ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪೂಂಚ್ನಲ್ಲಿ ವಾಯುಪಡೆಯ ಬೆಂಗಾವಲು ವಾಹನದ ಮೇಲೆ ದಾಳಿ ನಡೆದ ಕೆಲವು ದಿನಗಳ ನಂತರ, ಇಂಡಿಯಾ ಟುಡೇ ಟಿವಿ ದಾಳಿಯ ಹಿಂದಿನ ಮೂವರು ಭಯೋತ್ಪಾದಕರ ವಿವರಗಳನ್ನು ರಿವೀಲ್ ಮಾಡಿದೆ.

ಭಯೋತ್ಪಾದಕ ದಾಳಿಯಲ್ಲಿ ಐಎಎಫ್ ಕಾರ್ಪೊರಲ್ ಭಾರತೀಯ ವಾಯುಪಡೆಯ ಸೈನಿಕ ಸಾವನ್ನಪ್ಪಿದ್ದು, ಇತರ ನಾಲ್ವರು ಗಾಯಗೊಂಡಿದ್ದಾರೆ.

ಮೂಲಗಳ ಪ್ರಕಾರ, ಪೂಂಚ್ ದಾಳಿಯ ತನಿಖೆಯಲ್ಲಿ ಮೂರು ಹೆಸರುಗಳು ಹೊರ ಬಂದಿವೆ. ಇಲಿಯಾಸ್ (ಮಾಜಿ ಪಾಕಿಸ್ತಾನ ಸೇನಾ ಕಮಾಂಡೋ), ಅಬು ಹಮ್ಜಾ (ಲಷ್ಕರ್ ಕಮಾಂಡರ್) ಮತ್ತು ಹಡೂನ್ ಎಂಬುದಾಗಿ ತಿಳಿದು ಬಂದಿವೆ.

ವಿಶೇಷವೆಂದರೆ, ಇಲಿಯಾಸ್ ‘ಫೌಜಿ’ ಎಂಬ ಕೋಡ್ ಹೆಸರಿನಿಂದಲೂ ಹೋಗುತ್ತಾನೆ. ಜೈಶ್-ಎ-ಮೊಹಮ್ಮದ್ನ ಅಂಗಸಂಸ್ಥೆಯಾದ ಪೀಪಲ್ಸ್ ಆಂಟಿ-ಫ್ಯಾಸಿಸ್ಟ್ ಫ್ರಂಟ್ (ಪಿಎಎಫ್ಎಫ್) ಗಾಗಿ ಭಯೋತ್ಪಾದಕರು ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭಯೋತ್ಪಾದಕರನ್ನು ಪತ್ತೆಹಚ್ಚಲು ರಾಜೌರಿ ಮತ್ತು ಪೂಂಚ್ ಕಾಡುಗಳಲ್ಲಿ ಭಾರಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಅಧಿಕಾರಿಗಳು ಹಲವಾರು ಶಂಕಿತರನ್ನು ಹೆಡೆಮುರಿ ಕಟ್ಟಿದ್ದಾರೆ. ಮೂವರು ಭಯೋತ್ಪಾದಕರೊಂದಿಗಿನ ಸಂಪರ್ಕದ ಬಗ್ಗೆ ಅನೇಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಪಿಎಎಫ್ಎಫ್ ಜೈಶ್ ಬೆಂಬಲಿತ ಭಯೋತ್ಪಾದಕ ಗುಂಪಾಗಿದ್ದು, ಕಳೆದ ವರ್ಷ ಡಿಸೆಂಬರ್ನಲ್ಲಿ ಪೂಂಚ್ನಲ್ಲಿ ಸೇನಾ ವಾಹನದ ಮೇಲೆ ನಡೆದ ದಾಳಿಯ ಜವಾಬ್ದಾರಿಯನ್ನು ವಹಿಸಿಕೊಂಡಿದೆ.

ಮೇ 4 ರಂದು ಪೂಂಚ್ ಜಿಲ್ಲೆಯ ಶಹಸಿತಾರ್ ಬಳಿ ಭಯೋತ್ಪಾದಕ ದಾಳಿ ನಡೆದಿತ್ತು. ಐವರು ಐಎಎಫ್ ಸಿಬ್ಬಂದಿಗೆ ಗುಂಡೇಟಿನಿಂದ ಗಾಯಗಳಾಗಿದ್ದು, ಅವರನ್ನು ಹತ್ತಿರದ ಮಿಲಿಟರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಚಿಕಿತ್ಸೆಯ ಸಮಯದಲ್ಲಿ, ಅವರಲ್ಲಿ ಒಬ್ಬರು ಹುತಾತ್ಮರಾಗಿದ್ದರು. ದಾಳಿಯ ನಂತರ ಭಯೋತ್ಪಾದಕರು ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್ ನ ‘ಗ್ಯಾರಂಟಿ ಯೋಜನೆಗಳೇ’ ನನ್ನ ಕೈ ಹಿಡಿಯುತ್ತವೆ : ಗೀತಾ ಶಿವರಾಜ್ ಕುಮಾರ ವಿಶ್ವಾಸ

ನಾಳೆ ಬೆಳಗ್ಗೆ 10.30ಕ್ಕೆ ‘SSLC’ ಫಲಿತಾಂಶ ಪ್ರಕಟ : ಈ ರೀತಿ ‘ರಿಸಲ್ಟ್’ ಚೆಕ್ ಮಾಡಿ | Karnataka SSLC Exam results 2024

Share.
Exit mobile version