ಕೆಎನ್ಎನ್ಡಿಜಿಟಲ್ ಡೆಸ್ಕ್ : ಭಾರತದಲ್ಲಿ ಕೆಲವು ವರ್ಷಗಳಿಂದ ಆನ್ಲೈನ್ ವಂಚನೆಗಳು ವ್ಯಾಪಕವಾಗಿದ್ದು, ಹೊಸ ರೀತಿಯ ವಂಚನೆಗಳು ದಿನೇ ದಿನೇ ಹೆಚ್ಚುತ್ತಿವೆ. ಇತ್ತೀಚೆಗೆ ಸಿಮ್ ಸ್ವಾಪ್ ವಂಚನೆಗಳ ಬಗ್ಗೆ ಸಾಕಷ್ಟು ಸುದ್ದಿಯಾಗ್ತಿದ್ದು, ಒಬ್ಬ ವ್ಯಕ್ತಿಯು ಬಳಸಿದ ಸಿಮ್’ನೊಂದಿದೆ ನಕಲಿ ಸಿಮ್ ತೆಗೆದುಕೊಂಡು ಈ ವಂಚನೆ ನಡೆಸಲಾಗುತ್ತೆ. ಇನ್ನವ್ರ ಖಾತೆಯಿಂದ ಹಣ ಕಡಿತಗೊಳಿಲಾಗುತ್ತೆ. ಆದಾಗ್ಯೂ, ಈ ರೀತಿಯ ವಂಚನೆಯನ್ನ eSIM ಗಳ ಬಳಕೆಯ ಮೂಲಕ ತಪ್ಪಿಸಬೋದು.
US ನಲ್ಲಿ ಲಭ್ಯವಿರುವ ಐಫೋನ್ 14 ಮಾದರಿಗಳು ಸಿಮ್ ಸ್ಲಾಟ್ಗಳನ್ನ ಹೊಂದಿಲ್ಲ. ಇವು eSIM ಮಾತ್ರ ಬೆಂಬಲಿಸುತ್ವೆ. ಭಾರತದಲ್ಲಿನ ಅನೇಕ ಜನರು ಯುಎಸ್ನಲ್ಲಿರುವ ತಮ್ಮ ಸಂಬಂಧಿಕರಿಂದ ಅಗ್ಗದ ಐಫೋನ್ಗಳನ್ನ ಪಡೆಯುತ್ತಾರೆ. ಅದ್ರಂತೆ, ಭೌತಿಕ ಸಿಮ್ಗೆ ಹೋಲಿಸಿದರೆ eSIM ಹೆಚ್ಚು ಸುರಕ್ಷಿತವಾಗಿದೆ ಎಂದು ತಜ್ಞರು ಹೇಳುತ್ತಾರೆ.
ಸಿಮ್ ಸ್ವಾಪ್ ವಂಚನೆ ಎಂದರೇನು?
ಸಿಮ್ ಸ್ವಾಪ್ ಪ್ರಕ್ರಿಯೆಯಲ್ಲಿ, ಅಪರಾಧಿಗಳು ಮೊದಲು ವಿವಿಧ ಪ್ಲಾಟ್ಫಾರ್ಮ್ಗಳಿಂದ ಫೋನ್ ಸಂಖ್ಯೆಗಳು, ಇಮೇಲ್ ಐಡಿಗಳನ್ನ ಸಂಗ್ರಹಿಸುತ್ತಾರೆ. ಫಿಶಿಂಗ್ ಇಮೇಲ್ಗಳು, ಸಂದೇಶಗಳು ಮತ್ತು ಕರೆಗಳ ಮೂಲಕ ವೈಯಕ್ತಿಕ ವಿವರಗಳನ್ನ ಸಂಗ್ರಹಿಸಲಾಗುತ್ತದೆ. ಎಲ್ಲಾ ಅಗತ್ಯ ವಿವರಗಳನ್ನ ಸಂಗ್ರಹಿಸಿದ ನಂತರ, ಕಳೆದುಹೋದ ಫೋನ್ ಅಥವಾ ಹಾನಿಗೊಳಗಾದ ಹಳೆಯ ಸಿಮ್ನಂತಹ ಕಾರಣಗಳಿಗಾಗಿ ನಕಲಿ ಸಿಮ್ ನೀಡಲು ಟೆಲಿಕಾಂ ಆಪರೇಟರ್’ನ್ನ ಸಂಪರ್ಕಿಸಲಾಗುತ್ತದೆ. ಟೆಲಿಕಾಂ ಆಪರೇಟರ್ ಕಂಪನಿಗೆ ಸಲ್ಲಿಸಿದ ವಿವರಗಳು ಸರಿಯಾಗಿದ್ದರೆ, ವಂಚಕನು ಬಲಿಪಶುವಿನ ಸಂಖ್ಯೆಯೊಂದಿಗೆ ಹೊಸ ಸಿಮ್ ಸುಲಭವಾಗಿ ಪಡೆಯಬಹುದು. ಸಿಮ್ ಸಕ್ರಿಯಗೊಳಿಸಿದ ನಂತ್ರ ಹ್ಯಾಕರ್ಗೆ ಸಂಪೂರ್ಣ ನಿಯಂತ್ರಣ ಲಭ್ಯವಾಗುತ್ತದೆ.
ವಂಚನೆಗಳನ್ನ ಪರಿಶೀಲಿಸುವುದು ಹೇಗೆ?
eSIM ಗೆ ಬದಲಾಯಿಸುವುದು ಸುರಕ್ಷಿತ ಮಾರ್ಗಗಳಲ್ಲಿ ಒಂದಾಗಿದೆ. ಇದು ಭೌತಿಕ SIM ಕಾರ್ಡ್ನ ಡಿಜಿಟಲ್ ಆವೃತ್ತಿಯಾಗಿದೆ. eSIM ಅನ್ನ ಸಕ್ರಿಯಗೊಳಿಸಲು ವಿವರಗಳನ್ನ ವೈಯಕ್ತಿಕ ಗುರುತಿಸಬಹುದಾದ ಮಾಹಿತಿಯೊಂದಿಗೆ (PII) ನೋಂದಾಯಿಸಿಕೊಳ್ಳಬೇಕು. eSIM ಖಾತೆಯನ್ನ ಸುರಕ್ಷಿತವಾಗಿಡಲು ಫೇಸ್ ಐಡಿ ಅಥವಾ ಬಯೋಮೆಟ್ರಿಕ್ ದೃಢೀಕರಣವನ್ನ ಹೊಂದಿಸಬಹುದು. eSIM ಫೋನ್ ಬಳಸುವಾಗ SIM ಕಾರ್ಡ್ ಕಳೆದುಹೋಗಿದೆ ಅಥವಾ ಹಾನಿಯಾಗಿದೆ ಎಂದು ಸ್ಕ್ಯಾಮರ್ಗಳು ಹೇಳಿಕೊಳ್ಳುವುದಿಲ್ಲ.
eSIM ನ ಪ್ರಯೋಜನಗಳು.!
ಇವುಗಳನ್ನ ಸುಲಭವಾಗಿ ಸಕ್ರಿಯಗೊಳಿಸಲಾಗುತ್ತದೆ. ಇನ್ನು ದೂರದಿಂದಲೇ ನಿಷ್ಕ್ರಿಯಗೊಳಿಸಬಹುದು. ಒಂದೇ ಸಾಧನದಲ್ಲಿ ಬಹು ಫೋನ್ ಸಂಖ್ಯೆಗಳು ಮತ್ತು ಯೋಜನೆಗಳನ್ನ ಸಂಗ್ರಹಿಸಲು ಉಪಯುಕ್ತವಾಗಿದೆ. eSIM ನೊಂದಿಗೆ ನಷ್ಟ, ಹಾನಿ ಅಥವಾ ಕಳ್ಳತನದ ಭಯವಿಲ್ಲ. ವಿಭಿನ್ನ ವಾಹಕಗಳು ಅಥವಾ ಯೋಜನೆಗಳ ನಡುವೆ ಸುಲಭವಾಗಿ ಬದಲಿಸಿ. eSIMಗಳನ್ನು ಅಂಗಡಿಗೆ ಭೇಟಿ ನೀಡುವ ಅಗತ್ಯವಿಲ್ಲದೇ ಅಥವಾ ಭೌತಿಕ SIM ಕಾರ್ಡ್ ವಿತರಣೆಗಾಗಿ ಕಾಯದೆ ದೂರದಿಂದಲೇ ಸಕ್ರಿಯಗೊಳಿಸಬಹುದು. ಆದ್ರೆ, ಅದಕ್ಕೂ ಮೊದ್ಲು ಮೊದಲನೆಯದಾಗಿ ಸ್ಮಾರ್ಟ್ಫೋನ್ eSIM ಬೆಂಬಲಿಸುತ್ತದೆಯೇ? ಟೆಲಿಕಾಂ ಆಪರೇಟರ್ eSIM ಸೌಲಭ್ಯವನ್ನ ಒದಗಿಸುತ್ತಿದೆಯೇ? ಮುಂತಾದ ವಿಷಯಗಳನ್ನ ತಿಳಿಯಿರಿ.
ಏರ್ಟೆಲ್ ಸಿಮ್ನಿಂದ ಇ-ಸಿಮ್ ಪರಿವರ್ತನೆ ಪ್ರಕ್ರಿಯೆ.!
121 ಗೆ ‘e-SIM<>ನೋಂದಾಯಿತ ಇಮೇಲ್ ಐಡಿ’ ಟೈಪ್ ಮಾಡಿ ಮತ್ತು ಸಂದೇಶ ಕಳುಹಿಸಿ. ನಂತರ ‘1’ ಎಂದು ಉತ್ತರಿಸಿ ಮತ್ತು ಪ್ರಕ್ರಿಯೆಯನ್ನ ದೃಢೀಕರಿಸಿ. ಏರ್ಟೆಲ್ ಕರೆಯ ಮೂಲಕ ಒಪ್ಪಿಗೆ ನೀಡಲು ನಿಮ್ಮನ್ನ ಕೇಳುವ SMS ಕಳುಹಿಸುತ್ತದೆ. ಕರೆ ಮಾಡುವ ಮೂಲಕ ನಿಮ್ಮ ಐಡಿಯನ್ನ ದೃಢೀಕರಿಸಿ. ನಂತರ, ನೋಂದಾಯಿತ ಇಮೇಲ್ ಐಡಿಯಲ್ಲಿ ನೀವು QR ಕೋಡ್ ಸ್ವೀಕರಿಸುತ್ತೀರಿ. ಇ-ಸಿಮ್ ಸೇವೆಗಳನ್ನು ಸಕ್ರಿಯಗೊಳಿಸಲು ಆ QR ಕೋಡ್ ಸ್ಕ್ಯಾನ್ ಮಾಡಿ. eSIM ಸುಮಾರು 2 ಗಂಟೆಗಳಲ್ಲಿ ಸಕ್ರಿಯಗೊಳ್ಳುತ್ತದೆ.
ಕುತಂತ್ರಿ ಚೀನಾದ ಮತ್ತೊಂದು ಮನೆಯಾಳು ತಂತ್ರ ; ಗಡಿಯಲ್ಲಿ ಗುಪ್ತವಾಗಿ ‘ಅಣೆಕಟ್ಟು’ ನಿರ್ಮಾಣ
BREAKING NEWS : ಟೆಕ್ ದೈತ್ಯ ‘ಗೂಗಲ್’ ಉದ್ಯೋಗಿಗಳಿಗೆ ಬಿಗ್ ಶಾಕ್ ; 12 ಸಾವಿರ ನೌಕರರು ವಜಾ |Google layoff