ಬಳ್ಳಾರಿ: ಗಣಿ ಪ್ರಕರಣದ ನಂತ್ರ ಸಕ್ರೀಯ ರಾಜಕಾರಣದಿಂದ ದೂರ ಉಳಿದಿದ್ದಂತ ಮಾಜಿ ಸಚಿವ ಜನಾರ್ಧನ ರೆಡ್ಡಿ ( Janardhana Reddy ), ಈಗ ಮತ್ತೆ ಸಕ್ರೀಯ ರಾಜಕಾರಣಕ್ಕೆ ಬರಲಿದ್ದಾರೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕಾಗಿ ಹಲವೆಡೆ ಸ್ಪರ್ಧಿಸೋದಾಗಿಯೂ ಅವರಿಗೆ ಅಭಿಮಾನಿಗಳಿಂದ ಒತ್ತಡ ಕೂಡ ಬರ್ತಾ ಇದೆ ಅಂತೆ.
Lata Mangeshkar : ಲತಾ ಮಂಗೇಶ್ಕರ್ ಗೆ ಅಂತಿಮ ನಮನ :ಕೈ ಎತ್ತಿ ದುವಾ ಪಠಿಸಿದ ಶಾರುಖ್ ಫೋಟೋ ವೈರಲ್
ಈ ಕುರಿತಂತೆ ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನನಗೆ ಗಂಗಾವತಿ, ಕೊಪ್ಪಳ, ಬೆಂಗಳೂರಿನ ಕೆ ಆರ್ ಪುರಂ, ಯಲಬುರ್ಗಾ, ಬಳ್ಳಾರಿ, ಕೋಲಾರ, ಬಿಟಿಎಂ ಲೇಔಟ್ ಸೇರಿದಂತೆ ವಿವಿಧೆಡೆ ಸ್ಪರ್ಧಿಸೋದಕ್ಕೆ ಅಭಿಮಾನಿಗಳು, ಹಿತೈಶಿಗಳು ಒತ್ತಡ ಹಾಕ್ತಾ ಇದ್ದಾರೆ ಎಂದು ಹೇಳುವ ಮೂಲಕ, ರಾಜಕೀಯ ರಂಗಪ್ರವೇಶದ ಸುಳಿವು ನೀಡಿದ್ದಾರೆ.
Global Leader Approval :ರೇಟಿಂಗ್ ಪಟ್ಟಿಯಲ್ಲಿ ಸತತ ಮೂರನೇ ಬಾರಿಗೆ ಅಗ್ರಸ್ಥಾನ ಗಳಿಸಿದ ಪ್ರಧಾನಿ ಮೋದಿ
ಇನ್ನೂ ನನ್ನ ಸಹೋದರನೇ ಈಗಾಗಲೇ ಶಾಸಕನಾಗಿದ್ದಾನೆ. ಮಿತ್ರ ಶ್ರೀರಾಮುಲು ಸಚಿವರಾಗಿದ್ದಾರೆ. ಅವರು ಆಗಿರುವಾಗ ನಾನು ಆದಂತೆ. ನಾನು ರಾಜಕೀಯ ಮಾಡೋದಕ್ಕಾಗಿ ಬಳ್ಳಾರಿಗೆ ಬಂದಿಲ್ಲ ಎಂದು ಹೇಳಿದರು.
ಶಿವಮೊಗ್ಗ: ನಾಳೆಗೆ ಓಬವ್ವ ಆತ್ಮ ರಕ್ಷಣಾ ಕಲೆ-ಕರಾಟೆ ತರಬೇತಿ ಉದ್ಘಾಟನೆ ಮುಂದೂಡಿಕೆ
ನಾನು ಬಳ್ಳಾರಿಯನ್ನು ಅಭಿವೃದ್ಧಿ ಪಡಿಸೋದಕ್ಕಾಗಿ ಬಂದಿದ್ದು. ಈಗ ಬಳ್ಳಾರಿ ಕ್ರಿಕೆಟ್ ವರ್ಲ್ಡ್ ಕಪ್ ನಡೆಯುವ ಮಟ್ಟಕ್ಕೆ ಬೆಳೆದು, ಅಭಿವೃದ್ಧಿಗೊಂಡಿದೆ. ಈ ಹಿಂದೆ ನಾ ಹೇಳಿದ ಕೆಲಸ ಬೇಗ ಆಗ್ತಾ ಇದ್ದವು. ಈಗ ಆಗ್ತಾ ಇಲ್ಲ ಅಂತ ಶ್ರೀರಾಮುಲು ಹೇಳಿದ್ದಾರೆ. ಆವರಿಗೆ ಚಿಂತಿಸಬೇಡ ಎಂದು ಹೇಳಿರೋದಾಗಿ ತಿಳಿಸಿದರು.