ಮುಂಬೈ: ಶಿವಸೇನೆಯ ಮುಖಂಡ ಸಂಜಯ್ ರಾವತ್ ಅವರ ನಿವಾಸದ ಮೇಲೆ ಇಂದು ಇಡಿ ಅಧಿಕಾರಿಗಳು ಭೂ ಹಗರಣ ಪ್ರಕರಣದಲ್ಲಿ ದಾಳಿ ನಡೆಸಿದ್ದರು. ಈ ದಾಳಿಯ ಬಳಿಕ ಅವರನ್ನು ವಶಕ್ಕೂ ಪಡೆದಿದ್ದರು. ಇದೀಗ ಅವರ ನಿವಾಸದಲ್ಲಿ 11.50 ಲಕ್ಷ ರೂ ಲೆಕ್ಕಕ್ಕೆ ಸಿಗದಂತ ಹಣ ಪತ್ತೆಯಾಗಿರೋದಾಗಿ ತಿಳಿದು ಬಂದಿದೆ.

BIG BREAKING NEWS: ಭಾರತದಲ್ಲಿ ‘ಮಂಕಿಪಾಕ್ಸ್ ಸೋಂಕಿ’ಗೆ ಮೊದಲ ಬಲಿ: ದುಬೈನಿಂದ ಭಾರತಕ್ಕೆ ಬಂದಿದ್ದ ವ್ಯಕ್ತಿ ಸಾವು | Monkeypox Case

ಇಂದು ಮುಂಬೈನಲ್ಲಿರುವಂತ ಶಿವಸೇನೆಯ ಮುಖಂಡ ಸಂಜಯ್ ರಾವತ್ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಭೂಹಗರಣ ಪ್ರಕರಣದಲ್ಲಿ ಈ ದಾಳಿಯನ್ನು ನಡೆಸಲಾಗಿತ್ತು. ದಾಳಿಯ ಬಳಿಕ ಅವರನ್ನು ಬಂಧಿಸಿದ್ದರು.

BREAKING NEWS: ತುಮಕೂರು, ಭಟ್ಕಳದಲ್ಲಿ ಎನ್ಐಎ ವಶಕ್ಕೆ ಪಡೆದಿದ್ದ ಶಂಕಿತ ಉಗ್ರರು ಬಿಡುಗಡೆ

ಈ ಬಗ್ಗೆ ಸಂಜಯ್ ರಾವತ್ ಪರ ವಕೀಲ ವಿಕ್ರಾಂತ್ ಸಬ್ ಮಾಹಿತಿ ನೀಡಿ, ನಾವು ಹೊಸ ಸಮನ್ಸ್ ಸ್ವೀಕರಿಸಿದ್ದೇವೆ, ಸಂಜಯ್ ರಾವತ್ ಅವರನ್ನು ವಿಚಾರಣೆಗೆ ಕರೆತರಲಾಗಿದೆ. ಅವರು (ಇಡಿ) ಈಗಾಗಲೇ ಅವರು ಮುಖ್ಯವೆಂದು ಭಾವಿಸಿದ ದಾಖಲೆಗಳನ್ನು ತೆಗೆದುಕೊಂಡಿದ್ದಾರೆ. ಕೆಲವು ಆಸ್ತಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ, ಪಾತ್ರಾ ಚಾಲ್ಗೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಅವರು ತೆಗೆದುಕೊಂಡಿಲ್ಲ ಎಂದು ಹೇಳಿದ್ದರು.

BREAKING NEWS: ಕಾಮನ್ವೆಲ್ತ್ ಗೇಮ್ಸ್ 2022: ಟಿ20ಐ ಗ್ರೂಪ್ ಹಂತದಲ್ಲಿ ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

ಆದ್ರೇ.. ಶಿವಸೇನೆ ಮುಖಂಡ ಸಂಜಯ್ ರಾವತ್ ನಿವಾಸದ ಮೇಲೆ ಇಡಿ ಅಧಿಕಾರಿಗಳ ದಾಳಿಯ ಸಂದರ್ಭದಲ್ಲಿ ಅವರ ಮನೆಯಲ್ಲಿ 11.50 ಲಕ್ಷ ಹಣ ಸಿಕ್ಕಿರೋದಾಗಿ ತಿಳಿದು ಬಂದಿದೆ. ಇದಕ್ಕೆ ಯಾವುದೇ ದಾಖಲೆ ಕೂಡ ನೀಡಿಲ್ಲ ಎಂದು ಹೇಳಲಾಗುತ್ತಿದೆ.

Share.
Exit mobile version