ನವದೆಹಲಿ : ಇತ್ತೀಚೆಗೆ ಗೋವಾ ಸಿನಿಮೋತ್ಸವದಲ್ಲಿ ಜ್ಯೂರಿ ಕಮಿಟಿ ಅಧ್ಯಕ್ಷ ನಡಾವ್ ಲಪಿಡ್ `ದಿ ಕಾಶ್ಮೀರಿ ಫೈಲ್ಸ್’ ಸಿನಿಮಾ ಬಗ್ಗೆ ಅವಹೇಳನಕಾರಿ ಹೇಳಿಕೆಯೊಂದನ್ನ ಕೊಟ್ಟಿದ್ದರು. ಇದೊಂದು ಪ್ರಚಾರದ, ಅಶ್ಲೀಲ ಸಿನಿಮಾ ಎಂದು ನಡಾವ್ ಕಿಡಿಕಾರಿದ್ದರು.

BIG BREAKING NEWS: 15 ಸಾವಿರ ಶಿಕ್ಷಕರ ನೇಮಕಾತಿ 1:1 ತಾತ್ಕಾಲಿಕ ಆಯ್ಕೆ ಪಟ್ಟಿಗೆ ಹೈಕೋರ್ಟ್ ತಡೆಯಾಜ್ಞೆ | Karnataka Teacher Recruitment

ಇದೀಗ ನಡಾವ್ ಹೇಳಿಕೆಗೆ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ರಿಯಾಕ್ಟ್ ಮಾಡಿದ್ದಾರೆ. ನಮ್ಮ ಚಿತ್ರದಲ್ಲಿ ಯಾವುದೇ ದೃಶ್ಯ ಕಾಲ್ಪನಿಕ ಅಂತಾ ಸಾಬೀತಾದ್ರೆ ತಾವು ಸಿನಿಮಾ ಮಾಡುವುದನ್ನೇ ಬಿಟ್ಟು ಬಿಡ್ತೀನಿ ಎಂದು ಓಪನ್ ಚಾಲೆಂಜ್ ಹಾಕಿದ್ದಾರೆ.

BIG BREAKING NEWS: 15 ಸಾವಿರ ಶಿಕ್ಷಕರ ನೇಮಕಾತಿ 1:1 ತಾತ್ಕಾಲಿಕ ಆಯ್ಕೆ ಪಟ್ಟಿಗೆ ಹೈಕೋರ್ಟ್ ತಡೆಯಾಜ್ಞೆ | Karnataka Teacher Recruitment

ನಡಾವ್ ಹೇಳಿಕೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ನಡಾವ್‌ಗೆ ಟಕ್ಕರ್ ಕೊಡುವಂತಹ ವೀಡಿಯೊವೊಂದನ್ನ ವಿವೇಕ್ ಶೇರ್ ಮಾಡಿದ್ದಾರೆ. ‘ದಿ ಕಾಶ್ಮೀರ್ ಫೈಲ್ಸ್ ವಿರುದ್ಧ ಮಾತನಾಡಿದ ನಡಾವ್ ಲಪಿಡ್ ಮನಸ್ಥಿತಿ ಬಗ್ಗೆ ವಿವೇಕ್ ಅಗ್ನಿಹೋತ್ರಿ ಟೀಕೆ ಮಾಡಿದ್ದಾರೆ. ಈ ವಿಡಿಯೋಗೆ ಅಭಿಮಾನಿಗಳು ಬಗೆಬಗೆಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

BIG BREAKING NEWS: 15 ಸಾವಿರ ಶಿಕ್ಷಕರ ನೇಮಕಾತಿ 1:1 ತಾತ್ಕಾಲಿಕ ಆಯ್ಕೆ ಪಟ್ಟಿಗೆ ಹೈಕೋರ್ಟ್ ತಡೆಯಾಜ್ಞೆ | Karnataka Teacher Recruitment

ಜ್ಯೂರಿ ಕಮಿಟಿಯ ಅಧ್ಯಕ್ಷ ಆ ರೀತಿ ಹೇಳಿಕೆ ನೀಡಿದ್ದು ನನಗೆ ಹೊಸದೇನೂ ಅನಿಸುತ್ತಿಲ್ಲ. ಭಯೋತ್ಪಾದಕ ಸಂಘಟನೆಗಳು, ಅರ್ಬನ್ ನಕ್ಸಲರು, ತುಕ್ಡೆ ತುಕ್ಡೆ ಗ್ಯಾಂಗ್ ಸದಸ್ಯರು ಮೊದಲಿನಿಂದಲೂ ಇದನ್ನೇ ಹೇಳುತ್ತಾ ಬಂದಿದ್ದಾರೆ. ಆದರೆ ಆಶ್ಚರ್ಯ ಎನಿಸಿದ್ದು ಏನೆಂದರೆ, ಭಾರತ ಸರ್ಕಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸುವ ವಿಚಾರಕ್ಕೆ ಬೆಂಬಲ ನೀಡಲಾಯಿತು. ಭಾರತದ ಕೆಲವು ಜನರೇ ಆ ವಿಚಾರವನ್ನು ದೇಶ ವಿರೋಧಿಯಾಗಿ ಬಳಸಿಕೊಂಡಿದ್ದಾರೆ ಎಂದು ವಿವೇಕ್ ಅಗ್ನಿಹೋತ್ರಿ ಹೇಳಿದ್ದಾರೆ.

ನಾಲ್ಕು ವರ್ಷದ ಹಿಂದೆ ನಾನು ದಿ ಕಾಶ್ಮೀರ್ ಫೈಲ್ಸ್ ಚಿತ್ರಕ್ಕಾಗಿ ಅಧ್ಯಯನ ಶುರುಮಾಡಿದಾಗ ಅದನ್ನು ಪ್ರಚಾರ ಎಂದು ಹೇಳಿದ್ದು ಇದೇ ಜನರು. 700 ಜನರು ಸಂದರ್ಶನ ನಡೆಸಿ ಈ ಸಿನಿಮಾ ಮಾಡಲಾಯ್ತು. ಆ 700 ಜನರ ಕುಟುಂಬದವರ ಮೇಲೆ ಕೊಲೆ-ಅತ್ಯಾಚಾರ ಆಗಿದ್ದು ಅಶ್ಲೀಲ ಮತ್ತು ಪ್ರಚಾರವೇ ಇಂದಿಗೂ ಆ ನೆಲದಲ್ಲಿ ಹಿಂದೂಗಳನ್ನು ಆರಿಸಿ ಕೊಲ್ಲಲಾಗುತ್ತಿದೆ. ಕಾಶ್ಮೀರದಲ್ಲಿ ಹತ್ಯಾಕಾಂಡ ಆಗಿರಲೇ ಇಲ್ಲ ಎಂದು ಆಗಾಗ ಈ ವಿಚಾರ ಚರ್ಚೆ ಆಗುತ್ತಲೇ ಇರುತ್ತದೆ.

BIG BREAKING NEWS: 15 ಸಾವಿರ ಶಿಕ್ಷಕರ ನೇಮಕಾತಿ 1:1 ತಾತ್ಕಾಲಿಕ ಆಯ್ಕೆ ಪಟ್ಟಿಗೆ ಹೈಕೋರ್ಟ್ ತಡೆಯಾಜ್ಞೆ | Karnataka Teacher Recruitment

ಹಾಗಾದರೆ ನಮ್ಮ ಚಿತ್ರದಲ್ಲಿ ಯಾವುದೇ ದೃಶ್ಯ ಕಾಲ್ಪನಿಕ ಅಂತಾ ಸಾಬೀತಾದ್ರೆ ತಾವು ಸಿನಿಮಾ ಮಾಡುವುದನ್ನೇ ಬಿಟ್ಟು ಬಿಡ್ತೀನಿ ಎಂದು ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಸವಾಲು ಹಾಕಿದ್ದಾರೆ.

Share.
Exit mobile version