ಮುಂಬೈ: ಟೀಂ ಇಂಡಿಯಾ ಬ್ಯಾಟರ್ ಕಿಂಗ್ ಕೊಹ್ಲಿಗೆ ಇವತ್ತು ಹುಟ್ಟುಹಬ್ಬದ ಸಂಭ್ರಮ. ಸದ್ಯ ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕಾಗಿ ಮೆಲ್ಬೋರ್ನ್ ನಲ್ಲಿ ಇರುವ ವಿರಾಟ್‌ ಕೊಹ್ಲಿ ತಮ್ಮ ತಂಡ ಹಾಗೂ ಸಿಬ್ಬಂದಿ ಜೊತೆ ಕೇಕ್ ಕಟ್ ಮಾಡಿ 34ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

‘ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ, ಸ್ವಾರ್ಥ ರಾಜಕಾರಣ’ : ಹಿಮಾಚಲ ಪ್ರದೇಶದ ಸೋಲನ್ ನಲ್ಲಿ ಪ್ರಧಾನಿ ಮೋದಿ

ವಿರಾಟ್ ಬರ್ತಡೇ ಹಿನ್ನೆಲೆಯಲ್ಲಿ ಅಭಿಮಾನಿಗಳು ತಮ್ಮ ರೀತಿಯಲ್ಲಿ ನೆಚ್ಚಿನ ಆಟಗಾರನಿಗೆ ಶುಭ ಕೋರಿದ್ದಾರೆ ಆದರೆ ಮುಂಬೈನಲ್ಲಿ 5 ಸಾವಿರ ಕೆಂಪು ಚೆಂಡುಗಳಿಂದ ಅರಳಿದ ವಿರಾಟ್ ಅವರ ಮುಖದ ಬೃಹತ್ ಚಿತ್ರ ನೋಡುಗರ ಕಣ್ಮನ ಸೆಳೆದಿದೆ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಮ್ಯೂರಲ್ ಕಲಾವಿದ ಗುರ್ಸೀತ್ ಸಿಂಗ್ ಅವರು ಶನಿವಾರ ಮುಂಬೈನ ಕಾರ್ಟರ್ ರೋಡ್ ಆಂಫಿಥಿಯೇಟರ್‌ನಲ್ಲಿ 5,000 ಕೆಂಪು ಕ್ರಿಕೆಟ್ ಚೆಂಡುಗಳನ್ನು ಬಳಸಿ ಕೊಹ್ಲಿಯ ಮುಖದ 20 ಅಡಿ ಉದ್ದ ಮತ್ತು 20 ಅಡಿ ಅಗಲದ ಮ್ಯೂರಲ್ ಅನ್ನು ರಚಿಸಿದ್ದಾರೆ. ಆ ಮೂಲಕ ಇಲ್ಲಿ ಭಾರತೀಯ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯ ಸಾವಿರಾರು ಅಭಿಮಾನಿಗಳನ್ನು ಒಟ್ಟುಗೂಡಿಸಿದರು.

ಇವತ್ತು ಬೆಳಿಗ್ಗೆ 8:00 ಗಂಟೆಗೆ ಆರಂಭವಾದ ಈ ರಚನೆಯ ಮ್ಯಾರಥಾನ್ ಒಂಬತ್ತು ಗಂಟೆಯ ವೇಳೆಗೆ ಮುಕ್ತಾಯವಾಗಿ ವಿರಾಟ್ ಅವರ ರೂಪ ಚೆಂಡುಗಳನ್ನು ಕಾಣಿಸಿದೆ. ಇದನ್ನು ನೋಡುತ್ತಿದ್ದಂತೆ ಅಭಿಮಾನಿಗಳು ಸಖತ್ ರೋಮಾಂಚನಗೊಂಡರು. ಮ್ಯೂರಲ್ ಕಲಾವಿದ ಗುರ್ಸೀತ್ ಅವರ ಕಾರ್ಯಕ್ಕೆ ಚೀಕು ಫ್ಯಾನ್ಸ್ ಕೂಡಲ ಕೈಜೋಡಿಸಿದ್ರು.

ಶ್ರೇಷ್ಠ ಕ್ರಿಕೆಟಿಗನಿಗೆ ನೀಡಿದ ಗೌರವವು ಅದ್ಭುತವಾದದ್ದೇನೂ ಅಲ್ಲ. ಆದರೆ ವಿರಾಟ್ ಕೊಹ್ಲಿ ಅವರ ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮಾ ಅವರ ಉಪಸ್ಥಿತಿಯು ಆಚರಣೆಯನ್ನು ಇನ್ನಷ್ಟು ವಿಶೇಷಗೊಳಿಸಿತು.

BIGG NEWS: ಎಲಾನ್ ಮಸ್ಕ್ ವಜಾಗೊಳಿಸಿದ ಉದ್ಯೋಗಿಗಳಿಗೆ ಕ್ಷಮೆಯಾಚಿಸಿದ ಟ್ವಿಟರ್ ಸಂಸ್ಥಾಪಕ ‘ಜ್ಯಾಕ್ ಡಾರ್ಸೆ’

Share.
Exit mobile version