ಹಾವೇರಿ: ದೇವಗಿರಿ ಬ್ಯಾಂಕ ಆಫ್ ಬರೋಡಾ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ವಿಬ್‍ಸೆಟಿಯಲ್ಲಿ 10 ದಿನಗಳ “ಪಾಸ್ಟ್ ಫುಡ್ ಸ್ಟಾಲ್ ಉದ್ಯಮಿ” ತರಬೇತಿಗೆ ಜಿಲ್ಲೆಯ ನಿರುದ್ಯೋಗಿ ಯುವಕ ಮತ್ತು ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.

ತರಬೇತಿಯಲ್ಲಿ ಪಾನಿಪುರಿ, ಸೇವಪುರಿ, ದಹಿಪುರಿ, ಏಗ್ಗರೈಸ್, ನೂಡಲ್ಸ್, ಗೋಬಿಮಂಚೂರಿ, ಪಾವಬಾಜಿ, ವಡಾಪಾವ್, ಬ್ರೆಡ್, ಕೇಕ್ ತಯಾರಿಕೆ ಕುರಿತು ತರಬೇತಿ ನೀಡಲಾಗುದು. ಅಭ್ಯರ್ಥಿಗಳು 18 ರಿಂದ 45 ವರ್ಷದೊಳಗಿರಬೇಕು. ಜಿಲ್ಲೆಯ ಬಿ.ಪಿ.ಎಲ್. ಕಾರ್ಡ್ ಹೊಂದಿದ ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿದೆ.

BIG NEWS: ಬಿಜೆಪಿ ಶಿವಮೊಗ್ಗದಲ್ಲಿ ಕೋಮು ರಾಜಕೀಯದ ಪ್ರಯೋಗಶಾಲೆಯ ಬ್ರಾಂಚ್ ತೆರೆದಂತಿದೆ – ಕಾಂಗ್ರೆಸ್

ಆಸಕ್ತ ಅಭ್ಯರ್ಥಿಗಳು ಜಾತಿ ಮತ್ತು ಆದಾಯ, ಆಧಾರ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಬಿಪಿಎಲ್ ಕಾರ್ಡ್, ಇತ್ತೀಚಿನ ಭಾವಚಿತ್ರ, ಜನ್ಮ ದಿನಾಂಕ ದೃಢೀಕರಣ ಪ್ರಮಾಣ ಪತ್ರದ ಝೆರಾಕ್ಸ್ ಪ್ರತಿಗಳನ್ನು ತರಬೇಕು. ತರಬೇತಿಯು ಊಟ ವಸತಿಯೊಂದಿಗೆ ಉಚಿತವಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ, ನಿರ್ದೇಶಕರು, ವಿಜಯ ಬ್ಯಾಂಕ್ ಸ್ವ-ಉದ್ಯೋಗ ತರಬೇತಿ ಸಂಸ್ಥೆ, ದೇವಗಿರಿ, ಹಾವೇರಿ ಮೊ. 9611645907 ಸಂಪರ್ಕಿಸಲು ಕೋರಲಾಗಿದೆ.

BREAKING NEWS : ಕರ್ನಾಟಕದಲ್ಲಿ ನಿಲ್ಲದ ​’ಸಾವರ್ಕರ್​ ಫ್ಲೆಕ್ಸ್ ‘ ವಿವಾದ : ಉಡುಪಿಯಲ್ಲೂ ‘ PFI ಸಂಘಟನೆ ತೀವ್ರ ‘ ವಿರೋಧ, ಬಿಗಿ ‘ ಪೊಲೀಸ್ ಬಂದೋಬಸ್ತ್’

Share.
Exit mobile version