ನಾಳೆಯಿಂದ ದೇಶಿಯ ವಿಮಾನ ಸಂಚಾರ ಆರಂಭ : ಎಲ್ಲೆಲ್ಲಿಗೆ ಎಷ್ಟೆಷ್ಟು ದರ ನಿಗದಿ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ – Kannada News Now


India State

ನಾಳೆಯಿಂದ ದೇಶಿಯ ವಿಮಾನ ಸಂಚಾರ ಆರಂಭ : ಎಲ್ಲೆಲ್ಲಿಗೆ ಎಷ್ಟೆಷ್ಟು ದರ ನಿಗದಿ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ನವದೆಹಲಿ : ದೇಶಾದ್ಯಂತ ಕೊರೋನಾ ವೈರಸ್ ಹೆಚ್ಚುತ್ತಿದೆ , ಇದರ ನಡುವೆ ಲಾಕ್ ಡೌನ್ ಸಡಿಲಿಕೆಯಾಗಿದ್ದು ,ನಾಳೆಯಿಂದ ವಿಮಾನ ಹಾರಾಟ ಆರಂಭವಾಗಲಿದೆ . ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಆಗಸ್ಟ್ 24 ರವರೆಗೆ ಅನ್ವಯವಾಗುವಂತೆ ಟಿಕೆಟ್ ದರಗಳನ್ನು ನಿಗದಿಪಡಿಸಿ ಆದೇಶ ಹೊರಡಿಸಿದೆ.

ಹೌದು, ಕೇಂದ್ರ ಸರ್ಕಾರವು ವಿಮಾನ ಹಾರಾಟದ ಅವಧಿಯನ್ನು ಆಧರಿಸಿ ವಿಮಾನಯಾನ ಮಾರ್ಗಗಳನ್ನು 7 ವರ್ಗಗಳಾಗಿ ವಿಂಗಡಿಸಿದೆ.

 1. 40 ನಿಮಿಷದ ಪ್ರಯಾಣ ಹೊಂದಿರುವ ಮಾರ್ಗಗಳನ್ನು ಕ್ಲಾಸ್ `A’
 2. 60 ನಿಮಿಷದ ಅವಧಿಯ ಹಾರಾಟದ ಸಮಯ ಹೊಂದಿರುವ ಮಾರ್ಗವನ್ನು ಕ್ಲಾಸ್ `B’
 3. 90 ನಿಮಿಷದ ಪ್ರಯಾಣದ ಅವಧಿ ಹೊಂದಿರುವ ಮಾರ್ಗಗಳು ಕ್ಲಾಸ್ `C’
 4. 90 ರಿಂದ 120 ನಿಮಿಷದ ಪ್ರಯಾಣದ ಅವಧಿ ಹೊಂದಿರುವ ಮಾರ್ಗಗಳು ಕ್ಲಾಸ್ `D’
 5. 120 ರಿಂದ 150 ನಿಮಿಷದ ಪ್ರಯಾಣದ ಅವಧಿ ಹೊಂದಿರುವ ಮಾರ್ಗಗಳು ಕ್ಲಾಸ್ `E’
 6. 150 ರಿಂದ 180 ನಿಮಿಷದ ಪ್ರಯಾಣದ ಅವಧಿ ಹೊಂದಿರುವ ಮಾರ್ಗಗಳು ಕ್ಲಾಸ್ `F’
 7. 180-210 ನಿಮಿಷದ ಪ್ರಯಾಣದ ಅವಧಿ ಹೊಂದಿರುವ ಮಾರ್ಗಗಳು ಕ್ಲಾಸ್ `G’

ಬೆಂಗಳೂರಿನಿಂದ ಎಲ್ಲೆಲ್ಲಿಗೆ ಎಷ್ಟೆಷ್ಟು ದರ ನಿಗದಿ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

 • ಬೆಂಗಳೂರು-ಚೆನ್ನೈ, ಬೆಂಗಳೂರು -ಕೊಚ್ಚಿ ಮತ್ತು ಬೆಂಗಳೂರು-ಮಂಗಳೂರು ಮಾರ್ಗ ಕ್ಲಾಸ್ ಎ ಎಂದು ವರ್ಗೀಕರಣಗೊಂಡಿದ್ದು, ಕನಿಷ್ಟ 2 ಸಾವಿರ ರೂ. ಗರಿಷ್ಠ 6 ಸಾವಿರ ರೂ. ದರ ನಿಗದಿಯಾಗಿದೆ.
 • ಬೆಂಗಳೂರು-ಕ್ಯಾಲಿಕಟ್, ಬೆಂಗಳೂರು-ಕೊಯಮತ್ತೂರು, ಬೆಂಗಳೂರು-ಗೋವಾ, ಬೆಂಗಳೂರು-ಹೈದರಾಬಾದ್, ಬೆಂಗಳೂರು-ತ್ರಿವೇಂಡ್ರಂ ಕನಿಷ್ಟ 2,500 ರೂ. ಮತ್ತು ಗರಿಷ್ಠ 7,500 ರೂ.
 • ಬೆಂಗಳೂರು-ಕೋಲ್ಕತ್ತಾ, ಬೆಂಗಳೂರು-ಪುಣೆ, ಬೆಂಗಳೂರು-ವೈಜಾಗ್ ಗೆ ಕನಿಷ್ಟ 3 ಸಾವಿರ ರೂ. ಮತ್ತು ಗರಿಷ್ಠ 9 ಸಾವಿರ ರೂ. ನಿಗದಿಯಾಗಿದೆ.
 • ಬೆಂಗಳೂರು-ಅಹಮದಾಬಾದ್, ಬೆಂಗಳೂರು-ಭೋಪಾಲ್, ಬೆಂಗಳೂರು-ಭುವನೇಶ್ವರ್, ಬೆಂಗಳೂರು-ಇಂದೋರ್, ಬೆಂಗಳೂರು-ರಾಯ್ಪುರ್ ಮಾರ್ಗಗಳಿಗೆ ಕನಿಷ್ಟ 3,500ರೂ.ನಿಂ ದಗರಿಷ್ಠ 10 ಸಾವಿರ ರೂ. ವರೆಗೆ ಟಿಕೆಟ್ ದರಗಳನ್ನು ನಿಗದಿಪಡಿಸಲಾಗಿದೆ.
 • ಬೆಂಗಳೂರು-ಅಮೃತಸರ, ಬೆಂಗಳೂರು-ಅಗರ್ತಲಾ, ಬೆಂಗಳೂರು-ಚಂಡೀಗಢ, ಬೆಂಗಳೂರು-ಡೆಹ್ರಾಡೂನ್, ಬೆಂಗಳೂರು-ಗುವಾಹಟಿ, ಬೆಂಗಳೂರು-ಇಂಫಾಲ ಮತ್ತು ಬೆಂಗಳೂರು-ವಾರಣಾಸಿ ಮಾರ್ಗಗಳಿಗೆ ಕನಿಷ್ಠ 5,500 ರೂ.ಗಳಿಂದ ಗರಿಷ್ಠ 15,700 ರೂ.ಗಳಿಗೆ ದರಗಳನ್ನು ನಿಗದಿಪಡಿಸಲಾಗಿದೆ.