ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ಏರ್ ಕಮೋಡೋರ್ ಸಂಜಯ್ ಶರ್ಮಾ ಮತ್ತು ಫ್ಲೈಯಿಂಗ್ ಆಫೀಸರ್ ಅನನ್ಯಾ ಶರ್ಮಾ ಭಾರತೀಯ ವಾಯುಪಡೆಯ (IAF) ಯುದ್ಧ ವಿಮಾನಗಳನ್ನ ಒಟ್ಟಿಗೆ ಹಾರಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಹೌದು, ಈ ಸಾಧನೆಗೈದ ಮೊದಲ ತಂದೆ-ಮಗಳ ಜೋಡಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್‌ಲ್ಲಿ ಬಿಟೆಕ್ ಮುಗಿಸಿರುವ ಆನನ್ಯ ಐಎಎಫ್‌ನ ಫ್ಲೈಯಿಂಗ್ ಬ್ರಾಂಚ್ ತರಬೇತಿಗೆ ಆಯ್ಕೆಯಾದರು. ಡಿಸೆಂಬರ್ 2021ರಲ್ಲಿ ಅವರನ್ನ ಫೈಟರ್ ಪೈಲಟ್ ಆಗಿ ನಿಯೋಜಿಸಲಾಯಿತು. ಅನನ್ಯಾ ಅವರ ತಂದೆ ಏರ್ ಕಮೋಡೋರ್ ಸಂಜಯ್ ಶರ್ಮಾ ಅವರನ್ನ 1989ರಲ್ಲಿ ಐಎಎಫ್ನ ಫೈಟರ್ ಸ್ಟ್ರೀಮ್ನಲ್ಲಿ ನಿಯೋಜಿಸಲಾಯಿತು. ಇನ್ನೀವ್ರು ಮಿಗ್ -21 ಚದರನ್ ಮತ್ತು ಮುಂಚೂಣಿಯ ಫೈಟರ್ ಸ್ಟೇಷನ್ ಅನ್ನು ಕಮಾಂಡರ್ ಆಗಿ ಹೊಂದಿರುವ ಯುದ್ಧ ಕಾರ್ಯಾಚರಣೆಗಳ ವ್ಯಾಪಕ ಅನುಭವವನ್ನ ಹೊಂದಿದ್ದಾರೆ.

ಮೇ 30, 2022 ರಂದು ತಂದೆ-ಮಗಳು ಇಬ್ಬರೂ ಬೀದರ್ ವಾಯುನೆಲೆಯಲ್ಲಿ ಹಾಕ್ -132 ವಿಮಾನದ ಅದೇ ರಚನೆಯಲ್ಲಿ ಹಾರಾಟ ನಡೆಸುವ ಮೂಲಕ ಇತಿಹಾಸ ಸೃಷ್ಟಿಸಿದರು. ಅಲ್ಲಿ ಫ್ಲೈಯಿಂಗ್ ಆಫೀಸರ್ ಅನನ್ಯಾ ಶರ್ಮಾ ಐಎಎಫ್‌ನ ವೇಗದ ಮತ್ತು ಹೆಚ್ಚು ಉತ್ಕೃಷ್ಟ ಯುದ್ಧ ವಿಮಾನಗಳಿಗೆ ಪದವಿ ಪಡೆಯುವ ಮೊದಲು ತರಬೇತಿ ಪಡೆಯುತ್ತಿದ್ದಾರೆ.

ಐಎಎಫ್‌ನಲ್ಲಿ ಈ ಹಿಂದೆ ತಂದೆ ಮತ್ತು ಅವರ ಮಗಳು ಮಿಷನ್ಗಾಗಿ ಒಂದೇ ಫೈಟರ್ ರಚನೆಯ ಭಾಗವಾಗಿದ್ದ ಯಾವುದೇ ಉದಾಹರಣೆ ಇಲ್ಲ.

Share.
Exit mobile version