ಕೆ ಎನ್ ಎನ್ ನ್ಯೂಸ್ ಡೆಸ್ಕ್ : ಕಳೆದ ತಿಂಗಳು ಆಕಸ್ಮಿಕವಾಗಿ ಉದ್ಯೋಗಿಗೆ ಕಂಪನಿಯು 286 ಪಟ್ಟು ಸಂಬಳ ಪಾವತಿಸಿತ್ತು. ಪಾವತಿಸಿದ ಹೆಚ್ಚುವರಿ ಹಣವನ್ನು ಹಿಂದಿರುಗಿಸುವುದಾಗಿ ಭರವಸೆ ನೀಡಿದ ಉದ್ಯೋಗಿ ರಾಜೀನಾಮೆ ನೀಡಿ ನಾಪತ್ತೆಯಾಗಿರುವ ಘಟನೆ ದಕ್ಷಿಣ ಅಮೇರಿಕದ ಚಿಲಿಯಲ್ಲಿ ನಡೆದಿದೆ.
ಸ್ಥಳೀಯ ಮಾಧ್ಯಮಗಳ ಪ್ರಕಾರ, ಚಿಲಿಯಲ್ಲಿ ಕೋಲ್ಡ್ ಕಟ್‌ಗಳ ಅತಿದೊಡ್ಡ ಉತ್ಪಾದಕರಲ್ಲಿ ಒಂದಾದ ಕನ್ಸೋರ್ಸಿಯೊ ಇಂಡಸ್ಟ್ರಿಯಲ್ ಡಿ ಅಲಿಮೆಂಟೋಸ್ (ಸಿಯಾಲ್) ನಲ್ಲಿ ಈ ವ್ಯಕ್ತಿ ಕೆಲಸ ಮಾಡುತ್ತಿದ್ದ. ಕಂಪನಿಯು ಆಕಸ್ಮಿಕವಾಗಿ 500,000 ಚಿಲಿಯ ಪೆಸೊಗಳ (ರೂ. 43,000) ಬದಲಿಗೆ 165,398,851 (ರೂ 1.42 ಕೋಟಿ) ಪಾವತಿಸಿದೆ. ಪಾವತಿಯಲ್ಲಿನ ದೋಷವನ್ನು ವರದಿ ಮಾಡಲು ಉದ್ಯೋಗಿ ಮಾನವ ಸಂಪನ್ಮೂಲ ಇಲಾಖೆಯ ಉಪ ವ್ಯವಸ್ಥಾಪಕರನ್ನು ಸಂಪರ್ಕಿಸಿದ್ದರು.
ಕಂಪನಿಯ ಆಡಳಿತ ಮಂಡಳಿಯು ಅವರ ದಾಖಲೆಗಳನ್ನು ಪರಿಶೀಲಿಸಿದೆ ಮತ್ತು ಉದ್ಯೋಗಿಗೆ ಅವರ ಮಾಸಿಕ ವೇತನದ ಸುಮಾರು 286 ಪಟ್ಟು ತಪ್ಪಾಗಿ ಪಾವತಿಸಲಾಗಿದೆ ಎಂದು ದೃಢಪಡಿಸಿತು. ಹೆಚ್ಚುವರಿಯಾಗಿ ಪಾವತಿಸಿದ ಹಣವನ್ನು ಹಿಂದಿರುಗಿಸಲು ಉದ್ಯೋಗಿಯನ್ನು ಕೇಳಲಾಯಿತು. ಉದ್ಯೋಗಿ ತನಗೆ ಹೆಚ್ಚುವರಿಯಾಗಿ ಪಾವತಿಸಿದ ಮೊತ್ತವನ್ನು ಹಿಂದಿರುಗಿಸಲು ತನ್ನ ಬ್ಯಾಂಕ್‌ಗೆ ಹೋಗಲು ಒಪ್ಪಿಕೊಂಡಿದ್ದಾನೆ.
ಕಂಪನಿಯು ಬ್ಯಾಂಕ್‌ನಿಂದ ಮರುಪಾವತಿ ಅಧಿಸೂಚನೆಯನ್ನು ಸ್ವೀಕರಿಸದಿದ್ದಾಗ, ಅವರು ಉದ್ಯೋಗಿಯೊಂದಿಗೆ ಸಂಪರ್ಕದಲ್ಲಿರಲು ಪ್ರಯತ್ನಿಸಿದರು. ಆದರೆ ಅವರ ಸಂದೇಶಗಳಿಗೆ ಉದ್ಯೋಗಿ ಉತ್ತರಿಸಲಿಲ್ಲ. ನಂತ್ರ ಉದ್ಯೋಗಿ ಬ್ಯಾಂಕ್ ಸಂಪರ್ಕಕ್ಕೆ ಬಂದರು. ತಾನು ಅತಿಯಾದ ನಿದ್ದೆ ಮಾಡುತ್ತಿದ್ದೆ. ಕೂಡಲೇ ಬ್ಯಾಂಕ್‌ಗೆ ಭೇಟಿ ನೀಡುವುದಾಗಿ ಹೇಳಿದ್ದಾನೆ. ಆದ್ರೆ, ಅಂದು ಬ್ಯಾಂಕ್‌ಗೆ ಹೋಗಲೇ ಇಲ್ಲ.
ಆದರೆ, ಜೂನ್ 2ರಂದು ಉದ್ಯೋಗಿ ಇದ್ದಕ್ಕಿದ್ದಂತೆ ರಾಜೀನಾಮೆ ನೀಡಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಕಂಪನಿಯು ಉದ್ಯೋಗಿಗೆ ಆಕಸ್ಮಿಕವಾಗಿ ವರ್ಗಾವಣೆ ಮಾಡಿದ ಹಣವನ್ನು ಹಿಂಪಡೆಯಲು ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಂಡಿದೆ.
ʻಪುಟಿನ್ ಒಬ್ಬ ಭಯೋತ್ಪಾದಕ, ವಿಶ್ವಸಂಸ್ಥೆಯಿಂದ ರಷ್ಯಾವನ್ನು ಕೂಡಲೇ ಹೊರಹಾಕಿʼ: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಒತ್ತಾಯ