ನವದೆಹಲಿ : ತುಟ್ಟಿಭತ್ಯೆ (ಡಿಎ) ಹೆಚ್ಚುವರಿ ಕಂತು ಜುಲೈ 1, 2022 ರಿಂದ ಜಾರಿಗೆ ಬರಲಿದೆ ಎಂದು ಇತ್ತೀಚೆಗೆ ವಾಟ್ಸಾಪ್ ಸಂದೇಶವನ್ನ ಸ್ವೀಕರಿಸಿದವರಲ್ಲಿ ನೀವೂ ಒಬ್ಬರಾಗಿದ್ರೆ ನಿಮಗಿದು ಮುಖ್ಯ ಮಾಹಿತಿಯಾಗಲಿದೆ. ಈ ಸಂದೇಶ ನಕಲಿ ಎಂದು ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (ಪಿಐಬಿ) ಈಗ ಮಾಹಿತಿ ನೀಡಿದೆ.

“ತುಟ್ಟಿಭತ್ಯೆಯ ಹೆಚ್ಚುವರಿ ಕಂತು 01.07.2022 ರಿಂದ ಜಾರಿಗೆ ಬರಲಿದೆ ಎಂದು ವಾಟ್ಸಾಪ್‍’ನಲ್ಲಿಹರಿದಾಡುತ್ತಿರುವ ಆದೇಶದಲ್ಲಿ ತಿಳಿಸಲಾಗಿದೆ. ಈ ಆದೇಶ ನಕಲಿಯಾಗಿದೆ. ವೆಚ್ಚ ಇಲಾಖೆ, ಹಣಕಾಸು ಸಚಿವಾಲಯವು ಅಂತಹ ಯಾವುದೇ ಆದೇಶವನ್ನು ಹೊರಡಿಸಿಲ್ಲ” ಎಂದು ಪಿಐಬಿ ಟ್ವೀಟ್ ಮಾಡಿದೆ.

ಪಿಐಬಿಯಿಂದ ಫ್ಯಾಕ್ಟ್ ಚೆಕ್ ಪಡೆಯುವುದು ಹೇಗೆ?

ಪಿಐಬಿ ಜನರಿಗೆ ನಕಲಿಯಾಗಬಹುದಾದ ಚಿತ್ರಗಳು, ವೀಡಿಯೊಗಳು ಮತ್ತು ಲೇಖನಗಳನ್ನು ಕಳುಹಿಸಲು ಅನುಮತಿಸುತ್ತದೆ. ಇದು ಅವರಿಗಾಗಿ ಫ್ಯಾಕ್ಟ್-ಚೆಕ್ ನಡೆಸುತ್ತದೆ. ಜನರು ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಫ್ಯಾಕ್ಟ್ ಚೆಕ್ ಮಾಡಬಹುದು.

* www.factcheck.pib.gov.in ಹೋಗಿ ಮತ್ತು ಚಿತ್ರ ಅಥವಾ ವೀಡಿಯೊವನ್ನು ಅಪ್ ಲೋಡ್ ಮಾಡಿ.

* ಅಥವಾ, ವಾಟ್ಸಾಪ್ ಸಂಖ್ಯೆ +91-8799711259 ಗೆ ಸಂದೇಶದ ಮೂಲಕ ಚಿತ್ರ ಅಥವಾ ವೀಡಿಯೊವನ್ನು ಕಳುಹಿಸಿ

* ಅಥವಾ, ಇಮೇಲ್ ವಿಳಾಸಕ್ಕೆ ಇ-ಮೇಲ್ ಮೂಲಕ ಫೈಲ್ ಗಳನ್ನು ಕಳುಹಿಸಿ pibfactcheck@gmail.com

Share.
Exit mobile version