ಮೈಸೂರು  :  ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2022 ಹಿನ್ನೆಲೆ ಇಂದು ಅರಮನೆಯಲ್ಲಿ ಸಿಂಹಾಸನಗಳನ್ನು ಒಳಾಂಗಣದಲ್ಲಿ ಜೋಡಣೆ ಕಾರ್ಯ ನಡೆಸಲಾಗುತ್ತಿದೆ.

BREAKING NEWS : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆರೋಗ್ಯದಲ್ಲಿ ದಿಢೀರ್‌ ಏರುಪೇರು | D.K.Shivakumar

ನವರಾತ್ರಿ ವೇಳೆ ಸಿಂಹಾಸನದ ಮೇಲೆ ಕೂತು ದರ್ಬಾರ್‌ ನಡೆಸುತ್ತಾರೆ. ಇಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ  ಸಾಂಪ್ರದಾಯಿಕವಾಗಿ ರಾಜವಂಶಸ್ಥರ ಸಮ್ಮುಖದಲ್ಲಿ ಸಿಂಹಾಸನ ಜೋಡಣೆ ಕಾರ್ಯನಡೆಯುತ್ತದೆ. ಇಂದು ಬೆಳಗ್ಗೆ10ರಿಂದ ಮಧ್ಯಾಹ್ನ 1ಗಂಟೆಯವರೆಗೆ ಅರಮನೆ ಪ್ರವೇಶಕ್ಕೆ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗುವುದು.

BREAKING NEWS : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆರೋಗ್ಯದಲ್ಲಿ ದಿಢೀರ್‌ ಏರುಪೇರು | D.K.Shivakumar

ಮೈಸೂರು ದಸರಾ ಪ್ರವಾಸಿಗರ ಗಮನಕ್ಕೆ :

ಇನ್ನೂ ದಸರಾ ಮಹೋತ್ಸವದ ಅಂಗವಾಗಿ ಪ್ರವಾಸಿಗರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ, ವತಿಯಿಂದ ಏಕೀಕೃತ ಟಿಕೆಟ್ (ಕಾಂಬೋ ಟಿಕೆಟ್) ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.

ಏಕೀಕೃತ ಟಿಕೆಟ್ ಪಡೆಯುವುದರಿಂದ ಪ್ರವಾಸಿಗರು ಹಾಗೂ ಸಾರ್ವಜನಿಕರು 5 ಪ್ರವಾಸಿ ಸ್ಥಳಗಳಾದ ಮೈಸೂರು ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ, ರೈಲ್ವೆ ಮ್ಯೂಸಿಯಂ ಹಾಗೂ ಕೆ ಆರ್ ಎಸ್ ಬೃಂದಾವನಕ್ಕೆ ತೆರಳಬಹುದು. ಪ್ರವಾಸಿಗರು ಈ ಏಕೀಕೃತ ಟಿಕೆಟ್ ಪಡೆಯುವುದರಿಂದ, 5 ಸ್ಥಳಗಳಲ್ಲಿ ಟಿಕೆಟ್​ಗಾಗಿ ಸರದಿ ಸಾಲಿನಲ್ಲಿ ನಿಲ್ಲುವ ಅಗತ್ಯವಿರುವುದಿಲ್ಲ.

BREAKING NEWS : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆರೋಗ್ಯದಲ್ಲಿ ದಿಢೀರ್‌ ಏರುಪೇರು | D.K.Shivakumar

ಏಕೀಕೃತ ಟಿಕೆಟ್​​ ವ್ಯವಸ್ಥೆಯು 2022ರ ಸೆಪ್ಟಂಬರ್ 20ರಂದು ಆರಂಭಗೊಂಡು, ಅಕ್ಟೋಬರ್ 05ರ ವರೆಗೆ ಚಾಲ್ತಿಯಲ್ಲಿರುತ್ತದೆ. ಒಂದು ಟಿಕೆಟ್ ಬೆಲೆ 500 ರೂ.ಗಳಾಗಿದ್ದು, ಮಕ್ಕಳಿಗೆ ಟಿಕೆಟ್ ದರವನ್ನು 250 ರೂ.ಗಳಿಗೆ ನಿಗದಿಪಡಿಸಲಾಗಿದೆ.

BREAKING NEWS : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆರೋಗ್ಯದಲ್ಲಿ ದಿಢೀರ್‌ ಏರುಪೇರು | D.K.Shivakumar

ಏಕೀಕೃತ ಟಿಕೆಟ್​ನನ್ನು ಪ್ರವಾಸಿ ಇಲಾಖೆಯ ವತಿಯಿಂದ ಮಾರಾಟ ಮಾಡಲಾಗುತ್ತಿದೆ. ಕೆಎಸ್​ಟಿಡಿಇ ಹೋಟೆಲ್ ಹಾಗೂ ಟ್ರಾವೆಲ್ಸ್ ವಿಭಾಗದಲ್ಲಿ, ಕೆ ಎಸ್ಆರ್​​ಟಿಸಿ ಸಬರ್ ಹಾಗೂ ನಗರ ಬಸ್ ನಿಲ್ದಾಣಗಳಲ್ಲಿ, ರೈಲ್ವೆ ನಿಲ್ದಾಣದ 02 ಕಡೆ, ಚಾ.ಬೆಟ್ಟ, ಮೃಗಾಲಯ, ಕೆಆರ್​​ಎಸ್, ಅರಮನೆ ಹಾಗೂ ಮೈಸೂರು ನಗರದ ಪ್ರಮುಖ ಹೋಟೆಲ್​ಗಳಲ್ಲಿ ಟಿಕೆಟ್ ಲಭ್ಯವಿರಲಿದೆ. ಸಾರ್ವಜನಿಕರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

BREAKING NEWS : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆರೋಗ್ಯದಲ್ಲಿ ದಿಢೀರ್‌ ಏರುಪೇರು | D.K.Shivakumar

Share.
Exit mobile version