ಬೆಂಗಳೂರು : ತೋಟಗಾರಿಕೆ ಇಲಾಖೆ ವತಿಯಿಂದ 2024-25 ನೇ ಸಾಲಿನಲ್ಲಿ ಮಂಗಾರು ಮತ್ತು ಹಿಂಗಾರು ಹಂಗಾಮುಗಳ ಮುರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯ ಅನುಷ್ಟಾನಕ್ಕೆ ಯೋಜನೆವಾರು, ಬೆಳೆವಾರು ರೈತರ ವಿವರವನ್ನು ಆನ್ ಲೈನ್ ಪೊರ್ಟಲ್ (www.samrakshane.karnataka.gov.in) ನಲ್ಲಿ ಮಾತ್ರ ನೊಂದಾಯಿಸಲು ಆದೇಶಿಸಿದ್ದು, ಹವಾಮಾನ ಆಧಾರಿತ ಬೆಳೆಗಳಾದ ಮಾವು ಮತ್ತು ದ್ರಾಕ್ಷಿ ಬೆಳೆಯ ಬೆಳೆ ವಿಮೆ ನೊಂದಣಿಗಾಗಿ ಆರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಬೆಳೆ ವಿಮೆ ಪಡೆಯಲಿಚ್ಚಿಸುವ ರೈತರು ಪಹಣಿ, ಬ್ಯಾಂಕ್ ಖಾತೆ ಪುಸ್ತಕ, ಆಧಾರ್ ಸಂಖ್ಯೆ ನಕಲು ಪ್ರತಿ ಮತ್ತು ಸ್ವಯಂ ಘೋಷಿತ ಬೆಳೆ ವಿವರಗಳೊಂದಿಗೆ ರಾಷ್ಟ್ರೀಯ ಬ್ಯಾಂಕ್, ಸಾಮಾನ್ಯ ಸೇವಾ ಕೆಂದ್ರ/ ಗ್ರಾಮ ಒನ್ ಗಳಲ್ಲಿ ವಿಮೆಗೆ ನೊಂದಾಯಿಸಕೊಳ್ಳಬಹುದು. ಬೆಳೆಸಾಲ ಪಡೆದ ಮತ್ತು ಪಡೆಯದ ರೈತರು ಪಾವತಿಸಬೇಕಾದ ವಿಮಾಕಂತಿನ ಮೊತ್ತವು ಒಂದೇ ಆಗಿದ್ದು, ರೈತರ ಪಾಲಿನ ಮೊತ್ತವು ಬೆಳೆ ವಿಮೆ ಮೊತ್ತಕ್ಕೆ ಶೇ. 5 ರಷ್ಟು ( ಪ್ರತಿ ಹೆಕ್ಷೇರ್ ಗೆ ಮಾವು- ರೂ.4000 ಮತ್ತು ದ್ರಾಕ್ಷಿ ರೂ. 14000 ಸಾವಿರ ಆಗಿರುತ್ತದೆ. ರೈತರ ನೋಂದಣಿ, ವಿಮಾ ಮೊತ್ತ ಪಾವತಿಸಲು ಜುಲೈ 31 ಕೊನೆಯ ದಿನವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ತೋಟಗಾರಿಕೆ/ ಕೃಷಿ ಇಲಾಖೆ/ ಬ್ಯಾಂಕ್ ಅಧಿಕಾರಿಗಳು, ಬೆಂಗಳೂರು ನಗರ ಜಿಲ್ಲೆ ಶ್ರೀ. ರೂಪ್ಕಿಶೋರ್, ಅಗ್ರಿಕಲ್ಚಿರ್ಇನ್ಸುರೆನ್ಸ್ಕಂಪೆನಿ ವಿಮಾಸಂಸ್ಥೆಯ ಪ್ರತಿನಿಧಿ ಮೊಬೈಲ್ ಸಂಖ್ಯೆ: 9505872795, ಸಹಾಯವಾಣಿ ಸಂಖ್ಯೆ: 1800-425-0505, ತೋಟಗಾರಿಕೆ ಉಪನಿರ್ದೇಶಕರು, ಬೆಂಗಳೂರು ನಗರ ಜಿಲ್ಲೆ, ದೂರವಾಣಿ ಸಂಖ್ಯೆ: 080-22860640, 9448999213 ಹಾಗೂ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಆನೇಕಲ್ ತಾಲ್ಲೂಕು , ದೂರವಾಣಿ ಸಂಖ್ಯೆ: 9845268382, ಬೆಂಗಳೂರು ಉತ್ತರ ಮತ್ತು ಯಲಹಂಕ ತಾಲ್ಲೂಕು ದೂರವಾಣಿ ಸಂಖ್ಯೆ: 9036043217, ಬೆಂಗಳೂರು ದಕ್ಷಿಣ ತಾಲ್ಲೂಕು ದೂರವಾಣಿ ಸಂಖ್ಯೆ: 9538953949 ಮತ್ತು ಬೆಂಗಳೂರು ಪೂರ್ವ ತಾಲ್ಲೂಕು ದೂರವಾಣಿ ಸಂಖ್ಯೆ; 9342255556 ಅನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share.
Exit mobile version