ಸುಭಾಷಿತ :

Wednesday, January 29 , 2020 9:35 PM

ಗಣರಾಜ್ಯೋತ್ಸವಕ್ಕೂ ಮುನ್ನವೇ ತಪ್ಪಿದ ಭಾರೀ ಅನಾಹುತ : ಗ್ರೆನೇಡ್ ದಾಳಿ ನಡೆಸಲು ತಾಲೀಮು ನಡೆಸಿದ್ದ ಐವರು ಉಗ್ರರ ಬಂಧನ


Thursday, January 16th, 2020 8:57 pm

ಶ್ರೀನಗರ : ಜನವರಿ 26ರಂದು ಗಣರಾಜ್ಯೋತ್ಸವಕ್ಕೆ ದೇಶದೆಲ್ಲೆಡೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಐವರನ್ನು ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಗಣರಾಜ್ಯೋತ್ಸವದಂದು ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಸದಸ್ಯರು ಎನ್ನಲಾದಂತ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಈ ಕುರಿತಂತೆ ಖಚಿತ ಮಾಹಿತಿ ದೊರೆತ ಬಳಿಕ ವಿಶೇಷ ಕಾರ್ಯಾಚರಣೆಗೆ ಇಳಿದ ಶ್ರೀನಗರ ಪೊಲೀಸರು, ಗ್ರೆನೇಡ್ ದಾಳಿ ನಡೆಸಿ, ಗಣರಾಜ್ಯೋತ್ಸವದಂದು ವಿಧ್ವಂಸಕ ಕೃತ್ಯ ಎಸಗರು ತಾಲೀಮು ನಡೆಸಿದ್ದ ಐವರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ. ಈ ಮೂಲಕ ಗಣರಾಜ್ಯೋತ್ಸದಂದು ವಿಧ್ವಂಸಕ ಕೃತ್ಯ ಎಸಗಲು ಯೋಜನೆ ರೂಪಿಸಿದ್ದ ಉಗ್ರರನ್ನು ಜೈಲಿಗಟ್ಟಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions