ನವದೆಹಲಿ: ಧಾರ್ಮಿಕ ನಂಬಿಕೆಗಳು ಸಂಗಾತಿಯನ್ನ ಆಯ್ಕೆ ಮಾಡುವ ವ್ಯಕ್ತಿಯ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ವಿವಾಹದಲ್ಲಿ ಸಂಗಾತಿಯನ್ನ ಆಯ್ಕೆ ಮಾಡುವ ಸ್ವಾತಂತ್ರ್ಯವು ಸಂವಿಧಾನದ ಅನುಚ್ಛೇದ 21 ರ ಒಂದು ಭಾಗವಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

ಪೋಷಕರ ಇಚ್ಛೆಗೆ ವಿರುದ್ಧವಾಗಿ ಮದುವೆಯಾದ ದಂಪತಿಗಳ ಕುಟುಂಬ ಸದಸ್ಯರ ವಿರುದ್ಧ ದಾಖಲಾದ ಪ್ರಕರಣದಲ್ಲಿ ಅವರಿಗೆ ಜಾಮೀನು ನೀಡುವ ಆದೇಶದಲ್ಲಿ ನ್ಯಾಯಾಲಯವು ಕಳೆದ ವರ್ಷ ಡಿಸೆಂಬರ್’ನಲ್ಲಿ ಈ ಅಭಿಪ್ರಾಯವನ್ನ ವ್ಯಕ್ತಪಡಿಸಿದೆ. ಸಂತ್ರಸ್ತೆ ತನ್ನ ದೂರಿನಲ್ಲಿ, ತನ್ನ ಕುಟುಂಬ ಸದಸ್ಯರು ದಂಪತಿಯನ್ನ ಅಪಹರಿಸಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.

ತಮ್ಮನ್ನು ಅಪಹರಿಸಿ ಹಲ್ಲೆ ಮಾಡಲಾಗಿದೆ ಮತ್ತು ಕೊಡಲಿಯಿಂದ ಅವರ ಖಾಸಗಿ ಭಾಗಗಳನ್ನ ಕಿತ್ತುಹಾಕಲಾಗಿದೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ. ಆಕೆಗೆ ಚೂರಿಯಿಂದ ಇರಿದು ಗಾಯಗೊಳಿಸಿ, ಆಕೆಯ ಪತಿಯನ್ನ ಚರಂಡಿಗೆ ಎಸೆಯಲಾಯಿತು. ನಂತರ, ಅವಳ ಗಂಡನ ಸಹೋದರ ಆಕೆಯನ್ನ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದನು ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 356, 367, 368, 326, 307, 506, 120 ಬಿ ಮತ್ತು 34 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನೂಪ್ ಕುಮಾರ್ ಮೆಂದ್ರಾಟ, “ದಂಪತಿಗಳು ತಮ್ಮ ಸ್ವಂತ ಇಚ್ಛೆಯಿಂದ ಕಾನೂನುಬದ್ಧವಾಗಿ ಮದುವೆಯಾಗುವ ಪ್ರಕರಣಗಳಲ್ಲಿ, ಪೊಲೀಸರು ತ್ವರಿತವಾಗಿ ಮತ್ತು ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕೆಂದು ನ್ಯಾಯಾಲಯ ನಿರೀಕ್ಷಿಸುತ್ತದೆ.

 ಈ ಅರ್ಜಿಯ ವಿಚಾರಣೆಯ ವೇಳೆ ನ್ಯಾಯಾಲಯ, ಧಾರ್ಮಿಕ ನಂಬಿಕೆಗಳು ಸಂಗಾತಿಯನ್ನ ಆಯ್ಕೆ ಮಾಡುವ ವ್ಯಕ್ತಿಯ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುವುದಿಲ್ಲ ಎಂದಿದೆ.

 

BREAKING NEWS ; ಅ.28ರಂದು ‘ರಿಷಿ ಸುನಕ್’ ಬ್ರಿಟನ್ ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ

BIGG NEWS ; “ಸಮಗ್ರ & ವಿನಮ್ರವಾಗಿ ಸೇವೆ ಸಲ್ಲಿಸುವೆ” ; ಬ್ರಿಟನ್ ನಿಯೋಜಿತ ಪ್ರಧಾನಿ ‘ರಿಷಿ ಸುನಕ್’ ಮೊದಲ ಮಾತು

‘ದೇವೀರಮ್ಮ ದೇವಿ ಬಳಿ ರಾಷ್ಟ್ರದ ಜನತೆಯ ಒಳಿತಿಗಾಗಿ ಪ್ರಾರ್ಥಿಸಿದ್ದೇನೆ’ : ಸಿ.ಟಿ ರವಿ

Share.
Exit mobile version