ಗುವಾಂಗ್ಡಾಂಗ್ : ದಾಖಲೆಯ ಪ್ರವಾಹದ ಮಧ್ಯೆ ದಕ್ಷಿಣ ಚೀನಾದ ವಿವಿಧ ಭಾಗಗಳಿಂದ 100,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಚೀನಾದ ಶಾವೊಗುವಾನ್ ಮತ್ತು ಗುವಾಂಗ್ಡಾಂಗ್ ಪ್ರಾಂತ್ಯದಲ್ಲಿ ಭಾರಿ ಮಳೆಯಿಂದಾಗಿ, ಹಲವಾರು ನಗರಗಳು ಮತ್ತು ಹಳ್ಳಿಗಳಲ್ಲಿ ತುರ್ತು ಸ್ಥಳಾಂತರ ಕಾರ್ಯಾಚರಣೆ ನಡೆಯಿತು.

ನಿವಾಸಿಗಳು ಮುಳುಗುವುದರಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಲೈಫ್ ಬೋಟ್ ಗಳನ್ನು ಬಳಸಿ ತಮ್ಮ ಮನೆಗಳಿಂದ ಪಲಾಯನ ಮಾಡಬೇಕಾಯಿತು. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, 10 ಜನರು ಕಾಣೆಯಾಗಿದ್ದಾರೆ ಮತ್ತು ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ.

ಪರ್ಲ್ ರಿವರ್ ಡೆಲ್ಟಾ ಸುತ್ತಮುತ್ತಲಿನ ಜನನಿಬಿಡ ಪ್ರದೇಶದಲ್ಲಿನ ವಿಪರೀತ ಹವಾಮಾನವು ದಕ್ಷಿಣ ಚೀನಾದ ನಗರಗಳನ್ನು ಜಲಾವೃತಗೊಳಿಸಲು ಕಾರಣವಾಯಿತು ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಪ್ರವಾಹದಿಂದ ಉಂಟಾದ ವಿನಾಶದ ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ತಜ್ಞರು ದೊಡ್ಡ ಪ್ರವಾಹಗಳ ವಿರುದ್ಧ ಪ್ರದೇಶದ ರಕ್ಷಣೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

Share.
Exit mobile version