ನವದೆಹಲಿ: ಭಾರತೀಯ ರಾಜತಾಂತ್ರಿಕರೊಬ್ಬರನ್ನ ಹೊರಹಾಕಿದ ಕೆನಡಾದ ಕ್ರಮಕ್ಕೆ ಭಾರತ ಪ್ರತೀಕಾರವಾಗಿ ಕೆನಡಾ ರಾಜತಾಂತ್ರಿಕರನ್ನ ಹೊರ ಹಾಕಿದೆ. ಕೆಲವೇ ಗಂಟೆಗಳ ನಂತ್ರ ರಾಷ್ಟ್ರ ರಾಜಧಾನಿಯಲ್ಲಿರುವ ಕೆನಡಾ ರಾಯಭಾರ ಕಚೇರಿ ತನ್ನ ಸ್ಥಳೀಯ ಸಿಬ್ಬಂದಿಯನ್ನ ಕಚೇರಿ ತೊರೆಯುವಂತೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ. ಇನ್ನು ಪ್ರಸ್ತುತ ರಾಜತಾಂತ್ರಿಕ ಉದ್ವಿಗ್ನತೆಯನ್ನ ಗಮನದಲ್ಲಿಟ್ಟುಕೊಂಡು ರಾಯಭಾರ ಕಚೇರಿಯಲ್ಲಿ ಸ್ಥಳೀಯವಾಗಿ ತೊಡಗಿರುವ ಸಿಬ್ಬಂದಿಯನ್ನ ತಕ್ಷಣವೇ ಆವರಣ ಖಾಲಿ ಮಾಡುವಂತೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಯಾವುದೇ ಮಾಧ್ಯಮಗಳೊಂದಿಗೆ ಮಾತನಾಡದಂತೆ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಏನನ್ನೂ ಪೋಸ್ಟ್ ಮಾಡದಂತೆ ರಾಯಭಾರ ಕಚೇರಿಯ ಅಧಿಕಾರಿಗಳು ಎಲ್ಲಾ ಉದ್ಯೋಗಿಗಳಿಗೆ ಇಮೇಲ್ ಸಂವಹನದಲ್ಲಿ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಂದ್ಹಾಗೆ, ಸೋಮವಾರ, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಸಂಸತ್ತಿನಲ್ಲಿ ನೀಡಿದ ತುರ್ತು ಹೇಳಿಕೆಯಲ್ಲಿ ಖಲಿಸ್ತಾನ್ ಪರ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತ ಸರ್ಕಾರ ಭಾಗಿಯಾಗಿದೆ ಎಂದು ಆರೋಪಿಸಿದ್ದರು.
ಜೂನ್ 18 ರಂದು ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿರುವ ಸಿಖ್ ಸಾಂಸ್ಕೃತಿಕ ಕೇಂದ್ರದ ಹೊರಗೆ ನಿಜ್ಜರ್’ನನ್ನ ಗುಂಡಿಕ್ಕಿ ಕೊಲ್ಲಲಾಗಿದೆ.
ಖಲಿಸ್ತಾನ್ ಟೈಗರ್ ಫೋರ್ಸ್ ಮುಖ್ಯಸ್ಥ ನಿಜ್ಜರ್ ಹತ್ಯೆ ಮತ್ತು ಭಾರತೀಯ ಸರ್ಕಾರಿ ಏಜೆಂಟರ ನಡುವಿನ ಸಂಭಾವ್ಯ ಸಂಪರ್ಕದ ವಿಶ್ವಾಸಾರ್ಹ ಆರೋಪಗಳನ್ನ ಕೆನಡಾದ ಭದ್ರತಾ ಸಂಸ್ಥೆಗಳು ಸಕ್ರಿಯವಾಗಿ ಅನುಸರಿಸುತ್ತಿವೆ ಎಂದು ಟ್ರುಡೊ ಹೇಳಿದ್ದಾರೆ.
‘ಭಾರತವನ್ನ ಪ್ರಚೋದಿಸಲು ಬಯಸೋದಿಲ್ಲ’ : ಮೋದಿ ಸರ್ಕಾರದ ಕಠಿಣ ನಿಲುವಿನ ನಂತ್ರ ‘ಟ್ರುಡೊ’ ಸಾಫ್ಟ್ ಮಾತು
‘ಮಹಿಳಾ ಮೀಸಲಾತಿ ಯುಪಿಎ ಸರ್ಕಾರದ ಕನಸು ವಿರೋಧವಿದ್ದ ಕಾರಣ ಅನುಮೋದನೆ ಸಿಗಲಿಲ್ಲ’ : ಸಚಿವ ಕೆ.ಎಚ್ ಮುನಿಯಪ್ಪ
ಭಾರತ -ಕೆನಡಾ ನಡುವೆ ರಾಜತಾಂತ್ರಿಕತೆ ಉದ್ವಿಗ್ನ : ಗಾಯಕ ‘ಶುಭ್’ ಜೊತೆಗಿನ ‘ಬೋಟ್’ ಒಪ್ಪಂದ ರದ್ದು