ನವದೆಹಲಿ: ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ (ಎಎಪಿ) ಮಾಜಿ ಅಭ್ಯರ್ಥಿ ದೀಪಕ್ ಸಿಂಗ್ಲಾ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಬುಧವಾರ ದಾಳಿ ನಡೆಸಿದೆ.

ದೀಪಕ್ ಸಿಂಗ್ಲಾ ಪೂರ್ವ ದೆಹಲಿಯ ಪ್ರಸಿದ್ಧ ಸಿಹಿತಿಂಡಿ ಅಂಗಡಿಯಾದ ಸಿಂಗ್ಲಾ ಸ್ವೀಟ್ಸ್ನ ಮಾಲೀಕರಾಗಿದ್ದಾರೆ. ಮಧು ವಿಹಾರ್ ನಲ್ಲಿರುವ ದೀಪಕ್ ಸಿಂಗ್ಲಾ ಅವರ ಮನೆ ಮತ್ತು ಅಂಗಡಿ ಸೇರಿದಂತೆ ಹಲವು ಸ್ಥಳಗಳಲ್ಲಿ ಇಡಿ ದಾಳಿ ನಡೆಸಿದೆ.

ಎಎಪಿ ನಾಯಕನ ಮನೆ ಸೇರಿದಂತೆ ದೆಹಲಿ-ಎನ್ಸಿಆರ್ನ ಅನೇಕ ಸ್ಥಳಗಳಲ್ಲಿ ಇಡಿ ದಾಳಿಗಳು ನಡೆಯುತ್ತಿವೆ. ದೀಪಕ್ ಸಿಂಗ್ಲಾ ಅವರು ವಿಶ್ವಾಸ್ ನಗರದಿಂದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿದ್ದರು.

ದೀಪಕ್ ಸಿಂಗ್ಲಾ ಅವರು ಆಮ್ ಆದ್ಮಿ ಪಕ್ಷದ ಗೋವಾ ಉಸ್ತುವಾರಿಯಾಗಿದ್ದಾರೆ. ಗೋವಾ ಚುನಾವಣೆಗೆ ಅಬಕಾರಿ ಹಗರಣದಿಂದ ಹಣವನ್ನು ಬೇರೆಡೆಗೆ ತಿರುಗಿಸಿದ ಬಗ್ಗೆ ಇಡಿ ತನಿಖೆ ನಡೆಸುತ್ತಿದೆ. ಹಗರಣದಿಂದ ಪಡೆದ 45 ಕೋಟಿ ರೂ.ಗಳನ್ನು ಗೋವಾ ವಿಧಾನಸಭಾ ಚುನಾವಣೆಯಲ್ಲಿ ಖರ್ಚು ಮಾಡಲಾಗಿದೆ ಎಂದು ಇಡಿ ಆರೋಪಿಸಿದೆ.

 

Share.
Exit mobile version