ನವದೆಹಲಿ: ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ( Former Australia skipper Ricky Ponting ) ಅವರಿಗೆ ಇಂದು ಪರ್ತ್ ಸ್ಟೇಡಿಯಂನಲ್ಲಿ ನಡೆಯುತ್ತಿದ್ದಂತ ವೆಸ್ಟ್ ಇಂಡೀಸ್ ವಿರುದ್ಧದ ಆಸ್ಟ್ರೇಲಿಯಾದ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ಸಮಯದಲ್ಲಿ ಎದೆ ನೋವು ಕಾಣಿಸಿಕೊಂಡಿತು. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

ವಿಶ್ವಕಪ್ ವಿಜೇತ ಆಸ್ಟ್ರೇಲಿಯಾದ ನಾಯಕ ರಿಕಿ ಪಾಂಟಿಂಗ್ ಅವರು ಅನಾರೋಗ್ಯದ ಕಾರಣ ಮಧ್ಯಾಹ್ನದ ಊಟದ ಸಮಯದಲ್ಲಿ ಪರ್ತ್ ಕ್ರೀಡಾಂಗಣದಿಂದ ನಿರ್ಗಮಿಸಿದರು.

BIGG NEWS : ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್ : 2022-23 ನೇ ಸಾಲಿಗೆ ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ

47 ವರ್ಷದ ಅವರು ವೆಸ್ಟ್ ಇಂಡೀಸ್ ವಿರುದ್ಧದ ಆಸ್ಟ್ರೇಲಿಯಾದ ಎರಡು ಟೆಸ್ಟ್ ಪಂದ್ಯಗಳ ತವರಿನ ಸರಣಿಗೆ ಸೆವೆನ್ ನೆಟ್ವರ್ಕ್ನ ಕಾಮೆಂಟರಿ ತಂಡದ ಭಾಗವಾಗಿದ್ದಾರೆ.

“ರಿಕಿ ಪಾಂಟಿಂಗ್ ಅನಾರೋಗ್ಯದಿಂದ ಬಳಲುತ್ತಿದ್ದು, ಇಂದಿನ ಉಳಿದ ಪ್ರಸಾರಕ್ಕೆ ವೀಕ್ಷಕ ವಿವರಣೆಯನ್ನು ನೀಡುವುದಿಲ್ಲ” ಎಂದು ಬ್ರಾಡ್ಕಾಸ್ಟರ್ ಚಾನೆಲ್ 7 ರ ವಕ್ತಾರರು ಆಸ್ಟ್ರೇಲಿಯಾದ ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕನ್ನಡ ಧ್ವಜ ಹಿಡಿದ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ ಪೊಲೀಸರನ್ನು ಅಮಾನತುಗೊಳಿಸಬೇಕು – ಕರವೇ ಪ್ರವೀಣ್ ಶೆಟ್ಟಿ

Share.
Exit mobile version