ನವದೆಹಲಿ: 543 ಲೋಕಸಭಾ ಸ್ಥಾನಗಳಲ್ಲಿ ಏಪ್ರಿಲ್.19 ರಂದು ಮೊದಲ ಹಂತದಲ್ಲಿ 21 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 102 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಈ ಮೊದಲ ಹಂತದ ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಬಿದ್ದಿದೆ. ಹೀಗಾಗಿ ಇನ್ಮುಂದೆ ಮನೆ ಮನೆ ಪ್ರಚಾರಕ್ಕೆ ಮಾತ್ರವೇ ಅವಕಾಶ ನೀಡಲಾಗಿದೆ.

ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ರಾಜಕೀಯ ಪಕ್ಷಗಳ ಪ್ರಚಾರವು ಭರದಿಂದ ಸಾಗಿದ್ದು, ಕೇಂದ್ರದಲ್ಲಿ ಬಿಜೆಪಿ ಹ್ಯಾಟ್ರಿಕ್ ಅವಧಿಗೆ ಗೆಲ್ಲಲು ಪ್ರಯತ್ನಿಸುತ್ತಿದ್ದರೆ, ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ಎನ್ಡಿಎಯ ದಶಕದ ಭದ್ರಕೋಟೆಯನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಿವೆ.

543 ಲೋಕಸಭಾ ಸ್ಥಾನಗಳಿಗೆ ಏಪ್ರಿಲ್ 19 ರಂದು ಮತದಾನ ನಡೆಯಲಿದೆ. ಮೊದಲ ಹಂತದಲ್ಲಿ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 102 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

ಲೋಕಸಭಾ ಚುನಾವಣೆ-1: ಪ್ರಮುಖ ಕ್ಷೇತ್ರಗಳು

ಲೋಕಸಭಾ ಚುನಾವಣೆಯ ಮೊದಲ ಹಂತದ ಪ್ರಮುಖ ಕ್ಷೇತ್ರಗಳು ಹೀಗಿವೆ:

ಅಸ್ಸಾಂ: ದಿಬ್ರುಘರ್, ಸೋನಿತ್ಪುರ

ತಮಿಳುನಾಡು: ಚೆನ್ನೈ ಉತ್ತರ, ಚೆನ್ನೈ ದಕ್ಷಿಣ, ಚೆನ್ನೈ ಸೆಂಟ್ರಲ್, ಕೊಯಮತ್ತೂರು, ತೂತುಕುಡಿ, ತಿರುನೆಲ್ವೇಲಿ, ಕನ್ಯಾಕುಮಾರಿ

ಬಿಹಾರ: ಜಮುಯಿ, ಗಯಾ

ಛತ್ತೀಸ್ ಗಢ: ಬಸ್ತಾರ್

ಉತ್ತರ ಪ್ರದೇಶ: ಸಹರಾನ್ಪುರ, ರಾಂಪುರ, ಪಿಲಿಭಿತ್, ಮುಜಾಫರ್ನಗರ

ಜಮ್ಮು ಮತ್ತು ಕಾಶ್ಮೀರ: ಉಧಂಪುರ

ಮಧ್ಯಪ್ರದೇಶ: ಚಿಂದ್ವಾರಾ

ರಾಜಸ್ಥಾನ: ಬಿಕಾನೇರ್

ಪಶ್ಚಿಮ ಬಂಗಾಳ: ಕೂಚ್ಬೆಹಾರ್, ಅಲಿಪುರ್ದುವಾರ್ಸ್

ಮಣಿಪುರ: ಒಳ ಮಣಿಪುರ, ಹೊರ ಮಣಿಪುರ

ಚುನಾವಣೆ 2024: ಪ್ರಮುಖ ಅಭ್ಯರ್ಥಿಗಳು

ಲೋಕಸಭಾ ಚುನಾವಣೆ 2024 ರ ಮೊದಲ ಹಂತದ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು:

ಚಿರಾಗ್ ಪಾಸ್ವಾನ್ (ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ) – ಜಮುಯಿ

ನಕುಲ್ ನಾಥ್ (ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಕಮಲ್ ನಾಥ್ ಅವರ ಪುತ್ರ) – ಚಿಂದ್ವಾರಾ

ತಮಿಳಿಸೈ ಸೌಂದರರಾಜನ್ (ತೆಲಂಗಾಣದ ಮಾಜಿ ರಾಜ್ಯಪಾಲರು) – ಚೆನ್ನೈ ದಕ್ಷಿಣ

ಕೆ ಅಣ್ಣಾಮಲೈ (ತಮಿಳುನಾಡು ಬಿಜೆಪಿ ಅಧ್ಯಕ್ಷ) – ಕೊಯಮತ್ತೂರು

ಕನಿಮೋಳಿ ಕರುಣಾನಿಧಿ (ಡಿಎಂಕೆ ನಾಯಕಿ) – ತೂತುಕುಡಿ

ಪಿಲಿಭಿತ್ – ಜಿತಿನ್ ಪ್ರಸಾದ (ಬಿಜೆಪಿ ನಾಯಕ)

ನಿಸಿತ್ ಪ್ರಾಮಾಣಿಕ್ (ಬಿಜೆಪಿ ನಾಯಕ) – ಕೂಚ್ಬೆಹಾರ್

ಜಿತೇಂದ್ರ ಸಿಂಗ್ (ಹಿರಿಯ ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವ) – ಉಧಂಪುರ

ಮೊದಲ ಹಂತದ ಚುನಾವಣಾ ಬಹಿರಂಗ ಪ್ರಚಾರಕ್ಕೆ ತೆರೆ

ಇಂದು ಮೊದಲ ಹಂತದ ಬಹಿರಂಗ ಚುನಾವಣಾ ಪ್ರಚಾರಕ್ಕೆ ತೆರೆ ಬಿದ್ದಿದೆ. ಹೀಗಾಗಿ ರಾಜಕೀಯ ನಾಯಕರು, ಅಭ್ಯರ್ಥಿಗಳು ಸೇರಿದಂತೆ ಕಾರ್ಯಕರ್ತರು ಮನೆ ಮನೆಗೆ ತೆರಳಿ, ಇನ್ಮುಂದೆ ಪ್ರಚಾರ ಮಾಡೋದಕ್ಕೆ ಮಾತ್ರವೇ ಅವಕಾಶವಿದೆ.

ಪಂಚಭೂತಗಳಲ್ಲಿ ‘ಲೀನವಾದ’ ದ್ವಾರಕೀಶ್‌, ಕನ್ನಡದ ಕುಳ್ಳ ಇನ್ನೂ ನೆನಪು ಮಾತ್ರ!

GOOD NEWS: ಇಪಿಎಫ್ ಹಿಂಪಡೆಯುವ ನಿಯಮಗಳಲ್ಲಿ ಬದಲಾವಣೆ, ಈಗ ಮೂರು ದಿನಗಳಲ್ಲಿ ಸಿಗಲಿದೆ ಒಂದು ಲಕ್ಷ ಹಣ!

Share.
Exit mobile version