BREAKING: ಮಂಡ್ಯದಲ್ಲಿ ಹೆಜ್ಜೇನು ದಾಳಿಗೆ ರೈತ ಬಲಿ

ಮಂಡ್ಯ: ಜಿಲ್ಲೆಯಲ್ಲಿ ಹೆಜ್ಜೇನು ದಾಳಿಯಿಂದಾಗಿ ರೈತನೊಬ್ಬ ಸಾವನ್ನಪ್ಪಿರುವಂತ ಘಟನೆ ಮಳವಳ್ಳಿಯ ಕಂದೇಗಾಲ ಗ್ರಾಮದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಕಂದೇಗಾಲ ಗ್ರಾಮದ ರೈತ ನಿಂಗೇಗೌಡ ಎಂಬುವರು ರೇಷ್ಮೆ ಸೊಪ್ಪು ಕೊಯ್ಯೋದಕ್ಕೆ ತಮ್ಮ ಜಮೀನಿಗೆ ತೆರಳಿದ್ದರು. ಈ ವೇಳೆಯಲ್ಲಿ ರೈತ ನಿಂಗೇಗೌಡ ಅವರ ಮೇಲೆ ಹೆಜ್ಜೇನು ದಾಳಿ ನಡೆಸಿದೆ. ಹೆಜ್ಜೇನು ದಾಳಿಯಿಂದಾಗಿ ತೀವ್ರವಾಗಿ ರೈತ ನಿಂಗೇಗೌಡ ಅಸ್ವಸ್ಥಗೊಂಡಿದ್ದರು. ಅವರನ್ನು ಮಳವಳ್ಳಿಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೇ ಚಿಕಿತ್ಸೆ ಫಲಿಸದೇ ರೈತ ನಿಂಗೇಗೌಡ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. BREAKING: … Continue reading BREAKING: ಮಂಡ್ಯದಲ್ಲಿ ಹೆಜ್ಜೇನು ದಾಳಿಗೆ ರೈತ ಬಲಿ