ಕೆಎನ್ಎನ್ ಡಿಜಿಟಲ್ ಡೆಸ್ಕ್ : ಅಂಚೆ ಕಚೇರಿಯು ಕಾಲ ಕಾಲಕ್ಕೆ ಜನರ ಅನುಕೂಲಕ್ಕಾಗಿ ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತಿರುತ್ತದೆ. ಅಂಚೆಯ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡುವುದು ಉತ್ತಮ ಆಯ್ಕೆ ಮಾತ್ತು ಹೆಚ್ಚಿನ ಭದ್ರತೆ ನೀಡುತ್ತದೆ. ಇದರಲ್ಲಿರುವ ಬಂಫರ್ ಯೋಜನೆಯೊಂದರ ಕುರಿತಂತೆ ಇಲ್ಲಿದೆ ಹೆಚ್ಚಿನ ಮಾಹಿತಿ. ಈ ಯೋಜನೆಯಡಿ ಕೇಲವ 50 ಸಾವಿರ ಹೂಡಿಕೆ ಮಾಡಿದರೆ ಸಾಕು, ತಿಂಗಳಿಗೆ 3300 ರೂ.ಗಳಷ್ಟು ಪಿಂಚಣಿಯನ್ನು ಪಡೆಯಬಹುದು.
ಅಂಚೆ ಕಚೇರಿಯ MIS ಯೋಜನೆ
ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆ ಖಾತೆ (MIS) ಯಲ್ಲಿ ಕನಿಷ್ಠ 1000 ಮತ್ತು 100 ರ ಗುಣಕಗಳಲ್ಲಿ ಹಣವನ್ನು ಠೇವಣಿ ಮಾಡಬಹುದು. ಈ ಮೂಲಕ ಯೋಜನೆಯಲ್ಲಿ ಗರಿಷ್ಠ 4.5 ಲಕ್ಷ ರೂ. ಲಾಭವನ್ನು ಗಳಿಸಬಹುದು.
ಯೋಜನೆಯ ಮಾಹಿತಿ
ಅಂಚೆ ಕಚೇರಿಯ MIS ಯೋಜನೆಯಲ್ಲಿ ಜಂಟಿ ಖಾತೆಯ ಗರಿಷ್ಠ ಮಿತಿ 9 ಲಕ್ಷ ರೂ. ಇರುತ್ತದೆ.ಇದರಲ್ಲಿ ಮೂರು ಜನರು ಒಟ್ಟಾಗಿ ಜಂಟಿ ಖಾತೆಯನ್ನು ತೆರೆಯಬಹುದು.
ಈ ಯೋಜನೆಯಲ್ಲಿ 1000 ರೂ,ಗಳನ್ನು ಠೇವಣಿ ಮಾಡಬಹುದು. ಇದರಲ್ಲಿ ಮಾಸಿಕವಾಗಿ ಹಣವನ್ನು ಪಡೆಯಬಹುದು. ಹಣ ಹೂಡಿಕೆ ಮಾಡುವವರಿಗೆ ಶೇ. 6.6 ರಷ್ಟು ಬಡ್ಡಿಯನ್ನು ನೀಡಲಾಗುತ್ತದೆ.
5 ವರ್ಷಗಳ ಅವಧಿ
ಅಂಚೆ ಕಚೇರಿಯ ಈ ಯೋಜನೆಯು ಐದು ವರ್ಷಗಳ ಅವಧಿಯನ್ನು ಹೊಂದಿರುತ್ತದೆ. ಇದರಲ್ಲಿ ಅಕೌಂಟ್ ತೆರೆದ ನಂತರ ಒಂದು ವರ್ಷದವರೆಗೆ ನೀವು ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ. ನೀವು 1-3 ವರ್ಷಗಳಲ್ಲಿ ಮುಚ್ಚಲು ಬಯಸಿದರೆ, ಅಸಲು 2% ಅನ್ನು ಕಡಿತಗೊಳಿಸಲಾಗುತ್ತದೆ. ಅದೇ ಸಮಯದಲ್ಲಿ, 3-5 ವರ್ಷಗಳಲ್ಲಿ ಖಾತೆಯನ್ನು ಮುಚ್ಚಿದರೆ 1 ಶೇಕಡಾ ದಂಡವನ್ನು ಕಡಿತಗೊಳಿಸಲಾಗುತ್ತದೆ.
4.5 ಲಕ್ಷ ಠೇವಣಿ ಇಟ್ರೆ ತಿಂಗಳಿಗೆ 2475 ರೂ
ಈ ಯೋಜನೆಯಲ್ಲಿ ರೂ .50,000 ಒಂದು ಬಾರಿ ಠೇವಣಿ ಮಾಡಿದರೆ, 05 ವರ್ಷಗಳವರೆಗೆ ಪ್ರತಿ ವರ್ಷ ರೂ 275 ಅಂದರೆ ಪ್ರತಿ ವರ್ಷ ರೂ .3300 ಪಡೆಯಬಹುದು. 5 ವರ್ಷಗಳಲ್ಲಿ ಒಟ್ಟು 16500 ರೂ.ಗಳನ್ನು ಬಡ್ಡಿಯಾಗಿ ಸಿಗುತ್ತದೆ. ಇದರಲ್ಲಿ 1,00,000 ಠೇವಣಿ ಮಾಡಿದರೆ, ಅವರು ತಿಂಗಳಿಗೆ 550 ರೂ, ಪ್ರತಿ ವರ್ಷ ರೂ 6600 ಮತ್ತು 5 ವರ್ಷಗಳಲ್ಲಿ 33,000 ರೂಗಳನ್ನು ಪಡೆಯಬಹುದು. ತಿಂಗಳಿಗೆ 550, ಪ್ರತಿ ವರ್ಷ 6600 ಮತ್ತು ಐದು ವರ್ಷಗಳಲ್ಲಿ 33000 ರೂ. ಸಿಗುತ್ತದೆ.
ಅಂಚೆ ಕಚೇರಿಯ ಈ ಪೋಸ್ಟ್ ಆಫೀಸ್ ಎಂಐಎಸ್ ಯೋಜನೆಯಲ್ಲಿ ರೂ 4.5 ಲಕ್ಷವನ್ನು ಠೇವಣಿ ಮಾಡಿದರೆ, ನೀವು ಮಾಸಿಕ ರೂ .2,475 ಅಂದರೆ ವಾರ್ಷಿಕ ರೂ 29700 ಮತ್ತು ಐದು ವರ್ಷಗಳಲ್ಲಿ ರೂ 148500 ಬಡ್ಡಿಯನ್ನು ಪಡೆಯಬಹುದು.
BIGG NEWS : ಐಸಿಸಿ ಬಂಧನ ವಾರಂಟ್ ಬಳಿಕ ರಷ್ಯಾ ಆಕ್ರಮಿತ ಮಾರಿಯುಪೋಲ್, ಕ್ರೈಮಿಯಾಗೆ ‘ಪುಟಿನ್’ ಭೇಟಿ
BIGG NEWS : ‘CBSE’ ಮಹತ್ವದ ನಿರ್ಧಾರ ; ಈ ವರ್ಷದ ‘ಪಠ್ಯಕ್ರಮ’ದಲ್ಲಿ ಕಡಿತ, 2023-24ರಿಂದ ಹೊಸ ‘ಸಿಲಬಸ್’ ಜಾರಿ.!
BREAKING NEWS: ಶಿವಮೊಗ್ಗ ಡಿಸಿ ಕಚೇರಿಯ ಮುಂದೆ ಆಜಾನ್ ಕೂಗಿದ ಯುವಕ ಅರೆಸ್ಟ್