ಸ್ಯಾನ್ ಫ್ರಾನ್ಸಿಸ್ಕೋ: ಬಿಲಿಯನೇರ್ ಎಲಾನ್ ಮಸ್ಕ್(Elon Musk) ಅವರು ಟ್ವಿಟರ್(Twitter)ಅನ್ನು ಖರೀದಿಸಿ, ಅದರ ಮಾಲೀಕರಾದರೆ ಕಂಪನಿಯ ಶೇ. 75ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲು ಯೋಜಿಸಿದ್ದಾರೆ. ಈ ಬಗ್ಗೆ ಎಲಾನ್ ಮಸ್ಕ್ ಉದ್ದೇಶಿತ ಹೂಡಿಕೆದಾರರ ಬಳಿ ಚರ್ಚಿಸಿದ್ದಾರೆ ಎಂದು ಸಂದರ್ಶನಗಳು ಮತ್ತು ದಾಖಲೆಗಳನ್ನು ಉಲ್ಲೇಖಿಸಿ ದಿ ವಾಷಿಂಗ್ಟನ್ ಪೋಸ್ಟ್ ಗುರುವಾರ ವರದಿ ಮಾಡಿದೆ.

ವರದಿಯ ಪ್ರಕಾರ, ಯಾರೇ ಕಂಪನಿಯ ಮಾಲೀಕರಾದರೂ ಮುಂಬರುವ ತಿಂಗಳುಗಳಲ್ಲಿ ಉದ್ಯೋಗ ಕಡಿತವನ್ನು ನಿರೀಕ್ಷಿಸಲಾಗಿದೆ. ಟ್ವಿಟರ್‌ನ ಪ್ರಸ್ತುತ ನಿರ್ವಹಣೆಯು ಮುಂದಿನ ವರ್ಷದ ಅಂತ್ಯದ ವೇಳೆಗೆ ಕಂಪನಿಯ ವೇತನದಾರರನ್ನು ಸುಮಾರು $ 800 ಮಿಲಿಯನ್‌ಗೆ ಸರಿದೂಗಿಸಲು ಯೋಜಿಸಿದೆ. ಇದು ಸುಮಾರು ಕಾಲು ಭಾಗದಷ್ಟು ಉದ್ಯೋಗಿಗಳ ನಿರ್ಗಮನವನ್ನು ಸೂಚಿಸುತ್ತದೆ ಎಂದು ವರದಿ ಹೇಳಿದೆ.

ಆದರೆ, ಟ್ವಿಟರ್ ಕಂಪನಿಯ ಮಾನವ ಸಂಪನ್ಮೂಲ ಸಿಬ್ಬಂದಿ ಅವರು ಉದ್ಯೋಗಿಗಳ ಸಾಮೂಹಿಕ ವಜಾಗಳಿಗೆ ಯೋಜಿಸುತ್ತಿಲ್ಲ ಎಂದು ಉದ್ಯೋಗಿಗಳಿಗೆ ತಿಳಿಸಿದ್ದಾರೆ. ಮಸ್ಕ್ ಟ್ವಿಟರ್ ಖರೀದಿಸಲು ಮುಂದಾಗುವ ಮೊದಲು ಉದ್ಯೋಗ ಕಡಿತ ಹಾಗೂ ಮೂಲಸೌಕರ್ಯ ವೆಚ್ಚವನ್ನು ಕಡಿತಗೊಳಿಸಲು ಚಿಂತನೆ ನಡೆಸಿದ್ದರು ಎಂದು ದಾಖಲೆಗಳು ತೋರಿಸಿವೆ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ಕಂಪನಿಯ ಹಲವು ಉದ್ಯೋಗಿಗಳನ್ನು ವಜಾಗೊಳಿಸಬೇಕು ಎಂದು ಮಸ್ಕ್ ಈ ಹಿಂದೆ ಕೂಡ ಹೇಳಿದ್ದರು. ಆದರೆ ನಿರ್ದಿಷ್ಟ ಸಂಖ್ಯೆಯನ್ನು ಉಲ್ಲೇಖಿಸಿರಲಿಲ್ಲ. ಸಾರ್ವಜನಿಕವಾಗಿಯೂ ಹೇಳಿಕೆ ನೀಡಿರಲಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ ಟ್ವಿಟರ್ ಹಾಗೂ ಎಲಾನ್ ಮಸ್ಕ್ ಅವರಿಂದ ಪ್ರತಿಕ್ರಿಯೆ ಕೋರಿ ಸಂದೇಶ ಕಳುಹಿಸಲಾಗಿತ್ತು. ಆದ್ರೆ, ಅವರು ರಾಯಿಟರ್ಸ್ ವಿನಂತಿಗೆ ಇದಕ್ಕೆ ತಕ್ಷಣದ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿ ಹೇಳಿದೆ.

WATCH VIDEO: ಸಾಂಪ್ರದಾಯಿಕ ʻಪಹಾಡಿʼ ಉಡುಪು ಧರಿಸಿ ʻಕೇದಾರನಾಥʼ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ

BIGG NEWS : ಭಕ್ತಾಧಿಗಳ ಗಮನಕ್ಕೆ : ದೀಪಾವಳಿ ಹಬ್ಬದಂದು ʼತಿರುಪತಿ ತಿಮ್ಮಪ್ಪನ ದರ್ಶನಕ್ಕೆ ʼಅವಕಾಶವಿಲ್ಲ| Tirupati temple

BIGG NEWS: ಚಾಮರಾಜನಗರದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆ; ಮೂರು ಸುತ್ತು ಗುಂಡು ಹಾರಿಸಿ ಗೌರವ ಸೂಚನೆ

 

Share.
Exit mobile version