್ಯ ಪರವಾನಿಗೆ (ವಾರ್ಷಿಕ ವಹಿವಾಟು ರೂ.12.00 ಲಕ್ಷಕ್ಕೆ ಮೇಲ್ಪಟ್ಟು ರೂ.20.00 ಕೋಟಿ ವರೆಗೆ ಇದ್ದರೆ) ಪಡೆದುಕೊಳ್ಳಬೇಕಾಗಿರುತ್ತದೆ. ಸದರಿ ನೊಂದಣಿ/ ಪರವಾನಿಗೆಗಳನ್ನು ಆಹಾರ ಉದ್ದಿಮೆದಾರರ ಅಗತ್ಯದ ಅನುಸಾರ 1 ರಿಂದ 5 ವರ್ಷಗಳ ವರೆಗೆ ಪಡೆದುಕೊಳ್ಳಬಹುದಾಗಿರುತ್ತದೆ. ತದನಂತರ ಅವಶ್ಯಕತೆಗೆ ನವೀಕರಣವನ್ನು ಮಾಡಿಕೊಳ್ಳಬಹುದಾಗಿರುತ್ತದೆ.

ನೊಂದಣಿ/ಪರವಾನಿಗೆಗಳಿಗೆ ಆನ್‍ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಕೆಗೆ ಅವಕಾಶವಿದ್ದು, ಆನ್‍ಲೈನ್ ಮೂಲಕವೇ ಅನುಮೋದನೆ ನೀಡಲಾಗುತ್ತದೆ. ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವ ವೇಳೆ ಉದ್ದಿಮೆದಾರರು ಅವರುಗಳ ಅಧಿಕೃತ/ವೈಯಕ್ತಿಕ ಇ-ಮೇಲ್ ವಿಳಾಸಗಳನ್ನು ಮತ್ತು ಫೆÇೀನ್ ಸಂಖ್ಯೆಗಳನ್ನು ಒದಗಿಸುವುದು ಅವಶ್ಯಕವಾಗಿದ್ದು, ಇದರಿಂದಾಗಿ ಇಲಾಖೆಯಿಂದ ಜಾರಿ ಮಾಡಲಾಗುವ ಪತ್ರಗಳು, ನೆನಪೆÇೀಲೆಗಳು, ಫೆÇೀನ್ ಸಂದೇಶಗಳು ಅವರುಗಳಿಗೆ ನೇರವಾಗಿ ತಲುಪುವಂತಾಗುತ್ತವೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ನೊಂದಣಿಗಾಗಿ ಒಂದು ವರ್ಷಕ್ಕೆ ರೂ.100/-ಗಳ ಶುಲ್ಕ ಮತ್ತು ಪರವಾನಿಗೆಗಳಿಗೆ ಆಹಾರ ಉದ್ದಿಮೆಯ ವಿಧವನ್ನು ಆಧರಿಸಿ ರೂ.2,000/- ರಿಂದ ರೂ.5,000/-ಗಳ ಶುಲ್ಕ ನಿಗದಿಸಲ್ಪಟ್ಟಿದ್ದು, ಸದರಿ ಶುಲ್ಕವನ್ನು ಆಹಾರ ಉದ್ದಿಮೆದಾರರು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಆನ್‍ಲೈನ್ ಮೂಲಕ ಪಾವತಿಸಬೇಕಾಗಿರುತ್ತದೆ.

ನೊಂದಣಿ/ಪರವಾನಿಗೆಗಳಿಗೆ ಆನ್‍ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಕಡ್ಡಾಯ ಮಾಡಲ್ಪಟ್ಟಿರುವ ಎಲ್ಲಾ ದಾಖಲಾತಿಗಳನ್ನು ಸಲ್ಲಿಸುವುದು ಅಗತ್ಯವಾಗಿರುತ್ತದೆ. ಅಗತ್ಯ ದಾಖಲಾತಿಗಳನ್ನು ಸಲ್ಲಿಸದೇ ಇದ್ದ ಪಕ್ಷದಲ್ಲಿ ಅಥವಾ ತಪ್ಪು ದಾಖಲೆಗಳನ್ನು ಸಲ್ಲಿಸಿದ್ದಲ್ಲಿ ಸದರಿ ಅರ್ಜಿಯನ್ನು ತಿರಸ್ಕರಿಸಿ ಅರ್ಜಿ ಶುಲ್ಕವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು.

ನೊಂದಣಿ/ಪರವಾನಿಗೆಗಳನ್ನು ಅವಧಿ ಮೀರಿದ ನಂತರ ನವೀಕರಿಸಲು ಸಂಬಂಧಿಸಿದ ಪರವಾನಿಗೆ/ನೊಂದಣಿ ಶುಲ್ಕದ ಮೂರರಷ್ಟು ದಂಡವು ಅನ್ವಯವಾಗುತ್ತದೆ. ಇದಲ್ಲದೆ ಆಹಾರ ಪದಾರ್ಥಗಳ ತಯಾರಿಕೆ ಮತ್ತು ರೀಪ್ಯಾಕ್ ಮಾಡುವವರು ಪ್ರತೀ ವರ್ಷ ಮೇ ಅಂತ್ಯದೊಳಗೆ ತಮ್ಮ ಆರ್ಥಿಕ ವರ್ಷದ ವಾರ್ಷಿಕ ವರದಿಯನ್ನು ಆನ್‍ಲೈನ್ ಮೂಲಕ  FoSCoS  ವೆಬ್‍ಸೈಟ್‍ನಲ್ಲಿ ಅಪ್ ಲೋಡ್ ಮಾಡಬೇಕಾಗಿರುತ್ತದೆ. ಇಲ್ಲವಾದಲ್ಲಿ ವಿಳಂಬವಾಗುವ ದಿನ ಒಂದಕ್ಕೆ ರೂ.100/-ಗಳ ದಂಡವು ಅನ್ವಯವಾಗುತ್ತದೆ.

ಆಹಾರ ಉದ್ದಿಮೆದಾರರು ಇಲಾಖೆಗೆ ಸಂಬಂಧಪಟ್ಟ ಎಲ್ಲಾ ಮಾಹಿತಿಗಳನ್ನು, ಆದೇಶಗಳನ್ನು https://foscos.fssai.gov.in/ ಪಡೆಯಬಹುದಾಗಿರುತ್ತದೆ. ಹಾಗೂ https://www.fssai.gov.in/  ವೆಬ್‍ಸೈಟ್‍ಗಳಿಂದ ಪಡೆಯಬಹುದಾಗಿದೆ.

ಆಹಾರ ಉದ್ದಿಮೆದಾರರಿಗೆ ನೆರವಾಗಲು ಕೇಂದ್ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಆಹಾರ ಸುರಕ್ಷತಾ ಮಿತ್ರ (ಈooಜ Sಚಿಜಿeಣಥಿ ಒiಣಡಿಚಿ) ಯೋಜನೆಯಡಿ ದೇಶಾದ್ಯಂತ ಸದರಿ -ಕೆಲಸ ಮಾಡಲು ಇಚ್ಛಿಸುವವರಿಗೆ ಇಲಾಖೆಯಿಂದ ತರಬೇತಿಯನ್ನು ನೀಡಿ ನೊಂದಣಿ/ಪರವಾನಿಗೆ ಪಡೆದುಕೊಳ್ಳಲು ಆಗತ್ಯವಿರುವ ಮಾಹಿತಿಯನ್ನು ನೀಡಲಾಗಿರುತ್ತದೆ.

ಈ ಆಹಾರ ಸುರಕ್ಷತಾ ಮಿತ್ರರುಗಳು ಇಲಾಖಾ ಅಧಿಕಾರಿಗಳಾಗಿರುವುದಿಲ್ಲ ಆದರೆ ಇಲಾಖೆಯಿಂದ ತರಬೇತಿ ಪಡೆದ ವ್ಯಕ್ತಿಗಳಾಗಿದ್ದು, ಇವರುಗಳು ನೊಂದಣಿ/ಪರವಾನಿಗೆ ಅರ್ಜಿಯನ್ನು ಸಲ್ಲಿಸಲು ಸೇವಾ ಶುಲ್ಕವಾಗಿ ರೂ.100/-ಗಳನ್ನು ಮಾತ್ರ ಪಡೆದುಕೊಳ್ಳಲು ಅರ್ಹರಿರುತ್ತಾರೆ. ಅಲ್ಲದೆ ಈ ಆಹಾರ ಸುರಕ್ಷತಾ ಮಿತ್ರರುಗಳು ಯಾವುದೇ ಆಹಾರ ಉದ್ದಿಮೆಗಳಿಗೆ ಪರಿಶೀಲನಾ ಪೇಟಿ ನೀಡುವುದನ್ನು ನಿರ್ಬಂಧಿಸಲಾಗಿದೆ. ಸಂಬಂಧಿಸಿದಂತೆ ಆಹಾರ ಉದ್ದಿಮೆದಾರರು ಆಹಾರ ಸುರಕ್ಷತಾ ಮಿತ್ರರುಗಳಿಂದ ಸೇವೆ ಪಡೆಯುವ ಬದಲು ಅವರುಗಳ ಗುರುತಿನ ಚೀಟಿಯನ್ನು ನೋಡಿ ಖಚಿತಪಡಿಸಿಕೊಳ್ಳಲು ಕೋರಿದೆ.

ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಜಿಲ್ಲಾ ಅಂಕಿತಾಧಿಕಾರಿಗಳನ್ನು ಸಂಪರ್ಕಿಸುವಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share.
Exit mobile version