ಶಿವಮೊಗ್ಗ: ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ವತಿಯಿಂದ ನಿಧಿ ಆಪ್ಕೆ ನಿಕಟ್ 2.0 ಕಾರ್ಯಕ್ರಮವನ್ನು ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಸೆ.27 ರಂದು ಆಯೋಜಿಸಲಾಗಿದೆ.
ಸೆ.27 ರಂದು ಶಿವಮೊಗ್ಗ ಜಿಲ್ಲೆಯಲ್ಲಿ ಸೇಂಟ್ ಜೋಸೆಫ್ ಶಾಲೆ, ಮಂಕಾಳಲೆ, ಸಾಗರ, ಶಿವಮೊಗ್ಗ ಇಲ್ಲಿ ಹಾಗೂ ದಾವಣಗೆರೆ ಜಿಲ್ಲೆಯಲ್ಲಿ ಹೋಟೆಲ್ ಪೂಜಾ ಇಂಟರ್ನ್ಯಾಷನಲ್, 1ನೇ ಮಹಡಿ, ದೇವರಾಜ ಅರಸ್ ಬಡಾವಣೆ, ಹಳೆ ಪಿಬಿ ರಸ್ತೆ ದಾವಣಗೆರೆ ಇಲ್ಲಿ ಕಾರ್ಯಕ್ರಮ ನಡೆಯಲಿದೆ.
ಉದ್ಯೋಗದಾತರು ಮತ್ತು ಉದ್ಯೋಗಿಗಳಿಗೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆ ಹಾಗೂ ಪಿಂಚಣಿದಾರರಿಗೆ ಮಧ್ಯಾಹ್ನ 2.30 ರಿಂದ ಸಂಜೆ 4 ಗಂಟೆವರೆಗೆ ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಾದೇಶಿಕ ಭವಿಷ್ಯ ನಿಧಿ ಕಮಿಷನರ್ II ತಿಳಿಸಿದ್ದಾರೆ.
ಸರ್ವಸದಸ್ಯರ ಸಭೆ
ಶಿವಮೊಗ್ಗ : ಕಂದಾಯ ಇಲಾಖಾ ನೌಕರರ ವಸತಿ ಸಹಕಾರ ಸಂಘವು ಸೆ. 24 ರಂದು ಬೆ.11.25ಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಸಹಕಾರ ಸಂಘ ಹಾಗೂ ಜಿಲ್ಲಾ ನಿವೃತ ನೌಕರರ ಸಂಘದ 1ನೇ ಮಹಡಿಯ ಸ್ಕಿಫ್ಟ್ ಸಭಾಂಗಣದಲ್ಲಿ ಸಂಗದ ಅಧ್ಯಕ್ಷ ಟಿ. ಮಂಜಪ್ಪರವರ ಅಧ್ಯಕ್ಷತೆಯಲ್ಲಿ 2022-23ನೇ ಸಾಲಿನ ಸರ್ವಸದಸ್ಯರ ಸಭೆಯನ್ನು ಏರ್ಪಡಿಸಿದೆ.
ಸಂಘದ ಸದಸ್ಯರೆಲ್ಲರೂ ಸಮಯಕ್ಕೆ ಸರಿಯಾಗಿ ಸಭೆಗೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಂಘದ ಸಿಇಓ ಬಿ.ಡಿ. ದಾನಪ್ಪ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಮಹಿಳಾ ಮೀಸಲಾತಿ ಮಸೂದೆ ಮಂಡನೆ : ದೇವೇಗೌಡರ ಕನಸಿಗೆ ಮರುಜೀವ ನೀಡಿದ ಮೋದಿ : ಎಚ್.ಡಿ.ಕೆ
‘ಇದು ನಮ್ಮದು, ಇದು ನಮ್ಮದು’ : ಮಹಿಳಾ ಮೀಸಲಾತಿ ಮಸೂದೆ ಕುರಿತು ‘ಸೋನಿಯಾ ಗಾಂಧಿ’ ಪ್ರತಿಕ್ರಿಯೆ