ಬೆಂಗಳೂರು: ಬೆಳಗಾವಿಯ ಸುವರ್ಣ ಸೌಧದ ವಿಧಾನ ಮಂಡಲದ ಕಲಾಪದಲ್ಲಿ ನಿನ್ನೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತಿಗೆ ಪ್ರತಿಕ್ರಿಯಿಸಿದ್ದಂತ ಮಾಜಿ ಸ್ಪೀಕರ್ ರಮೇಶ್ ಕುಮಾರ್ ( Ex Speaker K R Ramesh Kumar ) ಅವರು, ರೇಪ್ ತಡೆಯದಿದ್ದರೇ ಮಲಗಿ ಎಂಜಾಯ್ ಮಾಡಬೇಕು ಎಂಬುದಾಗಿ ಹೇಳಿದ್ದರು. ಈ ಪದ ಬಳಕೆಗೆ ಅನೇಕರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದರು. ಅಲ್ಲದೇ ಮಹಿಳೆಯರು ಕೂಡ ರಮೇಶ್ ಕುಮಾರ್ ವಿರುದ್ಧ ಕಿಡಿಕಾರಿದ್ದರು. ಈ ಎಲ್ಲಾ ಬಳಿಕ, ಮಾಜಿ ಸ್ಪೀಕರ್ ಕೆ ಆರ್ ರಮೇಶ್ ಕುಮಾರ್ ಕ್ಷಮೆಯಾಚಿಸಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿರುವಂತ ಅವರು, “ಅತ್ಯಾಚಾರ!” ಬಗ್ಗೆ ಇಂದಿನ ವಿಧಾನಸಭೆಯಲ್ಲಿ ನಾನು ಮಾಡಿದ ಉದಾಸೀನ ಮತ್ತು ನಿರ್ಲಕ್ಷ್ಯದ ಕಾಮೆಂಟ್ ಗಾಗಿ ನಾನು ಎಲ್ಲರ ಕ್ಷಮೆ ಯಾಚಿಸುತ್ತೇನೆ. ನನ್ನ ಉದ್ದೇಶ ಘೋರ ಅಪರಾಧವನ್ನು ಎತ್ತಿ ಹಿಡಿಯುವುದಾಗಿರಲಿಲ್ಲ. ಬದಲಾಗಿ ಅದನ್ನು ಖಂಡಿಸುವುದಾಗಿತ್ತು. ಆದ್ರೇ.. ಆ ಪದ ಬಳಕೆ ಮಾಡಿದ್ದು ತಪ್ಪು. ಇನ್ಮುಂದೆ ನಾನು ಅಂತಹ ಪದ ಬಳಸಲ್ಲ. ಈಗ ಬಳಸಿದ್ದಕ್ಕೆ ಎಲ್ಲರ ಕ್ಷಮೆ ಕೋರುತ್ತೇನೆ ಎಂದು ತಿಳಿಸಿದ್ದಾರೆ.
I would like to express my sincere apologies to everyone for the indifferent and negligent comment I made in today’s assembly about “Rape!” My intention was not trivialise or make light of the heinous crime, but an off the cuff remark! I will choose my words carefully henceforth!
— K. R. Ramesh Kumar (@KRRameshKumar1) December 16, 2021