ನಾಳೆಯಿಂದ ‘ಚಂದ್ರಗುತ್ತಿ ಜಾತ್ರೆ’ ಆರಂಭ: ‘ಸಚಿವ ಮಧು ಬಂಗಾರಪ್ಪ’ಗೆ ‘ಇಓ ಪ್ರಮೀಳಾ ಕುಮಾರಿ’ ಆಹ್ವಾನ

ಶಿವಮೊಗ್ಗ: ನಾಳೆಯಿಂದ ಸೊರಬ ತಾಲ್ಲೂಕಿನ ಪ್ರಸಿದ್ಧ ಚಂದ್ರಗುತ್ತಿ ರೇಣುಕಾಂಬಾ ದೇವಿ ಜಾತ್ರಾ ಮಹೋತ್ಸವ ಆರಂಭಗೊಳ್ಳಲಿದೆ. ಈ ಜಾತ್ರಾ ಮಹೋತ್ಸವಕ್ಕೆ ಆಗಮಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್ ಬಂಗಾರಪ್ಪ ಅವರನ್ನು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಜಿ.ಕೆ ಪ್ರಮೀಳಾ ಕುಮಾರಿ ಅವರು ಆಹ್ವಾನಿಸಿದರು. ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಿಯ ಜಾತ್ರೆ ಜಿಲ್ಲೆಯಷ್ಟೇ ಅಲ್ಲದೇ ಹೊರ ಜಿಲ್ಲೆಯಲ್ಲೂ ಪ್ರಸಿದ್ಧಿಯಾದಂತದ್ದು. ಇಂತಹ ಜಾತ್ರೆ ಮಾರ್ಚ್.5ರ ನಾಳೆಯಿಂದ, ಮಾರ್ಚ್.10ರವರೆಗೆ ಐದು ದಿನಗಳ ಕಾಲ ನಡೆಯಲಿದೆ. ಈಗಾಗಲೇ ತಾಲ್ಲೂಕು ಆಡಳಿತದಿಂದ … Continue reading ನಾಳೆಯಿಂದ ‘ಚಂದ್ರಗುತ್ತಿ ಜಾತ್ರೆ’ ಆರಂಭ: ‘ಸಚಿವ ಮಧು ಬಂಗಾರಪ್ಪ’ಗೆ ‘ಇಓ ಪ್ರಮೀಳಾ ಕುಮಾರಿ’ ಆಹ್ವಾನ