ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ಎಂಟು ಸದಸ್ಯರ ಭಾರತೀಯ ತಂಡವು ನಾಳೆಯಿಂದ ಗ್ರೀಸ್‌ನ ಹೆರಾಕ್ಲಿಯನ್‌ನಲ್ಲಿ ಆರಂಭವಾಗಲಿರುವ ಜೂನಿಯರ್ ಪುರುಷ ಮತ್ತು ಮಹಿಳೆಯರ ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಲಿದೆ. ತಂಡದಲ್ಲಿ ಆರು ಮಹಿಳೆಯರು ಮತ್ತು ಇಬ್ಬರು ಪುರುಷರಿದ್ದಾರೆ.
ಭಾರತೀಯ ವೇಟ್‌ಲಿಫ್ಟಿಂಗ್ ಫೆಡರೇಶನ್‌ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಮ್ಯಾನೇಜರ್ ಅಬ್ರಹಾಂ ಕಾಯಾ ಟೆಚಿ ಮತ್ತು ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಹಂಸ ಶರ್ಮಾ ಇವರ ಜೊತೆಗೆ ನಾಲ್ಕು ಜನ ತರಬೇತುದಾರರು ಸಹ ಗ್ರೀಸ್ಗೆ ತೆರಳಿದ್ದಾರೆ.
ಮಹಿಳೆಯರ 45 ಕೆಜಿ ವಿಭಾಗದಲ್ಲಿ ಅಂಜಲಿ ಪಟೇಲ್ ಮತ್ತು ಹರ್ಷದಾ ಶರದ್ ಗರುಡ್ ಸ್ಪರ್ಧಿಸಲಿದ್ದು, ಸೋಮವಾರ ಸ್ಪರ್ಧೆ ಇದೆ. ಕಳೆದ ವರ್ಷದಲ್ಲಿ 73 ಕೆಜಿ ವಿಭಾಗದಲ್ಲಿ ಅಚಿಂತಾ ಶೆಯುಲಿ ಏಳು ರಾಷ್ಟ್ರೀಯ ದಾಖಲೆಗಳನ್ನು ಮುರಿದು ಬೆಳ್ಳಿ ಪದಕ ಗೆದ್ದಿದ್ದರು.
ನ್ಯಾಯಾಲಯಗಳಲ್ಲಿ ಸ್ಥಳೀಯ ಭಾಷೆಗಳ ಬಳಕೆಗೆ ಪ್ರಧಾನಿ ನರೇಂದ್ರ ಮೋದಿಯಿಂದ ಕರೆ
ತಂಡದ ಮಾಹಿತಿ :
ಮಹಿಳೆಯರು- ಅಂಜಲಿ ಪಟೇಲ್ (45 ಕೆಜಿ), ಹರ್ಷದಾ ಶರದ್ ಗರುಡ್ (45 ಕೆಜಿ), ಜ್ಞಾನೇಶ್ವರಿ ಯಾದವ್ (49 ಕೆಜಿ), ವಿ. ರಿತಿಕಾ (49 ಕೆಜಿ), ಶ್ರಬಾನಿ ದಾಸ್ (55 ಕೆಜಿ), ಮೈಬಮ್ ಮಾರ್ಟಿನಾ ದೇವಿ (+87 ಕೆಜಿ)
ಪುರುಷರು- ಟಿ.ಮಾಧವನ್ (61ಕೆಜಿ), ಮುನಾ ನಾಯಕ್ (61ಕೆಜಿ)