ಬೆಂಗಳೂರು: ಏಪ್ರಿಲ್.26ರಂದು ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದೆ. ಇಂದು ಮೊದಲ ಹಂತದ ಲೋಕಸಭಾ ಚುನಾವಣೆಯ ಮೊದಲ ಹಂತದ ಕ್ಷೇತ್ರಗಳಿಗೆ ಬಹಿರಂಗ ಪ್ರಚಾರಕ್ಕೂ ತೆರೆ ಬಿದ್ದಿದೆ. ಇನ್ನೂ ಮನೆ ಮನೆಗೆ ತೆರಳಿ ಮತಯಾಚನೆಗೆ ಮಾತ್ರವೇ ಅವಕಾಶವಿದೆ. ಹಾಗಾದ್ರೇ ರಾಜ್ಯದ ಮೊದಲ ಹಂತದ 14 ಲೋಕಸಭಾ ಚುನಾವಣಾ ಕ್ಷೇತ್ರಗಳಲ್ಲಿ ಯಾವೆಲ್ಲ ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ ಅಂತ ಮುಂದೆ ಓದಿ.

ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಮೊದಲ ಹಂತದಲ್ಲಿ ರಾಜ್ಯದ 14 ಕ್ಷೇತ್ರಗಳಿಗೆ ಏಪ್ರಿಲ್.26ರಂದು ಮತದಾನ ನಡೆಯಲಿದೆ. ದಿನಾಂಕ 26-04-2024ರಂದು ಮತದಾನ ನಡೆಯುವ ದಿನದಂದು ಎಲ್ಲಾ ರಾಜ್ಯ ಸರ್ಕಾರಿ ಕಚೇರಿಗಳಿಗೆ, ಶಾಲಾ ಕಾಲೇಜುಗಳಿಗೆ ಹಾಗೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಮತದಾರರು ಮತ ಚಲಾಯಿಸಲು ಅನುಕೂಲವಾಗುವಂತೆ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿದೆ.

ರಾಜ್ಯದ 14 ಲೋಕಸಭಾ ಕ್ಷೇತ್ರಗಳು ಯಾವುವು?

  1. ಬೆಂಗಳೂರು ಗ್ರಾಮಾಂತರ
  2. ಬೆಂಗಳೂರು ಉತ್ತರ
  3. ಬೆಂಗಳೂರು ಕೇಂದ್ರ
  4. ಬೆಂಗಳೂರು ದಕ್ಷಿಣ
  5. ಹಾಸನ
  6. ಚಿಕ್ಕಬಳ್ಳಾಪುರ
  7. ಉಡುಪಿ-ಚಿಕ್ಕಮಗಳೂರು
  8. ದಕ್ಷಿಣ ಕನ್ನಡ
  9. ತುಮಕೂರು
  10. ಚಿತ್ರದುರ್ಗ
  11. ಮಂಡ್ಯ
  12. ಮೈಸೂರು-ಕೊಡಗು
  13. ಚಾಮರಾಜನಗರ
  14. ಕೋಲಾರ

ಹೀಗಿದೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳ ಪಟ್ಟಿ

  • ಚಿತ್ರದುರ್ಗ- ಗೋವಿಂದ ಕಾರಜೋಳ
  • ಬೆಂಗಳೂರು ಉತ್ತರ- ಶೋಭಾ ಕರಂದ್ಲಾಜೆ
  • ಉಡುಪಿ-ಚಿಕ್ಕಮಗಳೂರು – ಕೋಟಾ ಶ್ರೀನಿವಾಸ ಪೂಜಾರಿ
  • ಮಂಡ್ಯ- ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್.ಡಿ ಕುಮಾರಸ್ವಾಮಿ
  • ತುಮಕೂರು – ವಿ.ಸೋಮಣ್ಣ
  • ಬೆಂಗಳೂರು ಕೇಂದ್ರ – ಪಿ.ಸಿ ಮೋಹನ್
  • ಚಿಕ್ಕಬಳ್ಳಾಪುರ – ಡಾ.ಕೆ.ಸುಧಾಕರ್
  • ಹಾಸನ – ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ
  • ಬೆಂಗಳೂರು ದಕ್ಷಿಣ – ತೇಜಸ್ವಿ ಸೂರ್ಯ
  • ಚಾಮರಾಜನಗರ- ಎಸ್ ಬಾಲರಾಜ್
  • ಬೆಂಗಳೂರು ಗ್ರಾಮಾಂತರ – ಡಾ.ಸಿಎನ್ ಮಂಜುನಾಥ್
  • ಕೋಲಾರ – ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿ ಎಂ ಮಲ್ಲೇಶ್ ಬಾಬು
  • ಮೈಸೂರು-ಕೊಡಗು – ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
  • ದಕ್ಷಿಣ ಕನ್ನಡ – ಕ್ಯಾಪ್ಟನ್ ಬ್ರಿಜೇಶ್ ಚೌಟಾ

ಹೀಗಿದೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ

  • ಚಿತ್ರದುರ್ಗ- ಬಿಎನ್ ಚಂದ್ರಪ್ಪ
  • ಬೆಂಗಳೂರು ಗ್ರಾಮಾಂತರ- ಡಿ.ಕೆ ಸುರೇಶ್
  • ಬೆಂಗಳೂರು ಉತ್ತರ – ಪ್ರೊ.ಎಂ.ವಿ ರಾಜೀವ್ ಗೌಡ
  • ಬೆಂಗಳೂರು ಕೇಂದ್ರ – ಮನ್ಸೂರ್ ಆಲಿ ಖಾನ್
  • ಬೆಂಗಳೂರು ದಕ್ಷಿಣ – ಸೌಮ್ಯ ರೆಡ್ಡಿ
  • ಮೈಸೂರು- ಕೊಡಗು – ಎಂ.ಲಕ್ಷ್ಮಣ್
  • ಉಡುಪಿ-ಚಿಕ್ಕಮಗಳೂರು – ಡಾ.ಜಯಪ್ರಕಾಶ್ ಹೆಗ್ಡೆ
  • ತುಮಕೂರು-ಎಸ್ ಪಿ ಮುದ್ದಹನುಮೇಗೌಡ
  • ಕೋಲಾರ- ಕೆ.ವಿ ಗೌತಮ್
  • ಚಿಕ್ಕಬಳ್ಳಾಪುರ- ರಕ್ಷಾ ರಾಮಯ್ಯ
  • ಹಾಸನ- ಎಂ ಶ್ರೇಯಸ್ ಪಟೇಲ್
  • ಮಂಡ್ಯ- ವೆಂಕಟರಮಣಗೌಡ ( ಸ್ಟಾರ್ ಚಂದ್ರು)
  • ದಕ್ಷಿಣ ಕನ್ನಡ – ಪದ್ಮರಾಜ್.ಆರ್
  • ಚಾಮರಾಜನಗರ- ಸುನೀಲ್ ಬೋಸ್
Share.
Exit mobile version