ಬೆಂಗಳೂರು: ನಗರದಲ್ಲಿ ಮೊಬೈಲ್ ಕಳ್ಳತನ ( Mobile Theft ) ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸ್ಮಾರ್ಟ್ ಪೋನ್ ( Smart Phone ) ಕಳ್ಳತನವಾಗಿದೆ ಎಂಬುದಾಗಿ ಪೊಲೀಸರಿಗೆ ದೂರು ನೀಡಿದ್ರೇ.. ಕೇವಲ ಎನ್ ಸಿ ಆರ್ ಹಾಕಿ ಕಳಿಸುತ್ತಿದ್ದದ್ದು ಹೆಚ್ಚಾಗಿತ್ತು. ಆದ್ರೇ ಇನ್ಮುಂದೆ ಬೆಂಗಳೂರಿನಲ್ಲಿ ಮೊಬೈಲ್ ಕಳ್ಳತನ ಪ್ರಕರಣಗಳಲ್ಲಿಯೂ ಕಡ್ಡಾಯವಾಗಿ ಎಫ್ಐಆರ್ ದಾಖಲಿಸುವಂತೆ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ( IPS Prathap Reddy ) ಖಡಕ್ ಸೂಚನೆ ನೀಡಿದ್ದಾರೆ.

ಶೀಘ್ರವೇ ‘ಪೌರ ಕಾರ್ಮಿಕ’ರ ಬೇಡಿಕೆ ಈಡೇರಿಕೆಗೆ ಕ್ರಮ – ಸಚಿವ ಎಂಟಿಬಿ ನಾಗರಾಜ್

ಇಂದು ನಡೆದಂತ ವಾರ್ಷಿಕ ಸಭೆಯ ಬಳಿಕ ಮಾತನಾಡಿದಂತ ಅವರು, ಈ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚಿಸಲಾಗಿದೆ. ಮೊಬೈಲ್ ಕಳೆದು ಹೋದರೇ ಇ-ಲಾಸ್ ಸಾಫ್ಟ್ ವೇರ್ ನಲ್ಲಿ ದೂರು ನೀಡಬಹುದಾಗಿದೆ. ಒಂದು ವೇಳೆ ಮೊಬೈಲ್ ರಾಬರಿಯಾಗಿದ್ದರೇ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಬಹುದು. ಈ ಪ್ರಕರಣಗಳ ಸಂಬಂಧ ಪೊಲೀಸರು ದೂರು ಪಡೆದು ಎಫ್ಐಆರ್ ದಾಖಲಿಸೋದು ಕಡ್ಡಾಯವಾಗಿದೆ ಎಂದು ತಿಳಿಸಿದರು.

‘ಬಕೆಟ್ ರಾಜಕಾರಣ’ವನ್ನು ‘ಸಿ.ಟಿ ರವಿ’ ನೋಡಿ ಕಲಿಯಬೇಕು – ಶಾಸಕ ಜಮೀರ್ ಅಹ್ಮದ್

ಬೆಂಗಳೂರಿನಲ್ಲಿ ಮೊಬೈಲ್ ಕಳ್ಳ ತನ ಪ್ರಕರಣಗಳ ಹೆಚ್ಚು ಹೆಚ್ಚು ನಡೆಯುತ್ತಿವೆ. ಅನೇಕರು ಇ-ಲಾಸ್ ಸಾಫ್ಟ್ ವೇರ್ ನಲ್ಲಿ ದೂರು ದಾಖಲಿಸಿದ್ರೇ, ಮತ್ತೆ ಕೆಲವರು ಠಾಣೆಗೆ ತೆರಳಿ ದೂರು ನೀಡುತ್ತಿದ್ದಾರೆ. ಈ ದೂರುಗಳ ಬಗ್ಗೆ ಎಫ್ಐಆರ್ ದಾಖಲಿಸದೇ ನಿರ್ಲಕ್ಷ್ಯ ತೋರಿದ್ರೇ.. ಅಂತವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ ಎಚ್ಚರಿಕೆ ನೀಡಿದರು.

ಯಾರು ಬೇಕಾದರೂ ‘ಶ್ರೀಮಂತ’ರಾಗಬಹುದು: ಅದೇಗೆ ಎನ್ನುವ ‘ಸಿಂಪಲ್ ಮಾಹಿತಿ’ ಇಲ್ಲಿದೆ.!

Share.
Exit mobile version