ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಇತ್ತೀಚಿನ ದಿನದಲ್ಲಿ ಬಿಪಿ ಮತ್ತು ಶುಗರ್‌ ಇರೋದು ಕಾಮನ್‌ ಆಗಿದೆ. ಹೆಚ್ಚಿನ ಒತ್ತಡದಿಂದ ಬಿಪಿ ಬರುತ್ತದೆ. ಇದು ಅಧಿಕ ರಕ್ತದ ಒತ್ತಡದಿಂದ ಈ ಕಾಯಿಲೇ ಬರುತ್ತದೆ. ಅಂದರೆ ಮಾನಸಿಕವಾಗಿ ಹೆಚ್ಚು ಒತ್ತಡ ಒತ್ತಡಕ್ಕೆ ಒಳಗಾಗಿ, ಟೆನ್ಷನ್ ಮಾಡಿಕೊಳ್ಳುವ ಜನರಲ್ಲಿ ಈ ಕಾಯಿಲೆ ಬಂದು ಬಿಡುತ್ತದೆ.

BREAKING NEWS: ದೆಹಲಿ ಪ್ರವಾಸದ ಬಳಿಕ ನಿಗಮ ಮಂಡಳಿ ನೇಮಕ- ಸಿಎಂ ಬೊಮ್ಮಾಯಿ

 

ಇದನ್ನು ಪ್ರಾರಂಭದಲ್ಲೇ ನಿಯಂತ್ರಣದಲ್ಲಿ ಇಟ್ಟುಕೊಂಡರೆ ಉತ್ತಮ ಒಳ್ಳೆಯದು. ಆಗ ನಿರ್ಲಕ್ಷ್ಯ ಮಾಡಿದ್ರೆ, ಅಪಾಯ ಕಟ್ಟಿಟ್ಟ ಬುತ್ತಿ. ಇನ್ನು ವೈದ್ಯರ ಸಲಹೆಯ ಜೊತೆಗೆ ಮನೆಯಲ್ಲೆ ಕೆಲ ಆಹಾರ ಪದ್ಧತಿಗಳನ್ನ ಅಳವಡಿಸಿಕೊಂಡು ಬಂದ್ರೆ ಎಲ್ಲ ಸರಿ ಹೋಗುತ್ತದೆ. ಇನ್ನು ಎಲ್ಲರ ಮನೆಯಲ್ಲೂ ಹಣ್ಣು ಅಂದರೆ ಸೀಬೆ ಹಣ್ಣು. ಇದು ಎಲ್ಲರಿಗೂ ಇಷ್ಟ .ಆದರೆ ಇದನ್ನು ತಿನ್ನವುದರಿಂದ ಬಹು ಬೇಗ ಶೀತ ಆವರಿಸಿಕೊಳ್ಳುತ್ತದೆ. ಹೀಗಾಗಿ ಜನರು ಇದನ್ನು ತಿನ್ನವುದಕ್ಕೆ ಹಿಂದೇಟು ಹಾಕುತ್ತಾರೆ. ಆದರೆ ಇದು ಬಿಪಿಗೆ ತುಂಬಾ ಒಳ್ಳೆಯದು ಎಂದು ಯಾರಿಗೂ ಗೊತ್ತಿಲ್ಲ.
ಹೌದು ಸೀಬೆ ಹಣ್ಣನ್ನ ದಿನಕ್ಕೆ ಒಂದು ಬಾರಿ ತಿನ್ನುವ ಅಭ್ಯಾಸ ರೂಡಿಸಿಕೊಂಡರೆ, ಈ ಕಾಯಿಲೆಯನ್ನು ತಕ್ಷಣವಾಗಿ ನಿಯಂತ್ರಿಸಬಹುದು. ಇದನ್ನ ಯಾವ ಟೈಂನಲ್ಲಿ ತಿನ್ನ ಬೇಕು ಎಂಬುದುನ್ನ ತಿಳಿದುಕೊಳ್ಳೊಣ
* ಸೀಬೆ ಹಣ್ಣಿನಲ್ಲಿ ಪೊಟ್ಯಾಶಿಯಮ್‌ ಅಂಶಗಳನ್ನ ಒಳಗೊಂಡಿದೆ. ಇದನ್ನು ಪ್ರತಿದಿನ ಊಟದ ಬಳಿಕ ಒಂದೆರಡು ಪೀಸ್‌ ಸೀಬೆ ಹಣ್ಣುನ್ನು ಸೇವನೆ ಮಾಡಬೇಕು.
* ದೇಹದಲ್ಲಿ ಶೇಖರಣೆಗೊಂಡಿರುವ ಸೋಡಿಯಂ ಅಂಶವನ್ನು ಕಡಿಮೆ ಮಾಡಿ ರಕ್ತದ ಒತ್ತಡವನ್ನು ಅತ್ಯಂತ ಪರಿಣಾಮ ಕಾರಿಯಾಗಿ, ನಿಯಂತ್ರಿಸುತ್ತದೆ,
* ಹಣ್ಣಿನಲ್ಲಿ ಅಧಿಕ ಪ್ರಮಾಣದಲ್ಲಿ ಪೊಟ್ಯಾಶಿಯಮ್ ಅಂಶ ಕಂಡು ಬರುವುದರಿಂದ, ಹೃದಯಕ್ಕೆ ಸಂಬಂಧ ಪಟ್ಟ ಕಾಯಿಲೆಗಳು ಮತ್ತು ಅಧಿಕ ರಕ್ತದೊತ್ತಡ ನಿಯಂತ್ರಿಸುತ್ತದೆ.

 

Share.
Exit mobile version