ಬೆಂಗಳೂರು : ಗ್ಯಾರಂಟಿ ಯೋಜನೆಗಳನ್ನು ಕೊಟ್ಟ ಕಾಂಗ್ರೆಸ್ ಗೆ ಶಕ್ತಿಯ ಹೂಮಾಲೆ, ಚೊಂಬು ಕೊಟ್ಟ ಬಿಜೆಪಿಗೆ ಚೋಂಬೇ ಉಡುಗೊರೆ ಎಂದು ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. 

ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ನಮ್ಮ‌ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಚುನಾವಣಾ ಪ್ರಚಾರಕ್ಕೆ ಹೋದ ಕಡೆಯೆಲ್ಲ ವಿಶಿಷ್ಟ ರೀತಿಯಲ್ಲಿ ತಮ್ಮ ಕೃತಜ್ಞತೆ ಅರ್ಪಿಸುತ್ತಿದ್ದಾರೆ. ಇದು ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಇದೆ ಎಂಬುದಕ್ಕೆ ಸಾಕ್ಷಿ. ಬಿಜೆಪಿಯ ಧರ್ಮ ರಾಜಕಾರಣದ ವ್ಯಾಲಿಡಿಟಿ ಮುಗಿದಿದೆ. ಕೊಟ್ಟ ಭರವಸೆಗಳಲ್ಲಿ ಒಂದನ್ನೂ ಈಡೇರಿಸದ ಬಿಜೆಪಿಯ ಚೊಂಬು ಸರ್ಕಾರಕ್ಕೆ ಬೆಂಬಲಿಸಲು ಜನರ ಬಳಿ ಕಾರಣಗಳೇ ಇಲ್ಲ ಎಂದಿದ್ದಾರೆ.

ಕಾಂಗ್ರೆಸ್ ಗ್ಯಾರಂಟಿಗಳೆದುರು ನರೇಂದ್ರ ಮೋದಿ ಸರ್ಕಾರದ ವಾರೆಂಟಿ ಮುಗಿಯುತ್ತಾ ಬಂದಿದೆ. ಕಾಂಗ್ರೆಸ್ ಸರ್ಕಾರ ಬರಲಿದೆ,  ಜನರಿಗೆ ನ್ಯಾಯದ ಖಾತ್ರಿ ನೀಡಲಿದೆ.

Share.
Exit mobile version