ನವದೆಹಲಿ : ಉದ್ಯೋಗಿಗಳ ರಾಜ್ಯ ವಿಮಾ ನಿಗಮ (ESIC) ಸಂಸ್ಥೆಯಲ್ಲಿನ ವಿವಿಧ ಹುದ್ದೆಗಳಿಗೆ ಅರ್ಹ ವ್ಯಕ್ತಿಗಳನ್ನು ನೇಮಕ ಮಾಡಲು ಅರ್ಜಿಯನ್ನು ಆಹ್ವಾನಿಸಿದೆ, ಇದರಲ್ಲಿ ಮೇಲ್ ವಿಭಾಗದ ಕ್ಲರ್ಕ್ (UDC), ಸ್ಟೆನೋಗ್ರಾಫರ್ (ಸ್ಟೆನೋ), ಮತ್ತು ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS) ಸೇರಿವೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ESIC ಯ ಅಧಿಕೃತ ವೆಬ್‌ಸೈಟ್ – https://www.esic.nic.in ಮೂಲಕ ಈ ನೇಮಕಾತಿ ಡ್ರೈವ್‌ಗೆ(drive) ಅರ್ಜಿ ಸಲ್ಲಿಸಬಹುದು. ESIC ವಿವಿಧ ಪ್ರದೇಶಗಳಲ್ಲಿ ಈ ನೇಮಕಾತಿ (drive)ಮೂಲಕ 3,800 ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ.
https://kannadanewsnow.com/kannada/bigg-news-%e0%b2%86%e0%b2%a1%e0%b2%b3%e0%b2%bf%e0%b2%a4-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%b8%e0%b2%be%e0%b2%b0%e0%b3%8d%e0%b2%b5%e0%b2%9c%e0%b2%a8%e0%b2%bf%e0%b2%95%e0%b2%b0/
ನೋಂದಣಿ ಪ್ರಕ್ರಿಯೆಯು ಜನವರಿ 15, 2022 ರಂದು ಪ್ರಾರಂಭವಾಗಿದ್ದು, ಮತ್ತು ಆನ್‌ಲೈನ್ ಅರ್ಜಿ ನಮೂನೆಯನ್ನು ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 15, 2022 ಎಂದು ಅಭ್ಯರ್ಥಿಗಳು ಗಮನಿಸಬೇಕು.
Good News: ಜನವರಿ ಅಂತ್ಯದ ವೇಳೆಗೆ ಭಾರತದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖ : ಅಧ್ಯಯನ
ESIC recruitmwnt: ಪ್ರಮುಖ ದಿನಾಂಕಗಳು
ನೋಂದಣಿ ಪ್ರಕ್ರಿಯೆಯು ಜನವರಿ 15, 2022 ರಂದು ಪ್ರಾರಂಭ.
ಆನ್‌ಲೈನ್ ಅರ್ಜಿ ನಮೂನೆಯನ್ನು ಸಲ್ಲಿಸಲು ಕೊನೆಯ ದಿನಾಂಕ – ಫೆಬ್ರವರಿ 15, 2022.
ವಯೋಮಿತಿ
ಮೇಲ್ದರ್ಜೆ ಕ್ಲರ್ಕ್ (UDC)- 18-27 ವರ್ಷ
ಮಲ್ಟಿ ಟಾಸ್ಕಿಂಗ್ ಸ್ಟಾಫ್(MTS)- 18-25 ವರ್ಷ
ಸ್ಟೆನೋಗ್ರಾಫರ್- 18-27 ವರ್ಷ
ESIC recruitment: ಹುದ್ದೆಯ ವಿವರಗಳು
ಅಪ್ಪರ್ ಡಿವಿಷನ್ ಕ್ಲರ್ಕ್: 1,700 ಕ್ಕೂ ಹೆಚ್ಚು ಖಾಲಿ ಹುದ್ದೆಗಳು
ಸ್ಟೆನೋಗ್ರಾಫರ್: 160 ಕ್ಕೂ ಹೆಚ್ಚು ಖಾಲಿ ಹುದ್ದೆಗಳು
ಮಲ್ಟಿ-ಟಾಸ್ಕಿಂಗ್ ಸಿಬ್ಬಂದಿ: 1,930 ಕ್ಕೂ ಹೆಚ್ಚು ಖಾಲಿ ಹುದ್ದೆಗಳು
ESIC recruitment: ಅರ್ಜಿ ಸಲ್ಲಿಸುವುದು ಹೇಗೆ
ಅಭ್ಯರ್ಥಿಗಳು ESIC ಅಧಿಕೃತ ವೆಬ್‌ಸೈಟ್ https://www.esic.nic.in ನಲ್ಲಿ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ESIC ನೇಮಕಾತಿ 2022 ರ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಬಹುದು.