‘ಶತ್ರುಗಳು’ ನಮ್ಮ ಜೊತೆಯೇ ಇರುತ್ತಾರೆ, ಗೊತ್ತಾಗಲ್ಲ ಅಷ್ಟೆ : ಸ್ವಪಕ್ಷಿಯ ವಿರೋಧಿಗಳಿಗೆ ಟಾಂಗ್ ಕೊಟ್ಟ ಜಮೀರ್ ಅಹ್ಮದ್

ಹಾವೇರಿ : ಸಂಗೊಳ್ಳಿ ರಾಯಣ್ಣನನ್ನು ನಮ್ಮವರೇ ಹೇಗೆ ಬ್ರಿಟಿಷರಿಗೆ ಹಿಡಿದು ಕೊಟ್ಟರೊ ಅದೇ ರೀತಿ ನಮ್ಮ ಸುತ್ತಮುತ್ತಲೇ ನಮ್ಮವರೇ ನಮಗೆ ಶತ್ರುಗಳಾಗಿರುತ್ತಾರೆ. ಆದರೆ ಅದು ನಮಗೆ ಗೊತ್ತಾಗುವುದಿಲ್ಲ ಎಂದು ಸಚಿವ ಜಮೀರ್ ಅಹ್ಮದ್ ಸಿಎಂ ಸಿದ್ದರಾಮಯ್ಯ ಜೊತೆಗೆ ಇದ್ದು ಅವರ ವಿರುದ್ಧ ಪಿತೂರಿ ನಡೆಸುತ್ತಿರುವವರಿಗೆ ತಿರುಗೇಟು ನೀಡಿದರು. ಇಂದು ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮನುಷ್ಯನಿಗೆ ಶತ್ರುಗಳಿರುವುದು ಸಹಜ. ಎಲ್ಲರಿಗೂ ಶತ್ರುಗಳಿರುತ್ತಾರೆ. ನಮ್ಮ ಜೊತೆಯೇ ಇರುತ್ತಾರೆ. ಆದ್ರೆ ಯಾರು ಶತ್ರು ಎಂಬುದು ಹೇಗೆ ಗೊತ್ತಾಗುತ್ತದೆ? ಯಾರು ನಿಜವಾದ … Continue reading ‘ಶತ್ರುಗಳು’ ನಮ್ಮ ಜೊತೆಯೇ ಇರುತ್ತಾರೆ, ಗೊತ್ತಾಗಲ್ಲ ಅಷ್ಟೆ : ಸ್ವಪಕ್ಷಿಯ ವಿರೋಧಿಗಳಿಗೆ ಟಾಂಗ್ ಕೊಟ್ಟ ಜಮೀರ್ ಅಹ್ಮದ್