ಬೆಂಗಳೂರು: ಹಿಜಾಬ್ ಗಲಾಟೆ, ವ್ಯಾಪಾರ ಬಹಿಷ್ಕಾರ, ಕೋಮು ಬೆಂಕಿ ಹಚ್ಚುವಾಗ ಇಲ್ಲದ ಪ್ರೀತಿ ಈಗ ಬಂದಿದೆ! ಈಗ ಬಿಜೆಪಿಯ ಒಬ್ಬೊಬ್ಬರೇ ನಾಯಕರು ಮುಸ್ಲಿಮರು ನನ್ನ ಹೃದಯದಲ್ಲಿದ್ದಾರೆ ಎನ್ನುತ್ತಿದ್ದಾರೆ! ಬಣ್ಣ ಬದಲಿಸುವ ಬಿಜೆಪಿಗರನ್ನು ಕಂಡು ಊಸರವಳ್ಳಿಯೂ ನಾಚುತ್ತದೆ. ಬಿಜೆಪಿ ( BJP ), ಇದು ನಿಮ್ಮ ಓಲೈಕೆ ರಾಜಕಾರಣದ ವ್ಯಾಖ್ಯಾನದೊಳಗೆ ಬರುವುದಿಲ್ಲವೇ? ಎಂದು ಕರ್ನಾಟಕ ಕಾಂಗ್ರೆಸ್ ( Karnataka Congress ) ಪ್ರಶ್ನಿಸಿದೆ.
ಹಿಜಾಬ್ ಗಲಾಟೆ, ವ್ಯಾಪಾರ ಬಹಿಷ್ಕಾರ, ಕೋಮು ಬೆಂಕಿ ಹಚ್ಚುವಾಗ ಇಲ್ಲದ ಪ್ರೀತಿ ಈಗ ಬಂದಿದೆ!
ಈಗ ಬಿಜೆಪಿಯ ಒಬ್ಬೊಬ್ಬರೇ ನಾಯಕರು ಮುಸ್ಲಿಮರು ನನ್ನ ಹೃದಯದಲ್ಲಿದ್ದಾರೆ ಎನ್ನುತ್ತಿದ್ದಾರೆ!ಬಣ್ಣ ಬದಲಿಸುವ ಬಿಜೆಪಿಗರನ್ನು ಕಂಡು ಊಸರವಳ್ಳಿಯೂ ನಾಚುತ್ತದೆ!@BJP4Karnataka,
ಇದು ನಿಮ್ಮ ಓಲೈಕೆ ರಾಜಕಾರಣದ ವ್ಯಾಖ್ಯಾನದೊಳಗೆ ಬರುವುದಿಲ್ಲವೇ? pic.twitter.com/JhkyqLhZYv— Karnataka Congress (@INCKarnataka) March 19, 2023
ಈ ಬಗ್ಗೆ ಇಂದು ಟ್ವಿಟ್ ಮಾಡಿದ್ದು, ಅಕಾಲಿಕ ಮಳೆ ಮತ್ತೆ ರೈತರಿಗೆ ಸಂಕಷ್ಟ ತಂದಿದೆ, 4000ಕ್ಕೂ ಹೆಚ್ಚು ಹೆಕ್ಟೇರ್ ಬೆಳೆ ಹಾನಿಯಾಗಿದೆ. ಬಸವರಾಜ ಬೊಮ್ಮಾಯಿ( Basavaraj Bommai ) ಅವರೇ, ವಾರಕ್ಕೊಮ್ಮೆ ಬರುವ ಮೋದಿಯವರನ್ನು ಕರೆದುಕೊಂಡು ಹೋಗಿ ಹಾನಿ ವೀಕ್ಷಣೆ ಮಾಡುವಿರಾ? ಪರಿಹಾರ ಕೊಡಿಸುವಿರಾ? ಅಥವಾ ಕೇವಲ ಚುನಾವಣಾ ಪ್ರಚಾರ ಮಾಡಿಸುವಿರಾ? ನೆನಪಿರಲಿ, ನಿಮ್ಮ ಅಧಿಕಾರವಧಿ & ಜವಾಬ್ದಾರಿ ಇನ್ನೂ ಮುಗಿದಿಲ್ಲ ಎಂದು ವಾಗ್ಧಾಳಿ ನಡೆಸಿದೆ.
ಅಕಾಲಿಕ ಮಳೆ ಮತ್ತೆ ರೈತರಿಗೆ ಸಂಕಷ್ಟ ತಂದಿದೆ, 4000ಕ್ಕೂ ಹೆಚ್ಚು ಹೆಕ್ಟೇರ್ ಬೆಳೆ ಹಾನಿಯಾಗಿದೆ.@BSBommai ಅವರೇ, ವಾರಕ್ಕೊಮ್ಮೆ ಬರುವ ಮೋದಿಯವರನ್ನು ಕರೆದುಕೊಂಡು ಹೋಗಿ ಹಾನಿ ವೀಕ್ಷಣೆ ಮಾಡುವಿರಾ? ಪರಿಹಾರ ಕೊಡಿಸುವಿರಾ?
ಅಥವಾ ಕೇವಲ ಚುನಾವಣಾ ಪ್ರಚಾರ ಮಾಡಿಸುವಿರಾ?ನೆನಪಿರಲಿ, ನಿಮ್ಮ ಅಧಿಕಾರವಧಿ & ಜವಾಬ್ದಾರಿ ಇನ್ನೂ ಮುಗಿದಿಲ್ಲ! pic.twitter.com/FnrXTRavpe
— Karnataka Congress (@INCKarnataka) March 19, 2023
“ಸುಳ್ಳೇ ಬಿಜೆಪಿ ಮನೆದೇವ್ರು” ಪದೇ ಪದೇ ಸಾಬೀತಾಗುತ್ತಿದೆ. ಗೌರವಿಸುವ ಕಾರಣದಿಂದಲೇ ರಾಹುಲ್ ಗಾಂಧಿ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ತಮ್ಮ ಕಾರಿನಲ್ಲಿ ಕರೆದೊಯ್ದರು. ಬಿಜೆಪಿ, ಮೋದಿ ಬೆಂಗಳೂರಿಗೆ ಬಂದಿದ್ದಾಗ ಭೇಟಿಯಾಗಲು ತೆರಳಿದ್ದ ಬಿಎಸ್ ಯಡಿಯೂರಪ್ಪ ಅವರ ಮುಖ ನೋಡದೆ ಅವಮಾನಿಸಿ ಹೊರಟು ಹೋದಂತಹ ದೂರಹಂಕಾರಕ್ಕೆ ಮೊದಲು ಮದ್ದು ಹುಡುಕಿಕೊಳ್ಳಿ ಎಂದು ಗುಡುಗಿದೆ.
"ಸುಳ್ಳೇ ಬಿಜೆಪಿ ಮನೆದೇವ್ರು" ಪದೇ ಪದೇ ಸಾಬೀತಾಗುತ್ತಿದೆ.
ಗೌರವಿಸುವ ಕಾರಣದಿಂದಲೇ @RahulGandhi ಅವರು @kharge ಅವರನ್ನು ತಮ್ಮ ಕಾರಿನಲ್ಲಿ ಕರೆದೊಯ್ದರು.@BJP4Karnataka,
ಮೋದಿ ಬೆಂಗಳೂರಿಗೆ ಬಂದಿದ್ದಾಗ ಭೇಟಿಯಾಗಲು ತೆರಳಿದ್ದ @BSYBJP ಅವರ ಮುಖ ನೋಡದೆ ಅವಮಾನಿಸಿ ಹೊರಟು ಹೋದಂತಹ ದೂರಹಂಕಾರಕ್ಕೆ ಮೊದಲು ಮದ್ದು ಹುಡುಕಿಕೊಳ್ಳಿ. https://t.co/SrG9iLKhLT— Karnataka Congress (@INCKarnataka) March 18, 2023