ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಇಂದಿನ ದಿನದಲ್ಲಿ ತೂಕ ಹೆಚ್ಚಾಗಿದ್ದರಿಂದ ಪ್ರತಿನಿತ್ಯ ವ್ಯಾಯಾಮ ಮಾಡುತ್ತಾರೆ. ಬೆಳಗ್ಗೆ ಅಥವಾ ಸಂಜೆ ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡಬಾರದು, ವಾರದಲ್ಲಿ ಒಂದು ದಿನವಾದರೂ ದೇಹಕ್ಕೆ ವಿಶ್ರಾಂತಿ ನೀಡಬೇಕು ಎನ್ನುತ್ತಾರೆ ತಜ್ಞರು.

SHOCKING NEWS: ಪತ್ನಿಯನ್ನು ತುಂಡರಿಸಿ ಡ್ರಮ್‌ನಲ್ಲಿ ತುಂಬಿದ್ದ ಪತಿ… ಒಂದು ವರ್ಷದ ನಂತ್ರ ದೇಹದ ಭಾಗಗಳು ಪತ್ತೆ

 

ವ್ಯಾಯಾಮದ ಸಮಯದಲ್ಲಿ ಸ್ನಾಯುಗಳು ಆಯಾಸಗೊಳ್ಳುವಂತಹ ಸಮಸ್ಯೆಯಿಂದ ತಪ್ಪಿಸಲು ಕೆಲವು ಸಲಹೆಗಳನ್ನು ಅನುಸರಿಸಬೇಕು ಎಂದು ಹೇಳಲಾಗುತ್ತದೆ.ವ್ಯಾಯಾಮ ಮಾಡುವಾಗ ಕೆಲವೊಂದು ಅವಘಡಗಳು ಸಂಭವಿಸಬಹುದು. ಆದರೂ, ದೈನಂದಿನ ಫಿಟ್ನೆಸ್ ದಿನಚರಿಯನ್ನು ಅನುಸರಿಸುವುದು ಮುಖ್ಯವಾಗಿದೆ. ಆದರೆ ಈ ಸಮಯದಲ್ಲಿ ಕೆಲ ಸಮಸ್ಯೆಗಳನ್ನು ತಪ್ಪಿಸಲು ಕೆಲವು ಮೂಲಭೂತ ನಿಯಮಗಳನ್ನು ಪಾಲಿಸುವುದು ಅಷ್ಟೇ ಮುಖ್ಯ. ನಿಮ್ಮ ಸ್ನಾಯುಗಳು ಮತ್ತು ಕೀಲುಗಳಿಗೆ ಸಾಕಷ್ಟು ವಿಶ್ರಾಂತಿ ನೀಡದಿದ್ದರೆ, ಅವು ಸಮಸ್ಯೆಗಳಿಗೆ ಗುರಿಯಾಗುತ್ತವೆ. ಇದು ಆರೋಗ್ಯಕ್ಕೆ ಮಾರಕವಾಗಬಹುದು ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ.

SHOCKING NEWS: ಪತ್ನಿಯನ್ನು ತುಂಡರಿಸಿ ಡ್ರಮ್‌ನಲ್ಲಿ ತುಂಬಿದ್ದ ಪತಿ… ಒಂದು ವರ್ಷದ ನಂತ್ರ ದೇಹದ ಭಾಗಗಳು ಪತ್ತೆ

 

ವರ್ಕೌಟ್‌ ಮಾಡುವುದಕ್ಕಿಂತ ಮೊದಲು, ಕನಿಷ್ಠ 10ರಿಂದ 12 ನಿಮಿಷಗಳ ಕಾಲ ದೇಹವನ್ನು ವಾರ್ಮ್‌ ಅಪ್‌ ಮಾಡಬೇಕು. ಇದರಿಂದ ನಿಮ್ಮ ದೇಹ ಮತ್ತು ಸ್ನಾಯುಗಳು ಮುಕ್ತವಾಗುತ್ತವೆ.
ಪ್ರತಿದಿನ ಒಂದೇ ರೀತಿಯ ಫಿಟ್‌ನೆಸ್ ದಿನಚರಿಯನ್ನು ಅನುಸರಿಸುವುದನ್ನು ತಪ್ಪಿಸಿ. ಇವತ್ತು ಸೈಕ್ಲಿಂಗ್ ಮಾಡಿದರೆ, ನಾಳೆ ಬೇರೆ ವ್ಯಾಯಾಮ ಮಾಡಿ. ವ್ಯಾಯಾಮವನ್ನು ಪ್ರಾರಂಭಿಸುವ ಕನಿಷ್ಠ ಹದಿನೈದು ನಿಮಿಷಗಳ ಮೊದಲು ಹಣ್ಣುಗಳನ್ನು ತಿನ್ನುವುದು ಉತ್ತಮ
ಸಂಪೂರ್ಣ ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡಬೇಡಿ. ಇದು ನಿಮ್ಮ ದೇಹವನ್ನು ದುರ್ಬಲಗೊಳಿಸುತ್ತದೆ. ಅಲ್ಲದೆ ನಿಮ್ಮನ್ನು ಅಸ್ವಸ್ಥಗೊಳಿಸುತ್ತದೆ

Share.
Exit mobile version