ಹಾವೇರಿ: ಕೃಷಿ ಇಲಾಖೆಯಿಂದ ಪ್ರಸಕ್ತ 2022-23 ನೇ ಸಾಲಿಗೆ ಹಾವೇರಿ ತಾಲೂಕಿನ ಮೂರು ಹೋಬಳಿಗಳಾದ ಹಾವೇರಿ, ಕರ್ಜಗಿ ಹಾಗೂ ಗುತ್ತಲ ರೈತ ಸಂಪರ್ಕ ಕೇಂದ್ರಗಳ ಮೂಲಕ ರಿಯಾಯಿತಿ ದರದಲ್ಲಿ ರೈತರಿಗೆ ತಾಡಪತ್ರಿ ವಿತರಿಸಲಾಗುತ್ತಿದೆ.

BIG BREAKING NEWS: ಐಸಿಸಿ ಮಾಧ್ಯಮ ಹಕ್ಕು ಪಡೆದ ಡಿಸ್ನಿ ಸ್ಟಾರ್ – ಐಸಿಸಿ ಘೋಷಣೆ | ICC media rights

ತಾಡಪತ್ರಿ ಪಡೆಯಲು ರೈತರು ಆಧಾರಕಾರ್ಡ್, ಜಮೀನಿನ ಉತಾರ, ಬ್ಯಾಂಕ್ ಪಾಸ್‍ಬುಕ್ ಝರಾಕ್ಸ್ ಪ್ರತಿಯೊಂದಿಗೆ ಅರ್ಜಿಯನ್ನು ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರಗಳಿಗೆ ದಿನಾಂಕ 05-09-2022 ರೊಳಗಾಗಿ ಸಲ್ಲಿಸಬೇಕು. ದಿನಾಂಕ 12-09-2022 ರಿಂದ 16-09-2022 ರವರೆಗೆ ತಾಡಪತ್ರಿಗಳನ್ನು ದಾಸ್ತಾನಿನ ಪ್ರಮಾಣಕ್ಕನುಗುಣವಾಗಿ ಹಂಚಿಕೆ ಮಾಡಲಾಗುತ್ತದೆ.

‘ವಾಹನ ಚಾಲನಾ ತರಬೇತಿ’ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಉಚಿತ ತರಬೇತಿಗಾಗಿ ಬಿಎಂಟಿಸಿಯಿಂದ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಸಿದ ರೈತರು ತಮ್ಮ ತಾಡಪತ್ರಿಗಳನ್ನು ತೆಗೆದುಕೊಂಡು ಹೋಗಬೇಕು, ತಡಮಾಡಿದಲ್ಲಿ ಅವಶ್ಯಕತೆ ಇದ್ದ ರೈತರಿಗೆ ಹಂಚಿಕೆ ಮಾಡಲಾಗುವುದು. ಈ ಹಿಂದಿನ ಮೂರು ವರ್ಷಗಳಲ್ಲಿ ತಾಡಪತ್ರಿಗಳನ್ನು ಪಡೆದ ರೈತ ಫಲಾನುಭವಿಗಳಿಗೆ ವಿತರಿಸಲಾಗುವುದಿಲ್ಲ.

BREAKING NEWS: ಪೋಕ್ಸೋ ಪ್ರಕರಣ: ನಾನು ಸಮರಕ್ಕೂ ಸಿದ್ಧ, ಸಂಧಾನಕ್ಕೂ ಬದ್ಧ – ಮುರುಘಾ ಶ್ರೀ | Murugha Matt Sri

ಹೆಚ್ಚಿನ ಮಾಹಿತಿಗಾಗಿ ತಮ್ಮ ಗ್ರಾಮಕ್ಕೆ ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಬೇಕು ಎಂದು ಹಾವೇರಿ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share.
Exit mobile version