ದೆಹಲಿ: ಭಾರತದಲ್ಲಿ 2021 ರಲ್ಲಿ ರೈಲ್ವೇ ಕ್ರಾಸಿಂಗ್ ಅಪಘಾತಗಳಲ್ಲಿ ಪ್ರತಿದಿನ ಸುಮಾರು ಐದು ಮಂದಿ ಸಾವನ್ನಪ್ಪಿದ್ದಾರೆ. ಇವರಲ್ಲಿ ಉತ್ತರ ಪ್ರದೇಶದವರೇ ಇಬ್ಬರಾಗಿದ್ದಾರೆ ಎಂದು ಅಧ್ಯನ ವರದಿಯೊಂದು ತಿಳಿಸಿದೆ.

ವರದಿಯ ಪ್ರಕಾರ, ಕಳೆದ ವರ್ಷ ದೇಶದಲ್ಲಿ 1,550 ರೈಲ್ವೆ ಕ್ರಾಸಿಂಗ್ ಅಪಘಾತಗಳು ವರದಿಯಾಗಿದ್ದು, ಘಟನೆಯಿಂದ ಒಟ್ಟು 1,807 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ಉತ್ತರ ಪ್ರದೇಶವೊಂದರಲ್ಲೇ 575 ಅಪಘಾತಗಳು ಸಂಭವಿಸಿದ್ದು, 875 ಜನರು ಸಾವನ್ನಪ್ಪಿದ್ದಾರೆ. ಸಾವಿಗೀಡಾದವರಲ್ಲಿ 1,493 ಪುರುಷರು ಮತ್ತು 314 ಮಹಿಳೆಯರು ಸೇರಿದ್ದಾರೆ.

 

37.1% ರಷ್ಟು ರೈಲ್ವೇ ಕ್ರಾಸಿಂಗ್ ಅಪಘಾತಗಳು ಉತ್ತರ ಪ್ರದೇಶದಲ್ಲಿ ಸಂಭವಿಸಿದ್ದು ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ ಮಧ್ಯಪ್ರದೇಶ (12.6%) ಮತ್ತು ಪಶ್ಚಿಮ ಬಂಗಾಳ (10.6%) ಇದೆ. ಮಧ್ಯಪ್ರದೇಶ ಮತ್ತು ಬಿಹಾರ ರಾಜ್ಯಗಳು ರೈಲ್ವೇ ಕ್ರಾಸಿಂಗ್ ಅಪಘಾತಗಳಲ್ಲಿ ಅತಿ ಹೆಚ್ಚು ಸಾವುಗಳನ್ನು ವರದಿ ಮಾಡಿವೆ.

ದೇಶದಲ್ಲಿ 2021 ರಲ್ಲಿ ರೈಲ್ವೆ ಕ್ರಾಸಿಂಗ್ ಅಪಘಾತದಲ್ಲಿ 1,807 ಮಂದಿ ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದಲ್ಲಿ 875, ಮಧ್ಯಪ್ರದೇಶದಲ್ಲಿ 196 ಮತ್ತು ಬಿಹಾರದಲ್ಲಿ 163 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.

2021 ರಲ್ಲಿ ವರದಿಯಾದ ರೈಲ್ವೇ ಕ್ರಾಸಿಂಗ್ ಅಪಘಾತದ ಸಾವುಗಳು 2017 ರಿಂದ ಅತಿ ಹೆಚ್ಚಾಗಿದೆ.

BIG NEWS: ಇವಿಎ ಯಂತ್ರಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಜಾ ಮಾಡಿ ದಂಡ ಹಾಕಿದ ಸುಪ್ರಿಂಕೋರ್ಟ್‌,

BREAKING NEWS : ಮಲ್ಲಿಕಾರ್ಜುನ ಖರ್ಗೆ ಹಾದಿ ಸುಗಮ : ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆಯಿಂದ ಹಿಂದೆ ಸರಿದ ದಿಗ್ವಿಜಯ್ ಸಿಂಗ್ |Congress President Poll

ವಾಯುಮಾಲಿನ್ಯವೂ ʻಕೋವಿಡ್ ರೋಗಿಗಳ ಅಪಾಯʼ ಶೇ.30 ರಷ್ಟು ಹೆಚ್ಚಿಸಿದೆ : ಅಧ್ಯಯನದಲ್ಲಿ ಬಹಿರಂಗ | Air Pollution

Share.
Exit mobile version